Friday, August 8, 2025
Homeರಾಜ್ಯಭವಿಷ್ಯೋದ್ಯಮ ತಂತ್ರಜ್ಞಾನಗಳ ಮೇಲೆ ಗಮನ ಕೇಂದ್ರೀಕೃತ : ಗುರುಪ್ರಸಾದ್‌ ಮುಡ್ಲಾಪುರ್‌

ಭವಿಷ್ಯೋದ್ಯಮ ತಂತ್ರಜ್ಞಾನಗಳ ಮೇಲೆ ಗಮನ ಕೇಂದ್ರೀಕೃತ : ಗುರುಪ್ರಸಾದ್‌ ಮುಡ್ಲಾಪುರ್‌

Focus on future technologies: Guruprasad Mudlapur

ಬೆಂಗಳೂರು, ಆ.6- ಭವಿಷ್ಯದಲ್ಲಿ ಆವಿಷ್ಕಾರಕ್ಕೆ ಇನ್ನು ಹೆಚ್ಚಿನ ಒತ್ತು ಕೊಟ್ಟು ಜಾಗತಿಕ ಮಟ್ಟದಲ್ಲಿ ಹೊಸ ಅಲೆ ಮುಟ್ಟಲು ನಾವು ಉತ್ಸುಕರಾಗಿದ್ದೇವೆ ಎಂದು ಭಾರತದಲ್ಲಿನ ಬೋಷ್‌ ಗ್ರೂಪ್‌ನ ಅಧ್ಯಕ್ಷ ಹಾಗೂ ಬೋಷ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಗುರುಪ್ರಸಾದ್‌ ಮುಡ್ಲಾಪುರ್‌ ತಿಳಿಸಿದ್ದಾರೆ.

ಬೋಷ್‌ ಯಾವಾಗಲೂ ಜಾಗತಿಕ ಮಟ್ಟದಲ್ಲಿ ಟಾಪ್‌-3 ಸ್ಥಾನದಲ್ಲಿರಲು ಬಯಸುತ್ತದೆ. ಇದಕ್ಕಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ಥಳೀಯ ಮಟ್ಟಕ್ಕೆ ಹೆಚ್ಚಿನ ಒತ್ತು ನೀಡಿ ಜಾಗತಿಕ ಮಟ್ಟದಲ್ಲಿ ಹೊಸ ಅಧ್ಯಾಯ ಸೃಷ್ಟಿಸಲು ಬಯಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸದ್ಯದಲ್ಲೇ ನಾವು ಹೈಡ್ರೋಜನ್‌ ಚಾಲಿತ ವಾಣಿಜ್ಯ ವಾಹನಗಳು ಹಾಗೂ ಎಲೆಕ್ಟ್ರಿಕ್‌ ಆಧಾರಿತ ವಾಹನಗಳ ಕ್ಷೇತ್ರದಲ್ಲಿ ಹೆಚ್ಚು ಪರಿಣಾಮಕಾರಿಯಾದ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಈಗಾಗಲೇ ನಾವು ಹೈಡ್ರೋಜನ್‌ ಚಾಲಿತ ಟ್ರಾಕ್‌ನ್ನು ಪ್ರದರ್ಶಿಸಲಿದ್ದು, ಅದು ಸಾಕಷ್ಟು ಗಮನ ಸೆಳೆದಿದೆ.

ಈ ನಿಟ್ಟಿನಲ್ಲಿ ನಾವು ಮತ್ತಷ್ಟು ಕ್ರಿಯಾಶೀಲವಾಗಿ ಸಂಶೋದನೆ ಮತ್ತು ನಿರ್ಮಾಣಕ್ಕಾಗಿ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದು ಹೇಳಿದರು. ಪ್ರಸ್ತುತ ಆರ್ಥಿಕ ವರ್ಷದ(25-26) ತ್ರೈಮಾಸಿಕದಲ್ಲಿ ಬೋಷ್‌ ಲಿಮಿಟೆಡ್‌ ಕಾರ್ಯಾಚರಣೆ ಆದಾಯ 4,789 ಕೋಟಿ ಮುಟ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. 10.90ರಷ್ಟು ಹೆಚ್ಚಳವಾಗಿದೆ. ಇದಕ್ಕಾಗಿ ಉದ್ಯೋಗಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಅಭಿನಂದಿಸುವುದಾಗಿ ಹೇಳಿದರು.

ಪ್ರಯಾಣಿಕ ಕಾರುಗಳ ಹೆಚ್ಚಿನ ಬೇಡಿಕೆಗಳ ಹಿನ್ನಲೆಯಲ್ಲಿ ನಮ ಉತ್ಪನ್ನಗಳು ಸಾಕಷ್ಟು ಬಳಕೆಯಾಗಿದೆ. ಇದರಿಂದ ನಮಗೆ ಹೆಚ್ಚಿನ ಲಾಭ ಬಂದಿದೆ. ಇದಲ್ಲದೆ, ನಮ ಉತ್ಕೃಷ್ಟ ಉತ್ಪನ್ನಗಳು ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವುದು ಕೂಡ ಕಾಣಬಹುದು ಎಂದು ಹೇಳಿದ್ದಾರೆ.

ಬೋಷ್‌ ಲಿಮಿಟೆಡ್‌ ತನ್ನ ವಿಡಿಯೋ ಸಲ್ಯೂಶನ್‌ಗಳು, ಆಕ್ಸೆಸ್‌‍ ಮತ್ತು ಇಂಟ್ರುಶನ್‌ ಹಾಗೂ ಸಂವಚನ ವ್ಯವಸ್ಥೆಗಳು ವ್ಯವಹಾರವನ್ನು ಹಸ್ತಾಂತರಿಸುವಿಕೆಯನ್ನು ಪೂರ್ಣಗೊಳಿಸಿದೆ. ಇದರಲ್ಲಿ ನಮಗೆ ರೂ. 556 ಕೋಟಿ ಲಾಭವನ್ನು ಗಳಿಸಿದೆ. ವಿಶೇಷ ವಸ್ತುಗಳ ಮಾರಾಟದ ನಂತರ ಅದರ ಲಾಭವು 1,115ಗೆ ಏರಿದೆ. ಈ ಆದಾಯ ಶೇ. 23.3ರಷ್ಟು ಹೆಚಾಗಿದೆ ಎಂದು ಹೇಳಿದರು.

ನಮ ಮೂಲ ವ್ಯವಹಾರವನ್ನು ಸದೃಢಪಡಿಸಲು ಮತ್ತು ಭವಿಷ್ಯೋದ್ಯಮ ತಂತ್ರಜ್ಞಾನಗಳ ಮೇಲೆ ಗಮನ ಕೇಂದ್ರೀಕರಿಸಲು ನಾವು ನಡೆಸಿದ ಪ್ರಯತ್ನಗಳ ಫಲಿತಾಂಶದಿಂದ ಈ ಸಾಧನೆ ಮಾಡಲಾಗಿದೆ ಎಂದು ಗುರುಪ್ರಸಾದ್‌ ತಿಳಿಸಿದರು.ಜಾಗತಿಕ ಸನ್ನಿವೇಶದಲ್ಲಿ ಸದ್ಯ ಎದ್ದಿರುವ ಹೊಸ ಸಮಸ್ಯೆಗಳಿಂದ ಭಾರತದ ಆರ್ಥಿಕತೆಗೆ ಒತ್ತಡಕ್ಕೆ ಸಿಲುಕಬಹುದು. ಆದರೆ ಇದನ್ನು ನಿಭಾಯಿಸುವ ಸಾಮರ್ಥ್ಯವಿದೆ. ಇದರಿಂದಾಗಿ ಜಿಡಿಪಿ 6.5ರಲ್ಲಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಿದರು.

RELATED ARTICLES

Latest News