Saturday, July 26, 2025
Homeಬೆಂಗಳೂರುಕ್ಷುಲ್ಲಕ ವಿಚಾರಕ್ಕೆ ಕಿರಿಕ್ : ಹಲ್ಲೆಗೊಳಗಾಗಿದ್ದ ಫುಡ್‌ ಡೆಲಿವರಿ ಬಾಯ್‌ ಸಾವು

ಕ್ಷುಲ್ಲಕ ವಿಚಾರಕ್ಕೆ ಕಿರಿಕ್ : ಹಲ್ಲೆಗೊಳಗಾಗಿದ್ದ ಫುಡ್‌ ಡೆಲಿವರಿ ಬಾಯ್‌ ಸಾವು

Food delivery boy dies after being attacked

ಬೆಂಗಳೂರು,ಜು.25-ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಫುಡ್‌ ಡೆಲಿವರಿ ಬಾಯ್‌ ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ. ರಾಜಗೋಪಾಲನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಲವಕುಶ ನಗರದ ನಿವಾಸಿ ಅರುಣ್‌ಕುಮಾರ್‌ ಮೃತಪಟ್ಟ ಫುಡ್‌ ಡೆಲಿವರಿ ಬಾಯ್‌.

ಕಳೆದ ಭಾನುವಾರ ರಾತ್ರಿ ಅರುಣ್‌ಕುಮಾರ್‌ ಪಾನಿಪುರಿ ತಿನ್ನಲು ಮನೆಯಿಂದ ಹೊರಗೆ ಹೋಗಿದ್ದಾಗ ಸ್ಥಳೀಯ ಆರೇಳು ಯುವಕರ ಗುಂಪೊಂದು ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ ದೊಣ್ಣೆಯಿಂದ ಮನ ಬಂದಂತೆ ಹೊಡೆದು ಪರಾರಿಯಾಗಿದೆ.

ಗಂಭೀರ ಗಾಯಗೊಂಡಿದ್ದ ಅರುಣ್‌ಕುಮಾರ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು.ಆದರೆ ಇಂದು ಬೆಳಗಿನ ಜಾವ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಐದು ಮಂದಿಯನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

RELATED ARTICLES

Latest News