Wednesday, April 16, 2025
Homeಜಿಲ್ಲಾ ಸುದ್ದಿಗಳು | District Newsಸುಪ್ರೀಂ ಕೋರ್ಟ್ ಮಾರ್ಗಸೂಚಿ ತಪ್ಪದೇ ಪಾಲನೆ - ಶಶಿಕುಮಾರ್

ಸುಪ್ರೀಂ ಕೋರ್ಟ್ ಮಾರ್ಗಸೂಚಿ ತಪ್ಪದೇ ಪಾಲನೆ – ಶಶಿಕುಮಾರ್

City Police Commissioner N Sasikumar

ಹುಬ್ಬಳ್ಳಿ,ಏ.16- ಕಳೆದ ನಾಲ್ಕು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾ‌ರ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರೋಪಿಯನ್ನು ಬಂಧಿಸಲು ಪೊಲೀಸರು ಹೋಗಿದ್ದಾಗ, ತಪ್ಪಿಸಿಕೊಳ್ಳುವ ವೇಳೆ ಗುಂಡು ತಗುಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇಂತಹ ಪ್ರಕರಣದಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ಇದೆ ಅದರಂತೆ ನಡೆದಿದೆ ಎಂದರು.

ಈಗ ಮರಣೋತ್ತರ ಪರೀಕ್ಷೆ ಮುಂದುವರೆದಿದ್ದು ನ್ಯಾಯಾಗ ತನಿಖೆ ಮಾಡಬೇಕೆಂದಿತ್ತು. ಅದು ಕೂಡ ಆಗುತ್ತಿದೆ. ಆರೋಪಿಯ ಮಾಹಿತಿ ಪರಿಶೀಲನೆ ಮಾಡಲಾಗುತ್ತಿದೆ, ಆತ ವಾಸವಿದ್ದ ಸ್ಥಳದಲ್ಲಿ ಹಾಗೂ ಆತ ಸಂಚರಿಸಿದ ಎಲ್ಲಾ ಕಡೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.

ಪೋಸ್ಟ್‌ ಮಾರ್ಟಂ ಆದ ಮೇಲೆ ಅವರಿಗೆ ಸಂಬಂಧ ಪಟ್ಟವರನ್ನ ಹುಡುಕುವ ಕೆಲಸ ಮಾಡುತ್ತಿದ್ದೆವೆ. ಎಲ್ಲಾ ಭಾಷೆಗಳಲ್ಲಿ ಆರೋಪಿಯ ವಿವರಗಳನ್ನು ಬೇರೆ ಬೇರೆ ಕಡೆ ಕಳಿಸಲಾಗಿದೆ. ಆತ ಪಾಟ್ನಾದವನಾಗಿದ್ದಾನೆ ಎಂಬ ಮಾಹಿತಿ ಇದೆ. ಆತನ ಸಂಬಂಧಿಕರು ಪತ್ತೆಯಾಗದಿದ್ದರೆ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪ್ರಕಾರ ಚಾಚೂ ತಪ್ಪದೇ ಪಾಲನೆ ಮಾಡಲಾಗುತ್ತಿದೆ. ಅವರ ಕುಟುಂಬಸ್ಥರು ಬರುವ ತನಕ ಕೋಲ್ಡ್ ಸ್ಟೋರೇಜ್ ನಲ್ಲಿ ಕೆಲವು ದಿನಗಳ ಕಾಲ ಶವ ಇರಿಸಲಾಗುತ್ತೆ.

ಇಷ್ಟಾದರೂ ಆತನ ಸಂಬಂಧಿಕರು ಬಾರದಿದ್ದರೆ ಮಣ್ಣು ಮಾಡುವ ಪ್ರಕ್ರಿಯೆಯನ್ನ ಕಾನೂನು ತಜ್ಞರ ಸಲಹೆ ಪಡೆದು ಮುಂದುವರೆಯುತ್ತೇವೆ ಸಾರ್ವಜನಿಕ ಹಿತಾಸಕ್ತಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯ ಆಗಿಲ್ಲ ಏನೇ ಕೇಳಿದ್ರು ಉತ್ತರ ನೀಡಲು ಸಿದ್ದವಿದ್ದೇವೆ ಎಂದರು.

RELATED ARTICLES

Latest News