Friday, November 22, 2024
Homeರಾಷ್ಟ್ರೀಯ | Nationalಭಾರತೀಯ ಆರ್ಥಿಕತೆ ಕುರಿತ ಶ್ವೇತಪತ್ರದ ಮುಖ್ಯಾಂಶಗಳು

ಭಾರತೀಯ ಆರ್ಥಿಕತೆ ಕುರಿತ ಶ್ವೇತಪತ್ರದ ಮುಖ್ಯಾಂಶಗಳು

ಯುಪಿಎ ಸರ್ಕಾರವು ಹೆಚ್ಚು ಸುಧಾರಣೆಗಳಿಗೆ ಸಿದ್ಧವಾಗಿದ್ದ ಆರೋಗ್ಯಕರ ಆರ್ಥಿಕತೆಯನ್ನು ಪಡೆದುಕೊಂಡಿತು, ಆದರೆ ಅದನ್ನು ತನ್ನ 10 ವರ್ಷಗಳಲ್ಲಿ ಅದಕ್ಷವನ್ನಾಗಿ ಮಾಡಿತು.

  • ವಿಪರ್ಯಾಸವೆಂದರೆ, 1991 ರ ಸುಧಾರಣೆಗಳ ಶ್ರೇಯ ತೆಗೆದುಕೊಳ್ಳಲು ವಿಫಲವಾದ ಯುಪಿಎ ನಾಯಕತ್ವವು 2004 ರಲ್ಲಿ ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಕೈಬಿಟ್ಟಿತು.
  • ಇನ್ನೂ ಕೆಟ್ಟದಾಗಿ, 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಯಾವುದೇ ವಿಧಾನದಿಂದಲಾದರೂ ಹೆಚ್ಚಿನ ಆರ್ಥಿಕ ಬೆಳವಣಿಗೆಯನ್ನು ಕಾಪಾಡಿಕೊಳ್ಳುವ ತನ್ನ ಹುಡುಕಾಟದಲ್ಲಿ ಯುಪಿಎ ಸರ್ಕಾರವು ಸ್ಥೂಲ ಆರ್ಥಿಕ ಅಡಿಪಾಯವನ್ನು ತೀವ್ರವಾಗಿ ದುರ್ಬಲಗೊಳಿಸಿತು.
    • ಯುಪಿಎ ಸರ್ಕಾರದಿಂದ ತೀವ್ರವಾಗಿ ದುರ್ಬಲಗೊಂಡ ಅಂತಹ ಒಂದು ಅಡಿಪಾಯವೆಂದರೆ ಬೆಲೆ ಸ್ಥಿರತೆ.
  • ಬ್ಯಾಂಕಿಂಗ್ ಬಿಕ್ಕಟ್ಟು ಯುಪಿಎ ಸರ್ಕಾರದ ಪ್ರಮುಖ ಮತ್ತು ಕುಖ್ಯಾತ ಪರಂಪರೆಗಳಲ್ಲಿ ಒಂದಾಗಿದೆ.
  • 2014 ರಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟು ಬೃಹತ್ ಪ್ರಮಾಣದಲ್ಲಿತ್ತು ಮತ್ತು ಅಪಾಯದಲ್ಲಿದ್ದ ಸಂಪೂರ್ಣ ಮೊತ್ತವು ದೊಡ್ಡದಾಗಿತ್ತು. ಸಾರ್ವಜನಿಕ ವಲಯದ ಬ್ಯಾಂಕ್‌ ಗಳ ಒಟ್ಟು ಮುಂಗಡಗಳು ಮಾರ್ಚ್ 2004 ರಲ್ಲಿ ಕೇವಲ ₹ 6.6 ಲಕ್ಷ ಕೋಟಿಗಳಷ್ಟಿತ್ತು. ಮಾರ್ಚ್ 2012 ರಲ್ಲಿ ಅದು ₹ 39.0 ಲಕ್ಷ ಕೋಟಿಗಳಷ್ಟಿತ್ತು.
  • ಇದಲ್ಲದೆ, ಎಲ್ಲಾ ಸಮಸ್ಯೆಯ ಸಾಲಗಳನ್ನು ಗುರುತಿಸಲಾಗಿರಲಿಲ್ಲ. ಮರೆಮಾಚಿದ್ದು ಬಹಳಷ್ಟು ಇತ್ತು. ಮಾರ್ಚ್ 2014 ರಲ್ಲಿ ಪ್ರಕಟವಾದ ಕ್ರೆಡಿಟ್ ಸ್ಯೂಸೆ ವರದಿಯ ಪ್ರಕಾರ, ಒಂದಕ್ಕಿಂತ ಕಡಿಮೆ ಬಡ್ಡಿ ವ್ಯಾಪ್ತಿ ಅನುಪಾತ ಹೊಂದಿದ್ದ ಅಗ್ರ 200 ಕಂಪನಿಗಳು ಬ್ಯಾಂಕ್‌ ಗಳಿಗೆ ಸುಮಾರು ₹8.6 ಲಕ್ಷ ಕೋಟಿ ಬಾಕಿ ಉಳಿಸಿಕೊಂಡಿದ್ದವು.
  • ಆ ಸಾಲಗಳಲ್ಲಿ ಸುಮಾರು ಶೇ.44 (₹3.8 ಲಕ್ಷ ಕೋಟಿ) ಇನ್ನೂ ಸಮಸ್ಯೆಯ ಆಸ್ತಿಗಳೆಂದು ಗುರುತಿಸಲಾಗಿರಲಿಲ್ಲ. ಅದೊಂದೇ GNPA ಅನುಪಾತಕ್ಕೆ ಶೇ.6.7 ಅನ್ನು ಸೇರಿಸುತ್ತದೆ. 2018 ರಲ್ಲಿ, ಸಂಸದೀಯ ಸಮಿತಿಗೆ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್‌ ನ ಮಾಜಿ ಗವರ್ನರ್ ಹೀಗೆ ಹೇಳಿದ್ದಾರೆ.
  • ಬಂಡವಾಳದ ಹರಿವು ಪ್ರಾಬಲ್ಯ ಹೊಂದಿರುವ ಯುಗದಲ್ಲಿ, ಬಾಹ್ಯ ವಾಣಿಜ್ಯ ಸಾಲಗಳ (ECB) ಮೇಲಿನ ಅತಿಯಾದ ಅವಲಂಬನೆಯಿಂದಾಗಿ ಭಾರತದ ಬಾಹ್ಯ ಅಪಾಯ ಹೆಚ್ಚಾಯಿತು.
  • 2013 ರಲ್ಲಿ ಅಮೆರಿಕ ಡಾಲರ್ ತೀವ್ರವಾಗಿ ಏರಿದಾಗ. ಯುಪಿಎ ಸರ್ಕಾರವು ಬಾಹ್ಯ ಮತ್ತು ಸ್ಥೂಲ ಆರ್ಥಿಕ ಸ್ಥಿರತೆಯೊಂದಿಗೆ ರಾಜಿ ಮಾಡಿಕೊಂಡಿತ್ತು ಮತ್ತು 2013 ರಲ್ಲಿ ಕರೆನ್ಸಿ ಕುಸಿಯಿತು. 2011 ಮತ್ತು 2013 ರ ನಡುವೆ ಅಮೆರಿಕ  ಡಾಲರ್‌ ಗೆ ವಿರುದ್ಧವಾಗಿ ಭಾರತೀಯ ರೂಪಾಯಿ ಅದರ ಗರಿಷ್ಠ ಮಟ್ಟದಿಂದ ಕೆಳಕ್ಕೆ ಶೇ. 36 ರಷ್ಟು ಕುಸಿಯಿತು.
  • ವಿದೇಶಿ ವಿನಿಮಯ ಮೀಸಲು ದೊಡ್ಡ ಪ್ರಮಾಣದಲ್ಲಿ ಖಾಲಿಯಾದಾಗ ಎನ್‌ ಆರ್‌ ಐ ಗಳಿಗೆ ಪ್ರಸಿದ್ಧ ವಿದೇಶಿ ಕರೆನ್ಸಿ ನಾನ್-ರೆಸಿಡೆಂಟ್ (ಎಫ್‌ ಸಿ ಎನ್‌ ಆರ್ (ಬಿ)) ಠೇವಣಿ ವಿಂಡೋವು ಸಹಾಯಕ್ಕೆ ಬಂತು.
  • ಯುಪಿಎ ಸರ್ಕಾರದ ಅಡಿಯಲ್ಲಿ, ವಿದೇಶಿ ವಿನಿಮಯ ಮೀಸಲು ಜುಲೈ 2011 ರಲ್ಲಿ USD 294 ಶತಕೋಟಿಯಿಂದ ಆಗಸ್ಟ್ 2013 ರಲ್ಲಿ USD 256 ಶತಕೋಟಿಗೆ ಕುಸಿಯಿತು. ಸೆಪ್ಟೆಂಬರ್ 2013 ರ ಅಂತ್ಯದ ವೇಳೆಗೆ, ವಿದೇಶೀ ವಿನಿಮಯ ಮೀಸಲುಗಳು 6 ತಿಂಗಳ ಆಮದುಗಳಿಗೆ ಸ್ವಲ್ಪಮಟ್ಟಿಗೆ ಹಣಕಾಸು ಒದಗಿಸಲು ಸಾಕಾಗಿತ್ತು, ಮಾರ್ಚ್ 2004 ರ ಅಂತ್ಯದಲ್ಲಿದ್ದ 17 ತಿಂಗಳುಗಳಿಂದ ಇದು ಕಡಿಮೆಯಾಯಿತು.
  • 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಯುಪಿಎ ಸರ್ಕಾರದ ಪ್ರತಿಕ್ರಿಯೆ – ಪರಿಣಾಮಗಳನ್ನು ಎದುರಿಸಲು ಹಣಕಾಸಿನ ಉತ್ತೇಜಕ ಪ್ಯಾಕೇಜ್ – ಪರಿಹಾರ ಪ್ರಯತ್ನವು ಸಮಸ್ಯೆಗಿಂತ ಕೆಟ್ಟದಾಗಿತ್ತು.
  • ಇದು ಹಣಕಾಸು ಮತ್ತು ಸ್ಥಿರತೆಯನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರದ ಸಾಮರ್ಥ್ಯವನ್ನು ಮೀರಿದ್ದಾಗಿತ್ತು. ಕುತೂಹಲಕಾರಿಯಾಗಿ, ನಮ್ಮ ಆರ್ಥಿಕತೆಯು ಬಿಕ್ಕಟ್ಟಿನಿಂದ ಪ್ರಭಾವಿತವಾಗದ ಕಾರಣ ಉತ್ತೇಜನವು ಸಾಧಿಸಲು ಪ್ರಯತ್ನಿಸಿದ ಫಲಿತಾಂಶಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರಲಿಲ್ಲ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ, 2009 ನೇ ಆರ್ಥಿಕ ವರ್ಷದಲ್ಲಿ ಭಾರತದ ಬೆಳವಣಿಗೆಯು ಶೇ.3.1 ಕ್ಕೆ ಇಳಿಯಿತು. ಆದರೆ 2010 ನೇ ಆರ್ಥಿಕ ವರ್ಷದಲ್ಲಿ ಶೇ.7.9 ಕ್ಕೆ ತ್ವರಿತವಾಗಿ ಚೇತರಿಸಿಕೊಂಡಿತು.

2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟು (GFC) ಭಾರತದ ಮೇಲೆ ಕೆಟ್ಟ ಪರಿಣಾಮ ಬೀರಲಿಲ್ಲ

 GFC ಪೀಡಿತ ವರ್ಷಗಳು
ಉದಯೋನ್ಮುಖ ಆರ್ಥಿಕತೆಗಳು20082009
ಬ್ರೆಜಿಲ್5.1-0.1
ಚೀನಾ9.69.4
ಭಾರತ3.98.5
ಇಂಡೋನೇಷ್ಯಾ7.44.7
ಕೊರಿಯಾ3.00.8
ಮೆಕ್ಸಿಕೋ0.9-6.3
ರಷ್ಯಾ5.2-7.8
 GFC ಪೀಡಿತ ವರ್ಷಗಳು
ಅಭಿವೃದ್ಧಿ ಹೊಂದಿದ ಆರ್ಥಿಕತೆಗಳು20082009
ಕೆನಡಾ1.0-2.9
ಫ್ರಾನ್ಸ್0.1-2.8
ಜರ್ಮನಿ1.0-5.7
ಇಟಲಿ-1.0-5.3
ಜಪಾನ್-1.2-5.7
ಯುನೈಟೆಡ್ ಕಿಂಗ್ಡಮ್-0.2-4.5
ಯುನೈಟೆಡ್ ಸ್ಟೇಟ್ಸ್0.1-2.6

  • ಯುಪಿಎ ಸರ್ಕಾರದ ಅಡಿಯಲ್ಲಿ, ಹೆಚ್ಚಿನ ವಿತ್ತೀಯ ಕೊರತೆಯೊಂದಿಗೆ ಸಾರ್ವಜನಿಕ ಹಣಕಾಸನ್ನು ಒಂದು ಭಯಾನಕ ಸ್ಥಿತಿಗೆ ತರಲಾಯಿತು.
  • ಯುಪಿಎ ಸರ್ಕಾರವು ತೈಲ ಮಾರುಕಟ್ಟೆ ಕಂಪನಿಗಳು, ರಸಗೊಬ್ಬರ ಕಂಪನಿಗಳು ಮತ್ತು ಆಹಾರ ನಿಗಮಕ್ಕೆ ನೀಡಲಾದ ನಗದು ಸಬ್ಸಿಡಿಗೆ ಬದಲಾಗಿ ನೀಡಲಾದ ವಿಶೇಷ ಭದ್ರತೆಗಳು (ತೈಲ ಬಾಂಡ್‌ಗಳು) 2006 ರಿಂದ 2010 ರವರೆಗಿನ ಐದು ವರ್ಷಗಳಲ್ಲಿ ₹1.9 ಲಕ್ಷ ಕೋಟಿಗಿಂತ ಸ್ವಲ್ಪ ಹೆಚ್ಚು.
  • ಪ್ರತಿ ವರ್ಷ ಸಬ್ಸಿಡಿ ಬಿಲ್‌ ನಲ್ಲಿ ಅವುಗಳ ಸೇರ್ಪಡೆಯು ವಿತ್ತೀಯ ಕೊರತೆಗಳು ಮತ್ತು ಆದಾಯ ಕೊರತೆಗಳನ್ನು ಹೆಚ್ಚಿಸುತ್ತಿತ್ತು, ಆದರೆ ಅವುಗಳನ್ನು ಮರೆಮಾಚಲಾಗಿತ್ತು.
  • ಅದರ ವಿತ್ತೀಯ ದುರುಪಯೋಗದ ಪರಿಣಾಮವಾಗಿ, ಯುಪಿಎ ಸರ್ಕಾರದ ವಿತ್ತೀಯ ಕೊರತೆಯು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊನೆಗೊಂಡಿತು ಮತ್ತು ತರುವಾಯ ಅದು 2011-12ರಲ್ಲಿ ಬಜೆಟ್ ಮಾಡಿದ್ದಕ್ಕಿಂತ ಶೇ.27 ಹೆಚ್ಚು ಸಾಲವನ್ನು ಮಾರುಕಟ್ಟೆಯಿಂದ ಪಡೆಯಿತು.
  • ವಿತ್ತೀಯ ಕೊರತೆಯ ಹೊರೆ ಆರ್ಥಿಕತೆಗೆ ಭರಿಸಲಾಗದಷ್ಟು ದೊಡ್ಡದಾಯಿತು. ಜಾಗತಿಕ ಹಣಕಾಸು ಮತ್ತು ಆರ್ಥಿಕ ಬಿಕ್ಕಟ್ಟಿನ ಪರಿಣಾಮಕ್ಕೆ ಸ್ಪಂದಿಸುವ ನೆಪದಲ್ಲಿ ಯುಪಿಎ ಸರ್ಕಾರ ತನ್ನ ಸಾಲವನ್ನು ವಿಸ್ತರಿಸಿತು ಮತ್ತು ಸ್ವಲ್ಪವೂ ಪಶ್ಚಾತ್ತಾಪ ಪಡಲಿಲ್ಲ. ಯುಪಿಎ ಸರ್ಕಾರವು ಮಾರುಕಟ್ಟೆಯಿಂದ ಹೆಚ್ಚು ಸಾಲವನ್ನು ಪಡೆದಿದ್ದು ಮಾತ್ರವಲ್ಲದೆ, ಸಂಗ್ರಹಿಸಿದ ಹಣವನ್ನು ಅನುತ್ಪಾದಕವಾಗಿ ಬಳಸಲಾಯಿತು.
  • ಮೂಲಸೌಕರ್ಯ ಸೃಷ್ಟಿಯಲ್ಲಿ ಗಂಭೀರ ನಿರ್ಲಕ್ಷ್ಯ ಕಂಡುಬಂದಿತು, ಇದು ಕೈಗಾರಿಕೆ ಮತ್ತು ಆರ್ಥಿಕ ಬೆಳವಣಿಗೆಯು ಮುಗ್ಗರಿಸುವಂತೆ ಮಾಡಿತು.
  • ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಪ್ರತಿಕ್ರಿಯೆಯಾಗಿ ಯುಪಿಎ ಸರ್ಕಾರವು ಸುಪ್ರೀಂ ಕೋರ್ಟ್‌ ಗೆ ಸಲ್ಲಿಸಿದ ಅಫಿಡವಿಟ್‌ ನಲ್ಲಿ, ಸುಮಾರು 40,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ಸೇರಿಸಲಾಗಿದೆ ಎಂದು ಹೇಳಿದೆ.
  • 1997 ರಿಂದ 2002 ರವರೆಗಿನ ಎನ್‌ ಡಿ ಎ ಆಡಳಿತದಲ್ಲಿ 24,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ಸೇರಿಸಲಾಗಿತ್ತು.
  • ಅದರ ನಂತರ, ಕಳೆದ ಹತ್ತು ವರ್ಷಗಳಲ್ಲಿ (2004-14) ಯುಪಿಎ ಕೇವಲ 16,000 ಕಿಲೋಮೀಟರ್‌ ಗಳನ್ನು ಮಾತ್ರ ಸೇರಿಸಿತು.
  • ರಿಸರ್ವ್ ಬ್ಯಾಂಕಿನ ವರದಿಗಳು ಯುಪಿಎ ಸರ್ಕಾರದ ಅತಿಯಾದ ಆದಾಯ ವೆಚ್ಚಗಳತ್ತ ಗಮನಸೆಳೆದವು. ಕಳಪೆ ನೀತಿ ಯೋಜನೆ ಮತ್ತು ಅನುಷ್ಠಾನದಿಂದಾಗಿ ಯುಪಿಎ ಅವಧಿಯಲ್ಲಿ ಅನೇಕ ಸಾಮಾಜಿಕ ವಲಯದ ಯೋಜನೆಗಳಿಗೆ ದೊಡ್ಡ ಪ್ರಮಾಣದ ಹಣವನ್ನು ಖರ್ಚು ಮಾಡಲಿಲ್ಲ.
  • 14 ಪ್ರಮುಖ ಸಾಮಾಜಿಕ ಮತ್ತು ಗ್ರಾಮೀಣ ವಲಯದ ಸಚಿವಾಲಯಗಳಾದ್ಯಂತ, ಯುಪಿಎ ಸರ್ಕಾರದ ಅವಧಿಯಲ್ಲಿ (2004-14) 94,060 ಕೋಟಿ ರೂ.ಗಳ ಆಯವ್ಯಯ ವೆಚ್ಚವನ್ನು ಖರ್ಚು ಮಾಡದೆ ಬಿಡಲಾಯಿತು, ಇದು ಆ ಅವಧಿಯಲ್ಲಿನ ಸಂಚಿತ ಬಜೆಟ್ ಅಂದಾಜಿನ ಶೇ.6.4 ರಷ್ಟಿತ್ತು.
  • ಇದಕ್ಕೆ ವ್ಯತಿರಿಕ್ತವಾಗಿ, ಎನ್‌ ಡಿ ಎ ಸರ್ಕಾರದ ಅಡಿಯಲ್ಲಿ (2014-2024), ಬಜೆಟ್ ವೆಚ್ಚದ 37,064 ಕೋಟಿ ರೂ.
  • ಯುಪಿಎ ಸರ್ಕಾರದ ಅಡಿಯಲ್ಲಿ ಭಾರತೀಯ ಕುಟುಂಬಗಳಿಗೆ ಆರೋಗ್ಯ ವೆಚ್ಚವು ನೋವಿನ ಅಂಶವಾಗಿತ್ತು.
  • 2014 ರಲ್ಲಿ ಭಾರತದ ಒಟ್ಟು ಆರೋಗ್ಯ ವೆಚ್ಚದ (THE) ಶೇ.64.2 ಜೇಬಿನಿಂದ ಆಗುವ ವೆಚ್ಚ (OOPE) ವಾಗಿತ್ತು. (ಎಫ್‌ ವೈ05 ರಲ್ಲಿನ THE ಶೇಕಡಾವಾರು 69.4 ಕ್ಕಿಂತ OOPE ಸ್ವಲ್ಪ ಸುಧಾರಣೆಯೊಂದಿಗೆ) ಆರೋಗ್ಯ ವೆಚ್ಚವು ಭಾರತೀಯ ಪ್ರಜೆಗಳ ಜೇಬಿಗೆ ರಂಧ್ರಗಳನ್ನು ಕೊರೆಯುತ್ತಲೇ ಇತ್ತು.
  • ದೀರ್ಘಕಾಲೀನ ರಾಷ್ಟ್ರೀಯ ಅಭಿವೃದ್ಧಿಯ ಪರಿಗಣನೆಯ ಕೊರತೆಯಿಂದಾಗಿ, ರಕ್ಷಣಾ ಸನ್ನದ್ಧತೆಯಂತಹ ನಿರ್ಣಾಯಕ ವಿಷಯವೂ ಸಹ ನೀತಿ ಕೊರತೆಯಿಂದಾಗಿ ಅಡ್ಡಿಯಾಯಿತು.
  • ಯುಪಿಎ ಸರ್ಕಾರದ ದಶಕ ಆಡಳಿತ (ಅಥವಾ ಅದರ ಅನುಪಸ್ಥಿತಿ) ನೀತಿ ದುಸ್ಸಾಹಸಗಳು ಮತ್ತು 2G ಹಗರಣ ಮತ್ತು ಕಲ್ಲಿದ್ದಲು ಹಗರಣಗಳಂತಹ ಹಗರಣಗಳಿಂದ ಗುರುತಿಸಲ್ಪಟ್ಟಿದೆ.
  • ಜುಲೈ 2012 ರಲ್ಲಿ 62 ಕೋಟಿ ಜನರನ್ನು ಕತ್ತಲೆಯಲ್ಲಿಟ್ಟು ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದ ಯುಪಿಎ ಸರ್ಕಾರವು ನಮ್ಮ ಇತಿಹಾಸದಲ್ಲಿ ಅತಿದೊಡ್ಡ ವಿದ್ಯುತ್ ಸ್ಥಗಿತಕ್ಕಾಗಿ ಯಾವಾಗಲೂ ನೆನಪಿನಲ್ಲುಳಿಯುತ್ತದೆ.
  • ಕಲ್ಲಿದ್ದಲು ಮತ್ತು ಅನಿಲದಂತಹ ಇಂಧನಗಳ ಕೊರತೆಯಿಂದಾಗಿ 24,000 ಮೆಗಾವ್ಯಾಟ್ ಉತ್ಪಾದನೆಯ ಸಾಮರ್ಥ್ಯವು ನಿಷ್ಫಲವಾಗಿ ರಾಷ್ಟ್ರವನ್ನು ಕತ್ತಲೆಯು ಆವರಿಸಿತು.
  • 2G ಹಗರಣ ಮತ್ತು ನೀತಿ ಕೊರತೆಯಿಂದಾಗಿ ಭಾರತದ ಟೆಲಿಕಾಂ ಕ್ಷೇತ್ರವು ಒಂದು ಅಮೂಲ್ಯ ದಶಕವನ್ನು ಕಳೆದುಕೊಂಡಿತು. ಯುಪಿಎ ಆಡಳಿತದಲ್ಲಿ, ತರಂಗಾಂತರ ಹಂಚಿಕೆ ಪ್ರಕ್ರಿಯೆಯು ಪಾರದರ್ಶಕತೆಯನ್ನು ಹೊಂದಿರಲಿಲ್ಲ ಮತ್ತು 2008-09 ರವರೆಗಿನ ವರ್ಷಗಳಲ್ಲಿ ಆಗಾಗ್ಗೆ ದುರುಪಯೋಗವಾಯಿತು, ಇದು “2G ಹಗರಣ” ಕ್ಕೆ ಕಾರಣವಾಯಿತು.
  • ಯುಪಿಎ ಸರ್ಕಾರವು ಪ್ರಾರಂಭಿಸಿದ 80:20 ಚಿನ್ನದ ರಫ್ತು-ಆಮದು ಯೋಜನೆಯು ಕಾನೂನುಬಾಹಿರ ಹಣದ ಲಾಭಗಳನ್ನು ಪಡೆಯಲು ನಿರ್ದಿಷ್ಟ ಹಿತಾಸಕ್ತಿಗಳನ್ನು ಪೂರೈಸಲು ಸರ್ಕಾರಿ ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳನ್ನು ಹೇಗೆ ಬುಡಮೇಲು ಮಾಡಲಾಯಿತು ಎಂಬುದನ್ನು ವಿವರಿಸುತ್ತದೆ.
  • ಯುಪಿಎ ಸರ್ಕಾರದ ಅವಧಿಯು ನೀತಿ ನ್ಯೂನತೆಯ ಉದಾಹರಣೆಗಳಿಂದ ತುಂಬಿತ್ತು. ಯುಪಿಎ ಸರ್ಕಾರವು ಯಾವುದೇ ಸಾಮಾನ್ಯ ಉದ್ದೇಶವನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ ಮತ್ತು ವ್ಯಾಪ್ತಿ, ಉದ್ದೇಶ ಮತ್ತು ಅನುಷ್ಠಾನದ ಜವಾಬ್ದಾರಿಗಳಲ್ಲಿ ವ್ಯಾಪಕ ಅಂತರ ಸಚಿವಾಲಯದ ವ್ಯತ್ಯಾಸಗಳಿವೆ ಎಂದು ಸಂಪುಟ ಕಾರ್ಯದರ್ಶಿ 2013 ರಲ್ಲಿ ಹೇಳಿದ್ದರು.
  • ಪ್ರಪಂಚದಾದ್ಯಂತ ಹೂಡಿಕೆದಾರರು ವ್ಯವಹಾರವನ್ನು ಸುಲಭಗೊಳಿಸಲು ಬಯಸುತ್ತಿದ್ದಾಗ, ಯುಪಿಎ ಸರ್ಕಾರವು ನೀತಿ ಅನಿಶ್ಚಿತತೆ ಮತ್ತು ವೈಷಮ್ಯವನ್ನು ಒದಗಿಸಿತು. ಯುಪಿಎ ಸರ್ಕಾರದ ಅಡಿಯಲ್ಲಿ ಹೂಡಿಕೆಯ ವಾತಾವರಣವನ್ನು ಅನುತ್ತೇಜನಗೊಳಿಸಿದ್ದು ದೇಶೀಯ ಹೂಡಿಕೆದಾರರು ವಿದೇಶಕ್ಕೆ ತೆರಳಲು ಕಾರಣವಾಯಿತು.
  • ಯುಪಿಎ ಸರ್ಕಾರವು ಹಿಂದಿನ ಸರ್ಕಾರ ತಂದ ಸುಧಾರಣೆಗಳನ್ನು ಬಂಡವಾಳ ಮಾಡಿಕೊಂಡಿತು, ಆದರೆ ತಾವು ಭರವಸೆ ನೀಡಿದ ನಿರ್ಣಾಯಕ ಸುಧಾರಣೆಗಳನ್ನು ಈಡೇರಿಸುವಲ್ಲಿ ವಿಫಲವಾಯಿತು. ಡಿಜಿಟಲ್ ಸಬಲೀಕರಣದ ಸಂಕೇತವಾದ ಆಧಾರ್ ಕೂಡ ಭಾರತದಲ್ಲಿ ಯುಪಿಎ ಸರ್ಕಾರದಿಂದ ಬಳಲಿತು.
  • ಹೆಚ್ಚಿನ ಸಂಖ್ಯೆಯ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಯೋಜನೆಗಳು ಕಳಪೆಯಾಗಿ ಅನುಷ್ಠಾನಗೊಂಡವು.
  • ಮೋದಿ ಸರ್ಕಾರ ಅಧಿಕಾರ ಸ್ವೀಕರಿಸಿದಾಗ ಆರ್ಥಿಕತೆ ಹಾದಿ ತಪ್ಪಿತ್ತು. ಭಾರತದ ನೀತಿ ಯೋಜಕರು ಮತ್ತು ದೇಶದ ಆದ್ಯತೆಗಳ ನಡುವಿನ ಸಂಪರ್ಕ ಕಡಿತವು ಎಷ್ಟು ಸ್ಪಷ್ಟವಾಗಿತ್ತು ಎಂದರೆ ಜನರು 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ ಡಿ ಎ ಗೆ ಅಗಾಧವಾದ ಜನಾದೇಶವನ್ನು ನೀಡಿದರು.
  • ರೈಲ್ವೆಯ 442 ಚಾಲ್ತಿಯಲ್ಲಿದ್ದ ಯೋಜನೆಗಳಲ್ಲಿ, ಪೂರ್ಣಗೊಳಿಸುವ ಗುರಿಯನ್ನು ಕೇವಲ 156 (ಶೇ. 35) ಯೋಜನೆಗಳಿಗೆ ನಿಗದಿಪಡಿಸಲಾಯಿತು. ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿನ ವಿಳಂಬದ ಪರಿಣಾಮವಾಗಿ ₹1.07 ಲಕ್ಷ ಕೋಟಿ ವೆಚ್ಚವು ಹೆಚ್ಚಾಯಿತು.
  • 2011 ರಿಂದ 2014 ರ ಅವಧಿಯಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ಶೇ.57 ರಿಂದ 83 ಪಾಲುದಾರರು ತಮ್ಮ ಗುರಿಗಳನ್ನು ಪೂರೈಸಲು ವಿಫಲರಾದರು.
  • ಸುರಕ್ಷತಾ ದೃಷ್ಟಿಕೋನದಿಂದ ಪುನರ್ವಸತಿಗಾಗಿ ಗುರುತಿಸಿದ ನಂತರ ಸೇತುವೆ ಕಾಮಗಾರಿಯನ್ನು ಮಂಜೂರು ಮಾಡಲು ರೈಲ್ವೆ ಮಂಡಳಿಯು ಸರಾಸರಿ 43 ತಿಂಗಳುಗಳನ್ನು ತೆಗೆದುಕೊಂಡಿತು ಮತ್ತು ಅದರ ನಂತರವೂ ಸೇತುವೆಯ ಕಾಮಗಾರಿಯು ಸರಾಸರಿ 41 ತಿಂಗಳ ವಿಳಂಬದೊಂದಿಗೆ ಪೂರ್ಣಗೊಂಡಿತು.
  • ಯುಪಿಎ ಸರ್ಕಾರದ ದಶಕವು ಒಂದು ನಷ್ಟವಾದ ದಶಕವಾಗಿದೆ, ಏಕೆಂದರೆ ಅದು ವಾಜಪೇಯಿ ಸರ್ಕಾರವು ಬಿಟ್ಟುಹೋದ ಬಲವಾದ ಅಡಿಪಾಯದ ಆರ್ಥಿಕತೆ ಮತ್ತು ಸುಧಾರಣೆಗಳ ವೇಗವನ್ನು ಬಳಸಿಕೊಳ್ಳುವಲ್ಲಿ ವಿಫಲವಾಯಿತು. ಯುಪಿಎ ಸರಕಾರದಲ್ಲಿ ಮತ್ತೆ ಮತ್ತೆ ನಾಯಕತ್ವದ ಬಿಕ್ಕಟ್ಟು ಎದುರಾಯಿತು.
  • ಯುಪಿಎ ಸರ್ಕಾರದ ಆರ್ಥಿಕ ಮತ್ತು ಹಣಕಾಸಿನ ದುರುಪಯೋಗವು ತನ್ನ ಅವಧಿಯ ಅಂತ್ಯದ ವೇಳೆಗೆ ಭಾರತದ ಬೆಳವಣಿಗೆಯ ಸಾಮರ್ಥ್ಯವನ್ನು ಟೊಳ್ಳುಗೊಳಿಸಿತು.
  • 2014 ರಲ್ಲಿ ನಮ್ಮ ಸರ್ಕಾರವು ಅಧಿಕಾರ ವಹಿಸಿಕೊಂಡ ತಕ್ಷಣ, ಭಾರತವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಮತ್ತು ಅದರ ಸ್ಥೂಲ ಆರ್ಥಿಕ ಅಡಿಪಾಯವನ್ನು ಬಲಪಡಿಸಲು ಸಹಾಯ ಮಾಡಲು ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಪುನರುಜ್ಜೀವನಗೊಳಿಸುವ ಮತ್ತು ದುರಸ್ತಿಗೊಳಿಸುವ ತುರ್ತು ಅಗತ್ಯವನ್ನು ನಾವು ಗುರುತಿಸಿದೆವು.
  • ಡಿಜಿಟಲ್ ಕ್ರಾಂತಿಯಿಂದ ಬಯಲುಶೌಚ ನಿರ್ಮೂಲನೆಯವರೆಗೆ ಮತ್ತು ಸ್ಥಳೀಯ ಲಸಿಕೆಗಳನ್ನು ಬಳಸಿಕೊಂಡು ಸಂಪೂರ್ಣ ಅರ್ಹ ಜನಸಂಖ್ಯೆಗೆ ಯಶಸ್ವಿಯಾಗಿ ಲಸಿಕೆ ಹಾಕುವುದರಿಂದ ರಫ್ತುಗಳನ್ನು ಗಣನೀಯವಾಗಿ ವೈವಿಧ್ಯಗೊಳಿಸುವವರೆಗೆ, ಭಾರತವು ನಮ್ಮ ಹೊಸ ಆಡಳಿತ ಮಾದರಿಯ ಅಡಿಯಲ್ಲಿ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿದೆ.
  • ಸಮಾನಾಂತರವಾಗಿ, ನಾವು ಆರ್ಥಿಕತೆ ಮತ್ತು ವ್ಯಾಪಾರ ವಲಯದ ಆರೋಗ್ಯವನ್ನು ಬಲಪಡಿಸಿದ್ದೇವೆ. ನಮ್ಮ ಸರ್ಕಾರದ ಆರಂಭಿಕ ವರ್ಷಗಳಲ್ಲಿ ಸಮಗ್ರ ಸುಧಾರಣಾ ಪ್ರಕ್ರಿಯೆಗೆ ಅಡಿಪಾಯ ಹಾಕಲಾಯಿತು.
  • ಐಎಂಎಫ್ ಆರ್ಟಿಕಲ್ IV ವರದಿ (2015) “ಭಾರತದ ಅಲ್ಪಾವಧಿಯ ಬೆಳವಣಿಗೆಯ ದೃಷ್ಟಿಕೋನವು ಸುಧಾರಿಸಿದೆ ಮತ್ತು ಅಪಾಯಗಳ ಸಮತೋಲನವು ಈಗ ಹೆಚ್ಚು ಅನುಕೂಲಕರವಾಗಿದೆ, ಹೆಚ್ಚಿದ ರಾಜಕೀಯ ನಿಶ್ಚಿತತೆ, ಹಲವಾರು ನೀತಿ ಕ್ರಮಗಳು, ಸುಧಾರಿತ ವ್ಯಾಪಾರ ವಿಶ್ವಾಸ, ಕಡಿಮೆ ಸರಕು ಆಮದು ಬೆಲೆಗಳು ಮತ್ತು ಕಡಿಮೆ ಬಾಹ್ಯ ಅಪಾಯಗಳಿಂದ ಬೆಂಬಲಿತವಾಗಿದೆ” ಎಂದು ಹೇಳಿತು.
  • ಎರಡು ವರ್ಷಗಳ ನಂತರ ತನ್ನ 2017 ರ ಆರ್ಟಿಕಲ್ IV ವರದಿಯಲ್ಲಿ, ಐಎಂಎಫ್ ಭಾರತದ ಬಗ್ಗೆ ತನ್ನ ಆಶಾವಾದವನ್ನು ಮತ್ತಷ್ಟು ಉನ್ನತೀಕರಿಸಿತು, “ಪ್ರಮುಖ ಸುಧಾರಣೆಗಳ ಅನುಷ್ಠಾನ, ಪೂರೈಕೆ-ಬದಿಯ ಅಡೆತಡೆಗಳ ಸಡಿಲಗೊಳಿಸುವಿಕೆ ಮತ್ತು ಸೂಕ್ತವಾದ ಹಣಕಾಸು ಮತ್ತು ವಿತ್ತೀಯ ನೀತಿಗಳಿಂದ ಮಧ್ಯಮ ಅವಧಿಯ ಬೆಳವಣಿಗೆಯ ನಿರೀಕ್ಷೆಗಳು ಸುಧಾರಿಸಿವೆ. ಸ್ಥೂಲ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸಿವೆ” ಎಂದು ಹೇಳಿತು.
  • ಸುಧಾರಣಾ ಪ್ರಕ್ರಿಯೆಯ ಪ್ರಾರಂಭವು ಹೂಡಿಕೆದಾರರಿಗೆ ವಾತಾವರಣವನ್ನು ಸುಧಾರಿಸುವ ಮೂಲಕ ಮತ್ತು ಆರ್ಥಿಕತೆಗೆ ಅನುಕೂಲಕರ ದೃಷ್ಟಿಕೋನವನ್ನು ಸೃಷ್ಟಿಸುವ ಮೂಲಕ ನಮ್ಮ ಸರ್ಕಾರದ ಆರಂಭಿಕ ವರ್ಷಗಳಲ್ಲಿ ಧನಾತ್ಮಕ ಫಲಿತಾಂಶಗಳನ್ನು ನೀಡಲಾರಂಭಿಸಿತು.

ಒಂದು ದಶಕದಲ್ಲಿ ದುರ್ಬಲ ಐದು ಆರ್ಥಿಕತೆಗಳಲ್ಲಿ ಒಂದಾಗಿದ್ದ ಭಾರತ ಈಗ ಅಗ್ರ ಐದರ ಸ್ಥಾನದಲ್ಲಿ

  • ಕೆಟ್ಟ ನಿರ್ವಹಣೆಯ ಆರ್ಥಿಕತೆಯು ಬೆಳವಣಿಗೆಯ ಸಾಮರ್ಥ್ಯವನ್ನು ಕುಂಠಿತಗೊಳಿಸಿತು  ಮತ್ತು ಭಾರತವುದುರ್ಬಲಆರ್ಥಿಕತೆಯಾಯಿತು.
  • ಮೋರ್ಗಾನ್ ಸ್ಟಾನ್ಲಿಯು ಭಾರತವನ್ನು ‘ದುರ್ಬಲ ಐದು ಆರ್ಥಿಕತೆಗಳಲ್ಲಿ ಒಂದಾಗಿರುವ” ಗುಂಪಿನಲ್ಲಿರಿಸಿತ್ತು. ಇದು ದುರ್ಬಲ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳನ್ನು ಹೊಂದಿರುವ ಉದಯೋನ್ಮುಖ ಆರ್ಥಿಕತೆಯನ್ನು ಒಳಗೊಂಡಿರುವ ಒಂದು ಗುಂಪು. ಜೊತೆಗೆ, ಇವುಗಳು ಕಡಿಮೆ ಬೆಳವಣಿಗೆ, ಹೆಚ್ಚಿನ ಹಣದುಬ್ಬರ, ಹೆಚ್ಚಿನ ವಿದೇಶಿ ಸಾಲ ಮತ್ತು ಸಾರ್ವಜನಿಕ ಹಣಕಾಸಿನ ದುರ್ಬಲ ಸ್ಥಿತಿಯನ್ನು ಒಳಗೊಂಡಿವೆ.
  • 2004 ರಲ್ಲಿ 12 ನೇ ದೊಡ್ಡ ಆರ್ಥಿಕತೆಯಿಂದ 2014ರಲ್ಲಿ ಕೇವಲ 10 ನೇ ದೊಡ್ಡ ಆರ್ಥಿಕತೆಗೆ  ಮಾತ್ರ ಬೆಳೆಯಲು ಸಾಧ್ಯವಾಯಿತು ಎಂಬ ಅಂಶವು ಅಲ್ಪಾವಧಿಯ,  ಕಡಿಮೆ ಗುಣಮಟ್ಟವನ್ನು ತೋರಿಸಿತು.
  • 2014ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಭಾರತೀಯ ಆರ್ಥಿಕತೆಯು ಸ್ಥೂಲ ಆರ್ಥಿಕ ಮೂಲಭೂತ ಅಂಶಗಳನ್ನು ಬಲಪಡಿಸುವ ಅನೇಕ ರಚನಾತ್ಮಕ ಸುಧಾರಣೆಗಳಿಗೆ ಒಳಗಾಗಿದೆ.
  • ಈ ಸುಧಾರಣೆಗಳು ಪ್ರತಿಕೂಲ ಜಾಗತಿಕ ಪರಿಸರದ ನಡುವೆ ಆರ್ಥಿಕತೆಯು ಹೆಚ್ಚು ಚೇತರಿಸಿಕೊಳ್ಳುವ ದೇಶವಾಗಿ   ರೂಪಾಂತರಗೊಂಡ ಕಾರಣ ಕೇವಲ ಒಂದು ದಶಕದಲ್ಲಿ ದುರ್ಬಲ ಐದು ಆರ್ಥಿಕತೆಗಳಲ್ಲಿ ಒಂದಾಗಿದ್ದ ಭಾರತ ಈಗ ಅಗ್ರ ಐದರ ಸ್ಥಾನಕ್ಕೆ ಪರಿವರ್ತನೆಯಾಯಿತು.

2012-13 ಮತ್ತು 2021-22 ರಲ್ಲಿ ಭಾರತದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳ ಸ್ಥಿತಿ

ಸ್ಥೂಲ ಆರ್ಥಿಕ ಮೂಲಭೂತ ಅಂಶಗಳುಕಡಿತ  1 (2012-13)
(ಟೇಪರ್)
ಕಡಿತ 2(2021-22)
(ಟೇಪರ್)
ಜಿಡಿಪಿಯ ಶೇಕಡಾವಾರು ಚಾಲ್ತಿ ಖಾತೆಯ ಬಾಕಿ-4.8                  -1.2
ವರ್ಷದಿಂದ ವರ್ಷಕ್ಕೆ ನೈಜ ಜಿಡಿಪಿ ಬೆಳವಣಿಗೆ (ಶೇ.)5.59.1
ವಿದೇಶಿ ವಿನಿಮಯ ಮೀಸಲು ಜಿಡಿಪಿಯ  ಶೇಕಡಾವಾರು16.020.1
ವರ್ಷದಿಂದ ವರ್ಷಕ್ಕೆ ಒಟ್ಟು ಹಣದುಬ್ಬರ9.95.5
ವಿನಿಮಯ ದರದ ಇಳಿಕೆ (ರೂ/ಯುಎಸ್‌ ಡಾಲರ್) (ವರ್ಷದಿಂದ ವರ್ಷಕ್ಕೆ YoY)6.33.1

ಮಾಹಿತಿ ಮೂಲ: ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ

  • ಕಳೆದ ಹತ್ತು ವರ್ಷಗಳಲ್ಲಿ, ಸರ್ಕಾರವು ನಿಶ್ಚಲವಾಗಿದ್ದ ಹಣಕಾಸು ವಲಯವನ್ನು ಪುನಶ್ಚೇತನಗೊಳಿಸಿದೆ ಮತ್ತು ಆರ್ಥಿಕತೆಯೊಳಗಿನ ಸಾಲ ಪರಿಸರ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಿದೆ, ಗಮನಾರ್ಹ ಸುಧಾರಣೆಗಳನ್ನು ತಂದಿದೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪ್ರಮುಖ ಅನುಪಾತಗಳು (ಅಂಕಿಅಂಶಗಳು ಶೇ.)

 2013-142022-23
ನಿವ್ವಳ ಬಡ್ಡಿಯ ಅಂಚು (NIM)2.452.72
ಸ್ವತ್ತುಗಳ ಮೇಲಿನ ಗಳಿಕೆ (RoA)0.500.79
ಈಕ್ಟಿಟಿಯ ಮೇಲಿನ ಗಳಿಕೆ (RoE)8.4812.35
  • ” ದೇಶ ಮೊದಲು ” ಎಂಬ ನಮ್ಮ ಸರ್ಕಾರದ ದೃಷ್ಟಿಕೋನವು ಭಾರತದ ಮೂಲಸೌಕರ್ಯ ಮತ್ತು ಸಾರಿಗೆ ವ್ಯವಸ್ಥೆಯ ಗುಣಮಟ್ಟವನ್ನು ಪರಿವರ್ತಿಸಿದೆ, ಇದು ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಪ್ರಮುಖವಾಗಿದೆ.
  • ಉದಾಹರಣೆಗೆ, ನಮ್ಮ ಸರ್ಕಾರವು ಹಣಕಾಸು ವರ್ಷ15ರಲ್ಲಿ ಅಧಿಕಾರ ವಹಿಸಿಕೊಂಡಾಗ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಗವು ದಿನಕ್ಕೆ 12 ಕಿ.ಮೀ.ನಂತೆ ಸೊರಗಿ ಸಾಗಿತ್ತು. ಆರ್ಥಿಕ ವರ್ಷ 23 ರಲ್ಲಿ ನಿರ್ಮಾಣದ ವೇಗವು 2.3 ಪಟ್ಟಿಗಿಂತ ಹೆಚ್ಚಾಗಿ 28 ಕಿಮೀ/ದಿನಕ್ಕೆ ಹೆಚ್ಚಾಯಿತು.
  • ಇದರ ಜೊತೆಗೆ, ರಾಷ್ಟ್ರೀಯ ಭದ್ರತೆಗೆ ಅತಿ ಮುಖ್ಯವಾದ ರಕ್ಷಣಾ ವಲಯಕ್ಕೆ ಪ್ರಮುಖವಾದ ಸಲಕರಣೆಗಳ ಖರೀದಿಗೆ ಯುಪಿಎ ಸರ್ಕಾರವು ಆದ್ಯತೆ ನೀಡಲಿಲ್ಲ. ಇವುಗಳಿಗೆ ನಮ್ಮ ಸರ್ಕಾರವು ಆದ್ಯತೆಯನ್ನು ನೀಡಿದೆ.

ಹೂಡಿಕೆದಾರರ ಪ್ರವೃತ್ತಿಗಳ   ಪುನರುಜ್ಜೀವನ

  • 2011 ರ ನಿಯಮಾವಳಿಗಳಲ್ಲಿ ಸಂಪೂರ್ಣವಾಗಿ ಕಾಣೆಯಾಗಿದ್ದ ‘ಪ್ರಕೃತಿ’ ಮತ್ತು ‘ಪ್ರಗತಿ’ ಸಮತೋಲನದ ನಿಜವಾದ ಮನೋಭಾವವನ್ನು ನಮ್ಮ ಸರ್ಕಾರವು ಅರ್ಥಮಾಡಿಕೊಂಡಿದೆ. ನಮ್ಮ ಸರ್ಕಾರವು ಕೈಗೊಂಡ ಸುಧಾರಣಾ ಕ್ರಮಗಳು ಆರ್ಥಿಕತೆಯ ಮಧ್ಯಮ-ಅವಧಿಯ ಹೂಡಿಕೆಯ ನಿರೀಕ್ಷೆಗಳನ್ನು ಗಣನೀಯವಾಗಿ ಹೆಚ್ಚಿಸಿವೆ.
  • ಹೆಸರಾಂತ ಹೂಡಿಕೆದಾರರು ಮತ್ತು ಫಂಡ್ ಮ್ಯಾನೇಜರ್ ಆದ ಮಾರ್ಕ್ ಮೊಬಿಯಸ್ ಅವರ ಇತ್ತೀಚಿನ ಹೇಳಿಕೆ, “ಭಾರತವು ತನ್ನ ಆಕರ್ಷಣೆ ಮತ್ತು ಉತ್ತಮ ಪ್ರತಿಫಲಗಳ ಭರವಸೆಯಿಂದ ಹೂಡಿಕೆದಾರರನ್ನು  ಆಕರ್ಷಿಸಿದೆ. ನಾನು ಕೂಡ ಅದರ ಬೃಹತ್ ಬೆಳವಣಿಗೆಯ ಸಾಮರ್ಥ್ಯದಿಂದ ಆಕರ್ಷಿತನಾಗಿದ್ದೇನೆ” ಎಂದು ಹೇಳಿದ್ದಾರೆ .

ಸಬಲೀಕರಣ ಮತ್ತು ಪರಿಣಾಮಕಾರಿ ವಿತರಣೆಯ ಮೂಲಕ ಸಾರ್ವಜನಿಕ ಕಲ್ಯಾಣ:

  • ಜನರ ಕಲ್ಯಾಣದ ಮೂಲಕ ಸಬಲೀಕರಣವು ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ನಾವು ಮೂಲಭೂತ ಸೌಕರ್ಯಗಳಿಗೆ ಸಾರ್ವತ್ರಿಕ ಲಭ್ಯತೆಗೆ ಆದ್ಯತೆ ನೀಡುವ “ಸಬ್ಕಾ ಸಾಥ್, ಸಬ್ಕಾ ವಿಕಾಸ್” (ಎಲ್ಲರ ಜೊತೆ, ಎಲ್ಲರ ವಿಕಾಸ) ತತ್ವವನ್ನು ಅಳವಡಿಸಿಕೊಂಡಿದ್ದೇವೆ ಮತ್ತು ಈ ತತ್ತ್ವವನ್ನು ಕಾರ್ಯಕ್ಕೆ ತರುವಲ್ಲಿ ಎಲ್ಲರೂ ಒಳಗೊಂಡು ಭಾಗವಹಿಸುವ, ಮಿಷನ್-ಮೋಡ್ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ.
 ಯುಪಿಎ ಸರ್ಕಾರಎನ್‌ ಡಿಎ ಸರ್ಕಾರ
ಯೋಜನೆಅವಧಿಫಲಿತಾಂಶಅವಧಿಫಲಿತಾಂಶ
ಕೈಗೆಟುಕುವ ವಸತಿ – ಗ್ರಾಮೀಣ2003-20142.1 ಕೋಟಿ2016-20242.6 ಕೋಟಿ
ಶೌಚಾಲಯ ನಿರ್ಮಾಣ2011-20141.8 ಕೋಟಿ ಶೌಚಾಲಯಗಳ ನಿರ್ಮಾಣ2014-202411.5 ಕೋಟಿ ಮನೆಗಳ ಶೌಚಾಲಯಗಳನ್ನು ನಿರ್ಮಿಸಲಾಗಿದೆ
 ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ2011-201436.4 ಲಕ್ಷ ಫಲಾನುಭವಿಗಳು  2015-20236.1 ಕೋಟಿ ಫಲಾನುಭವಿಗಳು  
 ಕನಿಷ್ಠ ಶೂನ್ಯ ಬ್ಯಾಲೆನ್ಸ್ ಬ್ಯಾಂಕ್ ಖಾತೆಗಳು2005-201210.3 ಕೋಟಿ ಖಾತೆಗಳು  2014-202451.6 ಕೋಟಿ ಖಾತೆಗಳು  
ಗ್ರಾಮೀಣ ವಿದ್ಯುದೀಕರಣ2005-20142.15 ಕೋಟಿ ಮನೆಗಳು2017-2022  2.86 ಕೋಟಿ ಮನೆಗಳು
ಕೈಗೆಟುಕುವ ಬೆಲೆಯಲ್ಲಿ ಔಷಧಿಗಳು2008-2014  164 ಜನೌಷಧಿ ಮಳಿಗೆಗಳನ್ನು ತೆರೆಯಲಾಗಿದ್ದು ಅದರಲ್ಲಿ 87 ಕಾರ್ಯನಿರ್ವಹಿಸುತ್ತಿದ್ದವು2014-202310,000 ಮಳಿಗೆಗಳನ್ನು ತೆರೆಯಲಾಗಿದೆ
ಆಪ್ಟಿಕಲ್ ಫೈಬರ್ ನೆಟ್‌ವರ್ಕ್2011-20146577 ಕಿಮಿ. ಆಪ್ಟಿಕಲ್ ಫೈಬರ್ ನೆಟ್‌ವರ್ಕ್2015-20236.8ಲಕ್ಷ ಆಪ್ಟಿಕಲ್ ಫೈಬರ್ ನೆಟ್‌ವರ್ಕ್  
ಬಡವರಿಗೆ ಹೆರಿಗೆ ನೆರವು ಯೋಜನ2010 – 20139.9 ಲಕ್ಷ ಫಲಾನುಭವಿಗಳು  – 53 ಜಿಲ್ಲೆಗಳು  2017-20233.59 ಕೋಟಿ crore ಫಲಾನುಭವಿಗಳು – ಭಾರತದಾತ್ಯಂತ
  • ತಂತ್ರಜ್ಞಾನ ಆಧಾರಿತ ಗುರಿ ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಜಾರಿಗೆ ತರುವ ಮೂಲಕ ಯುಪಿಎ ಸರ್ಕಾರವನ್ನು ಕಾಡುತ್ತಿದ್ದ  ಕಾರ್ಯನಿರ್ವಹಿಸಲು ಇದ್ದ ಸವಾಲುಗಳನ್ನು ನಮ್ಮ ಸರ್ಕಾರ ಪರಿಹರಿಸಿದೆ.
  • ಯುಪಿಎ ಸರ್ಕಾರದ ಕಾರ್ಯಕ್ರಮ ವಿತರಣೆಯನ್ನು ಗಣನೀಯವಾಗಿ ಸುಧಾರಿಸುವುದರ ಜೊತೆಗೆ, ನಮ್ಮ ಸರ್ಕಾರವು ಭಾರತದ ಅಭಿವೃದ್ಧಿ ಸಾಮರ್ಥ್ಯವನ್ನು ಬಳಸಿಕೊಳ್ಳಲು ಹಲವಾರು ನೀತಿ ಆವಿಷ್ಕಾರಗಳನ್ನು ಕೈಗೊಂಡಿದೆ.
  • ಪಿಎಂ-ಕಿಸಾನ್ ಸಮ್ಮಾನ್ ನಿಧಿ ರೈತರನ್ನು ಸಶಕ್ತಗೊಳಿಸಿತು ಮತ್ತು ಸಾಲಗಾರ-ಸಾಲದಾತ ಸಂಬಂಧವನ್ನು ನೋಯಿಸದೆ ಅವರ ಆದಾಯವನ್ನು ಸುಧಾರಿಸಿತು
  • 2014 ರಲ್ಲಿ ಯುಪಿಎ ಸರ್ಕಾರದಿಂದ  ಪಡೆದ ಹೆಚ್ಚಿನ ಹಣದುಬ್ಬರದ ನಿರಂತರ ಸವಾಲನ್ನು ನಿಭಾಯಿಸಲು, ನಮ್ಮ ಸರ್ಕಾರವು ಜವಾಬ್ದಾರಿಯುತ ಹಣಕಾಸು ಮತ್ತು ವಿತ್ತೀಯ ನೀತಿಗಳನ್ನು ಜಾರಿಗೊಳಿಸುವ ಮೂಲಕ ಸಮಸ್ಯೆಯ ಮೂಲ ಕಾರಣವನ್ನು  ಜಾಣ್ಮೆಯಿಂದ ಪರಿಹರಿಸಿದೆ.
  • ಆರ್ಥಿಕ ಶಿಸ್ತು ಸರ್ಕಾರದ ಖರ್ಚು ನಿರ್ಧಾರಗಳಿಗೆ ಒಳಪಟ್ಟಿದೆ. 2016 ರಲ್ಲಿ, ಸರ್ಕಾರವು ಆರ್‌ ಬಿಐಗೆ 2% ರಿಂದ 6 ರಷ್ಟು ಬ್ಯಾಂಡ್‌ನಲ್ಲಿ ಹಣದುಬ್ಬರವನ್ನು ಗುರಿಯಾಗಿಸಲು ಆದೇಶವನ್ನು ನೀಡಿತು. ಹಣಕಾಸು ವರ್ಷ14 ಮತ್ತು ಹಣಕಾಸು ವರ್ಷ 23 ನಡುವಿನ ಸರಾಸರಿ ವಾರ್ಷಿಕ ಹಣದುಬ್ಬರವು ಹಣಕಾಸು ವರ್ಷ 04 ಮತ್ತು ಹಣಕಾಸು ವರ್ಷ 14 ನಡುವಿನ ಸರಾಸರಿ ಹಣದುಬ್ಬರ 8.2 % ನಿಂದ 5.0 % ಕ್ಕೆ ಇಳಿಕೆಯಾಗಿದೆ.
  • ಯುಪಿಎ ಸರ್ಕಾರದಿಂದಾದ ಹೆಚ್ಚಿನ ಬಾಹ್ಯ ವಲಯದ ಸಮಸ್ಯೆಗಳನ್ನು ನಿಯಂತ್ರಿಸಲು ನಮ್ಮ ಸರ್ಕಾರವು ಸಂಘಟಿತ ಪ್ರಯತ್ನಗಳನ್ನು ಮಾಡಿದೆ.
  • ನಮ್ಮ ಸರ್ಕಾರವು ಪುನಃಸ್ಥಾಪಿಸಿದ ಆರ್ಥಿಕತೆಯ ಬಲವಾದ ಮೂಲಭೂತ ಅಂಶಗಳ ಕಾರಣದಿಂದಾಗಿ, ಜಾಗತಿಕ ಸವಾಲುಗಳ  ಸಮಯದಲ್ಲಿ ರೂಪಾಯಿಯು ಚೇತರಿಕೆಯನ್ನು  ಪ್ರದರ್ಶಿಸಿತು.
  • 2013 ರಲ್ಲಿ ಫೆಡ್ ಪ್ರಕಟಣೆಯ ನಾಲ್ಕು ತಿಂಗಳೊಳಗೆ, ಡಾಲರ್ ವಿರುದ್ಧ ರೂಪಾಯಿ 14.9 % ರಷ್ಟು ಕುಸಿದಿತ್ತು.
  • ಇದಕ್ಕೆ ವ್ಯತಿರಿಕ್ತವಾಗಿ, ಟೇಪರ್ 2 ಪ್ರಕಟಣೆಯ ನಂತರದ ನಾಲ್ಕು ತಿಂಗಳೊಳಗೆ 2021 ರಲ್ಲಿ ರೂಪಾಯಿಯು ಅತಿ ಕಡಿಮೆ 0.7% ರಷ್ಟು ಕುಸಿತ ಕಂಡಿತು.
  • ನಮ್ಮ ಸರ್ಕಾರವು ಚಾಲ್ತಿ ಖಾತೆಯನ್ನು ವಿವೇಚನೆಯಿಂದ ನಿರ್ವಹಿಸುವುದು ಮಾತ್ರವಲ್ಲದೆ, ಹೆಚ್ಚು ಸ್ಥಿರವಾದ ವಿದೇಶಿ ನೇರ ಹೂಡಿಕೆ (ಎಫ್‌ ಡಿಐ) ಮೂಲಕ ಅದರ ಸುಗಮವಾದ   ನಿಧಿಯನ್ನು ಖಾತ್ರಿಪಡಿಸಿದೆ.

  • ಹಣಕಾಸು ವರ್ಷ 05 ಮತ್ತು ಹಣಕಾಸು ವರ್ಷ 14 ರ ನಡುವೆ ಒಟ್ಟು 305.3 ಶತಕೋಟಿ ಡಾಲರ್ ಒಟ್ಟು ಎಫ್‌ಡಿಐಗೆ ಪ್ರತಿಯಾಗಿ , ನಮ್ಮ ಸರ್ಕಾರವು ಆರ್ಥಿಕ ವರ್ಷ 15 ಮತ್ತು ಹಣಕಾಸು ವರ್ಷ 23 ರ ನಡುವಿನ ಒಂಬತ್ತು ವರ್ಷಗಳಲ್ಲಿ ಅದರ ದುಪ್ಪಟ್ಟು ಮೊತ್ತವನ್ನು ( 596.5 ಶತಕೋಟಿ ಡಾಲರ್) ಗಳಿಸಿದೆ.
  • ಪರಿಣಾಮವಾಗಿ, ಭಾರತದ ಬಾಹ್ಯ ಆರ್ಥಿಕ ವಲಯವು ಹೆಚ್ಚು ಸುರಕ್ಷಿತವಾಗಿದೆ, ಮಾರ್ಚ್ 2014 ರಲ್ಲಿ   303 ಶತಕೋಟಿ ಡಾಲರ್ (7.8 ತಿಂಗಳ ಆಮದುಗಳಿಗೆ ಸಮನಾಗಿರುತ್ತದೆ) ನಿಂದ ಜನವರಿ 2024 ರಲ್ಲಿ ‌  617 ಶತಕೋಟಿ  ಡಾಲರ್‌ (10.6 ತಿಂಗಳ ಆಮದು) ಗೆ   ವಿದೇಶಿ ವಿನಿಮಯ ಮೀಸಲು ಹೆಚ್ಚಿದೆ.

ಸಾರ್ವಜನಿಕ ಹಣಕಾಸು: ದಯನೀಯ ಸ್ಥಿತಿಯಿಂದ  ಉತ್ತಮ ಸ್ಥಿತಿಗೆ ಪಯಣ


  • ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಸಾರ್ವಜನಿಕ ಹಣಕಾಸಿನ ಸ್ಥಿತಿಯು ಉತ್ತಮವಾಗಿರಲಿಲ್ಲ. ಸಾರ್ವಜನಿಕ ಹಣಕಾಸುಗಳನ್ನು ಉತ್ತಮ ಮಟ್ಟಕ್ಕೆ  ಪುನಃಸ್ಥಾಪಿಸಲು, ನಮ್ಮ ಸರ್ಕಾರವು ಭಾರತದ ಹಣಕಾಸಿನ ವ್ಯವಸ್ಥೆಯನ್ನು ಸುಧಾರಿತ ತೆರಿಗೆ ಮತ್ತು ಖರ್ಚು ಪರಿಸರ ವ್ಯವಸ್ಥೆಯಾಗಿ ಪರಿವರ್ತಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಿತು.  
  • ಹಿಂದಿನ ಪದ್ದತಿಗಳನ್ನು ತೊರೆದು, ಅಸಾಧಾರಣ ಹಣಕಾಸಿನ ಬಗ್ಗೆ ಈಗ ಪಾರದರ್ಶಕವಾಗಿ ತಿಳಿಸಲಾಗುತ್ತಿದೆ. ಇಲ್ಲಿಯವರೆಗೆ, ಈ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ಸುಮಾರು ₹ 1.93 ಲಕ್ಷ ಕೋಟಿಯನ್ನು ತೈಲ ಮಾರುಕಟ್ಟೆ ಕಂಪನಿಗಳು, ರಸಗೊಬ್ಬರ ಕಂಪನಿಗಳು ಮತ್ತು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೆ ನೀಡಲಾದ ವಿಶೇಷ ಭದ್ರತೆಗಳಿಗೆ ಅಸಲು ಮತ್ತು ಬಡ್ಡಿಯನ್ನು ಮರುಪಾವತಿಸಲು 2014 ರ ಮೊದಲಿನ ಸಬ್ಸಿಡಿಯನ್ನು ಪಾವತಿಸುವ ಬದಲು ಖರ್ಚು ಮಾಡಿದೆ.
  •  ಈ ಸರ್ಕಾರವು 2025-2027ರ ಅವಧಿಯಲ್ಲಿ ಬಾಕಿ ಉಳಿದಿರುವ ಬಾಧ್ಯತೆಗಳು ಮತ್ತು ಅದರ ಮೇಲಿನ ಬಡ್ಡಿಗೆ ₹ 1.02 ಲಕ್ಷ ಕೋಟಿಗಳನ್ನು ವ್ಯಯಿಸುತ್ತದೆ.
  • ಯುಪಿಎ ಅವಧಿಯಲ್ಲಿ ಅಸಾಧಾರಣ ದರದಲ್ಲಿ ಬೆಳೆದ ಕೇಂದ್ರ ಸರ್ಕಾರದ ಮಾರುಕಟ್ಟೆ ಸಾಲವನ್ನು ನಮ್ಮ ಸರ್ಕಾರ ನಿಯಂತ್ರಿಸಿತು.  
  • ನಮ್ಮ ಸರ್ಕಾರದ ವೆಚ್ಚದ ಗುಣಮಟ್ಟದಲ್ಲಿ ಸುಧಾರಣೆ ನಮ್ಮ ಹಣಕಾಸಿನ ನೀತಿಯ ಮೂಲಾಧಾರವಾಗಿದೆ
  • ಕಳೆದ ದಶಕದಲ್ಲಿ ವೆಚ್ಚದ ಗುಣಮಟ್ಟದಲ್ಲಿ ಸುಧಾರಣೆ

-ಆರ್ಥಿಕತೆಯು ಸಮರ್ಥನೀಯವಲ್ಲದ ದರದಲ್ಲಿ ವಿಸ್ತರಿಸದೆ ಆರ್ಥಿಕ ವರ್ಷ 2014ರಿಂದ 2024ರವರೆಗೆ(ಪರಿಷ್ಕೃತ ಅಂದಾಜು) ಪೂರ್ಣಾಂಕದಲ್ಲಿ ಬಜೆಟ್ ಬಂಡವಾಳ ವೆಚ್ಚ ಐದು ಪಟ್ಟು ಹೆಚ್ಚಾಗಿದೆ.

2015ರಿಂದ 2024ರ ಅವಧಿಯಲ್ಲಿ ಬಂಡವಾಳ ವೆಚ್ಚಕ್ಕೆ ಒತ್ತು

-ಹೆಚ್ಚಿನ ಬೆಳವಣಿಗೆಯ ಅವಧಿಯಲ್ಲಿ (ಆವರ್ತಕ ಪರ) ಬಜೆಟ್‌ಗಳನ್ನು ವಿಸ್ತರಿಸುವ ಯುಪಿಎ ಸರ್ಕಾರದ ವಿಧಾನಕ್ಕೆ ವ್ಯತಿರಿಕ್ತವಾಗಿ, ಪ್ರಸ್ತುತ ಸರ್ಕಾರವು ಜಿಡಿಪಿ ಬೆಳವಣಿಗೆಯ ಗರಿಷ್ಠ ಆವರ್ತನ ಸಮಯದಲ್ಲಿ ಬಜೆಟ್ ಗಾತ್ರವನ್ನು ಒಳಗೊಂಡಿರುವ ವಿವೇಚನಾಶೀಲ ಹಣಕಾಸಿನ ನೀತಿಯನ್ನು ಅನುಸರಿಸಿ ಯಾವುದೇ ನಿರ್ವಹಣೆಗೆ ಅನಿರೀಕ್ಷಿತ ಸಂದರ್ಭಗಳು ಎದುರಾದ ಸಂದರ್ಭದಲ್ಲಿ ಸಾಕಷ್ಟು ಹಣಕಾಸಿನ ಸ್ಥಳವನ್ನು ಸೃಷ್ಟಿಸಿದೆ.

ಕಳೆದ ದಶಕದಲ್ಲಿ ದೃಢವಾದ ಆದಾಯದ ಬೆಳವಣಿಗೆಯೊಂದಿಗೆ ಸುಧಾರಿತ ತೆರಿಗೆ-ಪರಿಸರ ವ್ಯವಸ್ಥೆ

ಸರಕು ಮತ್ತು ಸೇವಾ ತೆರಿಗೆ(GST) ಆಡಳಿತದ ಪರಿಚಯವು ಇಂದಿಗೆ ಹೆಚ್ಚು ಅತ್ಯಗತ್ಯವಾದ ರಚನಾತ್ಮಕ ಸುಧಾರಣೆಯಾಗಿದೆ. ಸರಕು ಮತ್ತು ಸೇವಾ ತೆರಿಗೆ (GST) ಪರಿಚಯಿಸುವ ಮೊದಲು, 440 ಕ್ಕಿಂತ ಹೆಚ್ಚು ತೆರಿಗೆ ದರಗಳು, ಅಬಕಾರಿ ಸುಂಕಗಳು ಮತ್ತು ಈ ದರಗಳನ್ನು ನಿರ್ವಹಿಸುವ ಬಹು ಏಜೆನ್ಸಿಗಳ ಅನುಸರಣೆ ಅಗತ್ಯತೆಗಳು ಭಾರತದ ಆಂತರಿಕ ವ್ಯಾಪಾರವು ಮುಕ್ತವಾಗಿರಲಿಲ್ಲ ಅಥವಾ ಏಕೀಕೃತವಾಗಿರಲಿಲ್ಲ.

ಸುಧಾರಣೆಯ ಅನುಷ್ಠಾನವು 29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳನ್ನು ಒಗ್ಗೂಡಿಸಿದ್ದು, ಅವುಗಳು ತಮ್ಮ ವಿಭಿನ್ನ ತೆರಿಗೆ ರಚನೆಗಳ ಕಾರಣದಿಂದಾಗಿ ತಮ್ಮದೇ ಆದ ಆರ್ಥಿಕ ಪ್ರದೇಶಗಳಾಗಿವೆ. ಹೊಸ ತೆರಿಗೆ ರಚನೆಯು ರಾಜಕೀಯ ಒಮ್ಮತದ ರಚನೆ ಮತ್ತು ಜಿಎಸ್ ಟಿ ಕೌನ್ಸಿಲ್‌ನ ಸಂಗ್ರಹ ಸಾರ್ವಭೌಮತ್ವದಿಂದ ನಿರೂಪಿಸಲ್ಪಟ್ಟಿದ್ದು, ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಎರಡೂ ಪ್ರಮುಖ ಉದಾಹರಣೆಗಳಾಗಿವೆ. ಕಳೆದ ದಶಕದಲ್ಲಿ ದೂರಗಾಮಿ ತೆರಿಗೆ ಸುಧಾರಣೆಗಳು ಸುಧಾರಿತ ಆದಾಯ ಸಂಗ್ರಹಣೆ ಮತ್ತು ಅನುಸರಣೆಗಳನ್ನು ಹೊಂದಿರುವ ಪರಿಣಾಮಕಾರಿ ವ್ಯವಸ್ಥೆಗಳನ್ನು ಜಾರಿಗೆ ತಂದಿವೆ.

-ಆರ್ಥಿಕ ವರ್ಷ 2015ರಿಂದ ಆರ್ಥಿಕ ವರ್ಷ 2024ರವರೆಗೆ ಪರಿಷ್ಕ್ರಿತ ಅಂದಾಜಿನ ಸರಾಸರಿ ತೆರಿಗೆ-ಜಿಡಿಪಿ ಅನುಪಾತವು ಸುಮಾರು ಶೇಕಡಾ 10.9ರಷ್ಟಿದ್ದು, ಇದು 2004ರಿಂದ 2014 ರಲ್ಲಿ ಹತ್ತು ವರ್ಷಗಳ ಸರಾಸರಿ ಶೇಕಡಾ 10.5ಕ್ಕಿಂತ ಹೆಚ್ಚಾಗಿದೆ. ಕಡಿಮೆ ತೆರಿಗೆ ದರಗಳು ಮತ್ತು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ವ್ಯಾಪಕವಾದ ಪರಿಹಾರವನ್ನು ವಿಸ್ತರಿಸಲಾಗಿದೆ.

ಡಿಸೆಂಬರ್ 2017 ರಿಂದ ಮಾರ್ಚ್ 2023 ರವರೆಗೆ ಕುಟುಂಬಗಳಿಗೆ ತಿಂಗಳಿಗೆ ಸುಮಾರು 45,000 ಕೋಟಿ ರೂಪಾಯಿ ಉಳಿಸಲು ಜಿಎಸ್ ಟಿ ಸಹಾಯ ಮಾಡಿದೆ ಎಂದು ಲೆಕ್ಕಾಚಾರ ತೋರಿಸುತ್ತದೆ. ಅದೇ ಸಮಯದಲ್ಲಿ, ಜಿಎಸ್ ಟಿಯಿಂದ ಮಾಸಿಕ ಸರಾಸರಿ ಆದಾಯವು ಆರ್ಥಿಕ ವರ್ಷ 2018 ರಲ್ಲಿ 90,000 ಕೋಟಿ ರೂಪಾಯಿಗಳಿಂದ ಆರ್ಥಿಕ ವರ್ಷ 2024 ರಲ್ಲಿ 1.7 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಅಭಿವೃದ್ಧಿಯಲ್ಲಿ ರಾಜ್ಯಗಳು ಸಮಾನ ಪಾಲುದಾರರು ಎಂಬುದನ್ನು ಒಪ್ಪಿಕೊಂಡು, ನಮ್ಮ ಸರ್ಕಾರವು ಸಹಕಾರಿ ಸಂಯುಕ್ತ ವ್ಯವಸ್ಥೆಯ ಮನೋಭಾವದಲ್ಲಿ 14 ಮತ್ತು 15 ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಒಪ್ಪಿಕೊಂಡಿದೆ.

ಎರಡು ಸರ್ಕಾರಗಳ ಆಡಳಿತದಲ್ಲಿ ರಾಜ್ಯಗಳಿಗೆ ವರ್ಗಾವಣೆಗಳ ಹೋಲಿಕೆ

-ಇದಲ್ಲದೆ, ಬದಲಾಗುತ್ತಿರುವ ಪರಿಸರ ಸ್ಥಿತಿಗತಿಗಳ ಸಮಯದಲ್ಲಿ ರಾಜ್ಯಗಳ ಜೊತೆ ಕೇಂದ್ರ ಸರ್ಕಾರ ದೃಢವಾಗಿ ನಿಂತಿದೆ.ಅಸಮರ್ಥತೆಗಳನ್ನು ಪರಿಹರಿಸಲು ಮತ್ತು ಕಲ್ಲಿದ್ದಲು ಕ್ಷೇತ್ರದಲ್ಲಿ ಪೈಪೋಟಿ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು, ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಸರ್ಕಾರವು ಅನೇಕ ಸುಧಾರಣೆಗಳನ್ನು ಕೈಗೊಂಡಿದೆ.

-ಅಧಿಕಾರಕ್ಕೆ ಬಂದ ನಂತರ, ನಮ್ಮ ಸರ್ಕಾರವು ಕಲ್ಲಿದ್ದಲು ಸಂಪನ್ಮೂಲಗಳ ಪಾರದರ್ಶಕ ಹಂಚಿಕೆ ಮತ್ತು ದೇಶದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕಲ್ಲಿದ್ದಲು ಗಣಿಗಳ (ವಿಶೇಷ ನಿಬಂಧನೆಗಳ (CMSP) ಕಾಯಿದೆ 2015ನ್ನು ತ್ವರಿತವಾಗಿ ಜಾರಿಗೆ ತಂದಿತು. ಮೊದಲ ಬಾರಿಗೆ ಕಲ್ಲಿದ್ದಲು ನಿಕ್ಷೇಪಗಳ ಹರಾಜು, ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಸೇರಿದಂತೆ ಕಲ್ಲಿದ್ದಲು ಸಂಪರ್ಕಗಳ ತರ್ಕಬದ್ಧಗೊಳಿಸುವಿಕೆ, ಕಲ್ಲಿದ್ದಲಿನ ಇ-ಹರಾಜಿಗೆ ಏಕ ಗವಾಕ್ಷಿ ಮಾರ್ಗ ಇತ್ಯಾದಿ ಹಲವು ಕ್ರಮಗಳನ್ನು ಒಳಗೊಂಡಿದೆ.

ಕಲ್ಲಿದ್ದಲು ವಲಯವನ್ನು ಸ್ವಚ್ಛಗೊಳಿಸಲು ನಮ್ಮ ಸರ್ಕಾರದ ಅವಿರತ ಪ್ರಯತ್ನಗಳ ಪರಿಣಾಮವಾಗಿ, ಆರ್ಥಿಕ ವರ್ಷ 2023 ರಲ್ಲಿ ಕಲ್ಲಿದ್ದಲು ಉತ್ಪಾದನೆಯು ದಾಖಲೆಯ ಮಟ್ಟ 893.19 ಮಿಲಿಯನ್ ಟನ್ ಗೆ ತಲುಪಿತು, ಇದು ಭಾರತದ ಇತಿಹಾಸದಲ್ಲಿ ಅತ್ಯಧಿಕವಾಗಿದೆ.

-ಆರ್ಥಿಕ ವರ್ಷ 2023ರಲ್ಲಿ ಕಲ್ಲಿದ್ದಲು ಉತ್ಪಾದನೆಯ ಮಟ್ಟವು ಆರ್ಥಿಕ ವರ್ಷ 2014 ರಲ್ಲಿ 565.77 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಗಿಂತ ಸುಮಾರು ಶೇಕಡಾ 57.8ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ. ಆರ್ಥಿಕ ವರ್ಷ 2009 ರಿಂದ ಆರ್ಥಿಕ ವರ್ಷ 2014ರವರೆಗಿನ ಕಲ್ಲಿದ್ದಲು ಉತ್ಪಾದನೆಯ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ(CAGR) ಶೇಕಡಾ 2.8 ರಷ್ಟಿತ್ತು, ಇದೇ ರೀತಿ ಮುಂದುವರಿದಿದ್ದರೆ ಆರ್ಥಿಕ ವರ್ಷ 2023 ರಲ್ಲಿ ಕಲ್ಲಿದ್ದಲು ಉತ್ಪಾದನೆಯು 725.39 ಮಿಲಿಯನ್ ಟನ್ ಆಗುತ್ತಿತ್ತು.

ನಮ್ಮ ಸರ್ಕಾರವು ದೇಶದ ವಿದ್ಯುತ್ ವಲಯವನ್ನು ಬಾಧಿಸುತ್ತಿರುವ ಬಹು ಸಮಸ್ಯೆಗಳನ್ನು ಪರಿಹರಿಸಿದೆ, ಈ ಮೂಲಕ ವಿದ್ಯುತ್ ಕೊರತೆಯಿಂದ ಸಾಕಷ್ಟು ವಿದ್ಯುತ್ ಉತ್ಪಾದನೆ ಸ್ಥಿತಿಗೆ ಬದಲಾವಣೆ ಕಂಡಿದೆ.

ದೂರಸಂಪರ್ಕ ವಲಯದಲ್ಲಿ ಉತ್ತಮ ಆಡಳಿತ

2014 ರಿಂದ, ನಮ್ಮ ಸರ್ಕಾರವು ದೂರಸಂಪರ್ಕ ಮಾರುಕಟ್ಟೆಯಲ್ಲಿನ ಪರಿಸ್ಥಿತಿಯನ್ನು ಸರಿಪಡಿಸಲು ಮತ್ತು ಈ ವಲಯದಲ್ಲಿನ ನೀತಿಯಲ್ಲಿ ಸ್ಪಷ್ಟತೆಯ ಕೊರತೆಯಿಂದ ಉಂಟಾದ ವೈಫಲ್ಯಗಳನ್ನು ಬಗೆಹರಿಸಿ ಪರಿಣಾಮಕಾರಿಯಾಗಿ ನಿರ್ವಹಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇದು ಸ್ಪೆಕ್ಟ್ರಮ್ ಹರಾಜು, ವ್ಯಾಪಾರ ಮತ್ತು ಹಂಚಿಕೆಯ ಪಾರದರ್ಶಕ ವಿಧಾನಗಳನ್ನು ತಂದು ಸ್ಪೆಕ್ಟ್ರಮ್‌ನ ಅತ್ಯುತ್ತಮ ಬಳಕೆಯನ್ನು ಮತ್ತಷ್ಟು ಸಕ್ರಿಯಗೊಳಿಸಿತು. 2022ರ 5ಜಿ ಹರಾಜು, ಟೆಲಿಕಾಂ ಸೇವಾ ಪೂರೈಕೆದಾರರಿಗೆ (TSPs) ಒಟ್ಟಾರೆ ಸ್ಪೆಕ್ಟ್ರಮ್ ಲಭ್ಯತೆಯನ್ನು ಹೆಚ್ಚಿಸಿ ಇದುವರೆಗಿನ ಅತ್ಯಧಿಕ ಪ್ರಮಾಣದ ಸ್ಪೆಕ್ಟ್ರಮ್ ನ್ನು, ಅಂದರೆ, 52 GHz, ಅತ್ಯಧಿಕ ಹರಾಜು ಮೌಲ್ಯ ಕಂಡಿದೆ.

-ಅಲ್ಲದೆ, ಟಿಎಸ್ ಪಿಗಳಿಗೆ ಆರೋಗ್ಯಕರ ನಗದು ಹರಿವು 5ಜಿ ತಂತ್ರಜ್ಞಾನದಲ್ಲಿ ಬಂಡವಾಳ ಹೂಡಿಕೆಗಳನ್ನು ಮಾಡಲು ಅನುವು ಮಾಡಿಕೊಟ್ಟಿತು, ಇದು ದೇಶದಲ್ಲಿ 5ಜಿ ಸಂಪರ್ಕಜಾಲದ ಅನಾವರಣಕ್ಕೆ ಕಾರಣವಾಯಿತು, ಭಾರತ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ 5ಜಿ ತಂತ್ರಜ್ಞಾನ ಜಾರಿಗೆ ತಂದ ದೇಶ ಎಂದು ಗುರುತಿಸಲ್ಪಟ್ಟಿದೆ. ಈ ಎಲ್ಲಾ ಕ್ರಮಗಳ ಪರಿಣಾಮಕಾರಿತ್ವವು ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರ ಹೆಚ್ಚುತ್ತಿರುವ ಸಂಚಿತ ಒಟ್ಟು ಆದಾಯದಲ್ಲಿ ಪ್ರತಿಫಲಿಸುತ್ತದೆ, ಇದು ಈಗಾಗಲೇ 3 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ.

RELATED ARTICLES

Latest News