ಬೆಂಗಳೂರು, ಫೆ.15- ಈಗಾಗಲೇ ಬಸ್, ಮೆಟ್ರೋ ಟಿಕೆಟ್ ಪ್ರಯಾಣ ದರ ಏರಿಕೆಯಿಂದ ಬಸವಳಿದಿರುವ ರಾಜ್ಯದ ಜನತೆಗೆ ಸದ್ಯದಲ್ಲಿ ಬೆಸ್ಕಾಂ, ವಿದ್ಯುತ್ ದರ ಏರಿಕೆ ಶಾಕ್ ನೀಡಲು ಮುಂದಾಗಿದೆ. ಮುಂದಿನ ಮೂರು ವರ್ಷಗಳಿಗೆ ವಿದ್ಯುತ್ ದರ ಏರಿಕೆ ಮಾಡಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ( ಕೆಇಆರ್ ಸಿ) ಕ್ಕೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಖಾತರಿಯಾದಂತಿದೆ.
ಕೆಲಆರ್‌ಸಿಗೆ ವಿದ್ಯುತ್ ಪೂರೈಕೆ ಕಂಪನಿಗಳಾದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಮತ್ತು ಸಸ್ಕಾಂನಂತಹ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ದರವನ್ನು ಪರಿಷ್ಕರಣೆಗೆ ಕೋರಿ ಪ್ರಸ್ತಾವನೆಗಳನ್ನು ಸಲ್ಲಿಸಿವೆ.
ವಿದ್ಯುತ್ ಖರೀದಿಗೆ ತಗಲುವ ವೆಚ್ಚ ಹಾಗೂ ಪೂರೈಕೆ, ಕಲ್ಲಿದ್ದಲು ಸಂಗ್ರಹಣೆಗೆ ತಗಲುವ ವೆಚ್ಚ ಸೇರಿದಂತೆ ಇತರೆ ಖರ್ಚುಗಳು ಹೆಚ್ಚಾಗಿದ್ದು ಆರ್ಥಿಕ ಒತ್ತಡವನ್ನು ಉಲ್ಬಣಗೊಳಿಸಿವೆ ಎಂದು ಪ್ರಸ್ತಾವನೆಯಲ್ಲಿ ಕಂಪನಿಗಳು ಹೇಳಿಕೊಂಡಿವೆ.
ಹೀಗಾಗಿ ಪ್ರತಿ ಯೂನಿಟ್‌ಗೆ 1 ರೂ. 50 ಪೈಸೆ ದರ ಏರಿಕೆ ಮಾಡುವಂತೆ ಬೆಸ್ಕಾಂ ಮನವಿ ಮಾಡಿದರೆ, ಇತರೆ ಎಸ್ಕಾಂಗಳು ಪ್ರತಿ ಯೂನಿಟ್‌ಗೆ 1 ರೂ. 20 ಪೈಸೆ ಹೆಚ್ಚಳಕ್ಕೆ ಕೋರಿದೆ.
ಪ್ರಸ್ತಾವನೆಯಲ್ಲಿ ಪ್ರತಿ ಯೂನಿಟ್‌ಗೆ ಮೊದಲ ವರ್ಷ ಅಂದರೆ, 2025-26ಕ್ಕೆ 67 ಪೈಸೆ, 2ನೇ ವರ್ಷ 2024 -27ಕ್ಕೆ ಯೂನಿಟ್ 74 ಪೈಸೆ ಹಾಗೂ ಮೂರನೇ ವರ್ಷವಾದ 2027-28ಕ್ಕೆ 91 ಪೈಸೆ ವಿಸ್ತರಣೆ ಮಾಡಲು ಮನವಿ ಸಲ್ಲಿಸಿದೆ.
ಒಂದು ವೇಳೆ ಕರ್ನಾಟಕ ವಿದ್ಯುತ್ತ್ತಿ ನಿಯಂತ್ರಣ ಆಯೋಗ ಒಪ್ಪಿಗೆ ಸೂಚಿಸಿದರೆ ಮಾರ್ಚ್ ತಿಂಗಳಿನಿಂದಲೇ ದರ ಏರಿಕೆಯಾಗಲಿದೆ. ಬೇಡಿಕೆಯ ಹೆಚ್ಚಳವನ್ನು ನಿರ್ವಹಿಸಲು ವಿದ್ಯುತ್ ಖರೀದಿಗೆ ತಗಲುವ ವೆಚ್ಚವನ್ನು ಪೂರೈಸಲು ವಿದ್ಯುತ್ ದರವನ್ನು ಹೆಚ್ಚಳ ಮಾಡಲು ಮುಂದಾಗಿದೆ. ಬಹು ವಾರ್ಷಿಕ ದರ ವಿಧಾನ ಅಳವಡಿಸಿಕೊಂಡ ನಂತರ ಮೊದಲ ಬಾರಿಗೆ ಪರಿಷ್ಕರಣೆ ಉದಾಗಿರಲಿದೆ.
ಒಂದು ವೇಳೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಒಪ್ಪಿಗೆ ಸೂಚಿಸಿದರೆ ಪ್ರಸ್ತಾವನೆಯಂತೆ ವಿದ್ಯುತ್ ದರ ಹೆಚ್ಚಾಗಲಿದೆ. ವಿದ್ಯುತ್ ದರಗಳನ್ನು ವಾರ್ಷಿಕವಾಗಿ ಪರಿಶೀಲಿಸುವ ಮತ್ತು ಪರಿಷ್ಕರಿಸುವ ಕೆಂಆರ್‌ಸಿ ಪ್ರಸ್ತುತ ಎಸ್ಯಾಮ್ ಗಳು ಸಲ್ಲಿಸಿದ ಪ್ರಸ್ತಾವನೆಗಳನ್ನು ಮೌಲ್ಯಮಾಪನ ಮಾಡುತ್ತಿದೆ. ಪ್ರಕ್ರಿಯೆಯ ಭಾಗವಾಗಿ ಈಗಾಗಲೇ ಸಾರ್ವಜನಿಕ ಸಮಾಲೋಚನೆಗಳನ್ನು ನಡೆಸಲಾಗಿದ್ದು, ಆಯೋಗವು ತನ್ನ ನಿರ್ಧಾರವನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.
ಬೆಸ್ಕಾಂ ಮಾತ್ರವಲ್ಲದೇ ರಾಜ್ಯದ ಇತರೆ ಎಸ್ಕಾಂಗಳು ಕೂಡ ದರ ಏರಿಕೆಗೆ ಪ್ರಸ್ತಾವನೆ ಕೊಟ್ಟಿವೆ. ದರ ಏರಿಕೆಯು ಒಟ್ಟಿಗೆ ಬಹುತೇಕ ಏಕ ಮಾದರಿಯಲ್ಲಿಯೇ ಆಗಿದೆ.
ಯಾವಾಗ ಆದೇಶ?:
ಸದ್ಯ ದರ ಏರಿಕೆ ಸಂಬಂಧ ಕರ್ನಾಟಕ ವಿದ್ಯುತ್ತತ್ತಿ ನಿಯಂತ್ರಣ ಆಯೋಗ ಉದ್ಯಮಿಗಳು, ವ್ಯಾಪಾರಸ್ಥರು, ಸಾರ್ವಜನಿಕರು, ತಜ್ಞರ ಸಭೆ ನಡೆಸಿ ಅಹವಾಲು ಸ್ವೀಕಾರ ಮಾಡಲಿದೆ. ಪರ ವಿರೋಧಗಳನ್ನು ಆಲಿಸಲಿದೆ. ಆ ಬಳಿಕ ಮಾರ್ಚ್ ನಲ್ಲಿ ದರ ಏರಿಕೆಯ ಬಗ್ಗೆ ಅಂತಿಮ ಆದೇಶ ಬರಲಿದೆ. ಮಾರ್ಚ್ 1ರಿಂದ ನೂತನ ದರ ಜಾರಿಯಾಗುವ ಸಾಧ್ಯತೆಗಳಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಮೂರು ವರ್ಷದ ದರ ಏರಿಕೆ ನಿರ್ಧಾರವನ್ನು ಒಮ್ಮೆಗೆ ಮಾಡುವುದು ಸಮಂಜಸವಲ್ಲ, ಆಯಾ ಕಾಲಕ್ಕೆ ತಕ್ಕಂತೆ ತಜ್ಞರು, ಉದ್ಯಮಿಗಳ ಜತೆ ಚರ್ಚೆ ಮಾಡಿ ನಿರ್ಧಾರ ಮಾಡಬೇಕು ಎಂದು ಕೈಗಾರಿಕೋದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಜತೆಗೆ ಕೋವಿಡ್ ಬಳಿಕ ಚೇತರಿಕೆಯಾಗುತ್ತಿದ್ದು, ಅಭಿವೃದ್ಧಿ ವಿಚಾರವಾಗಿ ದರ ಏರಿಕೆ ನಿರ್ಧಾರ ತಪ್ಪು ಎನ್ನಲಾಗಿದೆ.
ಕೋವಿಡ್ ಸಾಂಕ್ರಾಮಿಕದ ನಂತರ ವಿಶೇಷವಾಗಿ ವಾಣಿಜ್ಯ ಮತ್ತು ಕೈಗಾರಿಕಾ ವಲಯಗಳಲ್ಲಿ ವಿದ್ಯುತ್ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ದರ ಏರಿಕೆ ನಿರ್ಧಾರ ಅಗತ್ಯ ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗ್ರಾಹಕರಿಗೆ ಹೊರೆಯಾಗಲಿದೆಯೇ?:
ಸದ್ಯ ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಲ್ಲಿರುವುದರಿಂದ ದರ ಏರಿಕೆ ಬಿಸಿ ಗೃಹ ಬಳಕೆ ಗ್ರಾಹಕರಿಗೆ ತಗಲುವುದು ಅನುಮಾನ. ಒಂದು ವೇಳೆ ವಿದ್ಯುತ್ ಬಳಕೆ ಶುಲ್ಕಕ್ಕಿಂತ ನಿಗದಿತ ಶುಲ್ಕ ಹೆಚ್ಚಳ ಮಾಡಿದರೆ ಗೃಹ ಬಳಕೆ ಗ್ರಾಹಕರೂ ದರ ಹೆಚ್ಚು ನೀಡಬೇಕಾಗುತ್ತದೆ.
ಅನುಮೋದನೆ ದೊರೆತರೆ 2025 ಮಾರ್ಚ್ 1ರಿಂದ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ.
ಇದರಿಂದ ರಾಜ್ಯಾದ್ಯಂತ ಗ್ರಾಹಕರಿಗೆ ವಿದ್ಯುತ್ ಬಿಲ್ ಹೆಚ್ಚಾಗಲಿದೆ. ಕೆಂಆರ್ ಸಿ ಪ್ರಸ್ತಾವನೆಗಳ ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ ಆಯೋಗ ಮೊದಲಿನಿಂದಲೂ ಎಸ್ಕಾಮ್ಗಳ ಆರ್ಥಿಕ ಅಗತ್ಯಗಳನ್ನು ಮಾತ್ರವಲ್ಲದೆ ಗ್ರಾಹಕರ ಕೈಗೆಟುಕುವಂತೆ ದರವನ್ನು ಸಮತೋಲನಗೊಳಿಸಿಕೊಂಡು ಬಂದಿದೆ. ಈ ಬಾರಿ ಆಯೋಗ ವಿದ್ಯುತ್ ದರವನ್ನು ಎಷ್ಟು ಹೆಚ್ಚಿಸಲಿದೆ ಎಂದು ಕಾದು ನೋಡಬೇಕಿದೆ.
ಈಗಾಗಲೇ ರಾಜ್ಯದ ಜನ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಇದರ ಬೆನ್ನಲ್ಲೇ ವಿದ್ಯುತ್ ದರ ಏರಿಕೆಯಿಂದ ಮತ್ತೊಂದು ಕಾಕ್ ಎದುರಾಗುತ್ತದೆ, ದರ ಹೆಚ್ಚಳಕ್ಕೆ ವಿದ್ಯುತ್ ಕಂಪನಿಗಳು ನಷ್ಟದ ಕಾರಣ ಹೇಳಿವೆ.
ಯಾವ ವರ್ಷದಲ್ಲಿ ಎಷ್ಟೆಷ್ಟು ದರ ಪರಿಷ್ಕರಣೆ(ಹೆಚ್ಚಳ)
2009 – ಪ್ರತಿ ಯೂನಿಟ್‌ಗೆ 34 ಪೈಸೆ
2010 – ಪ್ರತಿ ಯೂನಿಟ್‌ಗೆ 30 ಪೈಸೆ
2011 – ಪ್ರತಿ ಯೂನಿಟ್‌ಗೆ 28 ಪೈಸೆ
2012 – ಪ್ರತಿ ಯೂನಿಟ್‌ಗೆ 13 ಪೈಸೆ
2013 – ಪ್ರತಿ ಯೂನಿಟ್‌ಗೆ 13 ಪೈಸೆ
2017 – ಪ್ರತಿ ಯೂನಿಟ್‌ಗೆ 48 ಪೈಸೆ
2019- ಪ್ರತಿ ಯೂನಿಟ್‌ಗೆ 35 ಪೈಸೆ
2020- ಪ್ರತಿ ಯೂನಿಟ್‌ಗೆ 30 ಪೈಸೆ