Wednesday, April 2, 2025
Homeರಾಷ್ಟ್ರೀಯ | Nationalವಿದೇಶಿ ಪ್ರಜೆ ಬಂಧನ : 3.37 ಕೋಟಿ ಮೌಲ್ಯದ ಡ್ರಗ್ಸ್ ವಶ

ವಿದೇಶಿ ಪ್ರಜೆ ಬಂಧನ : 3.37 ಕೋಟಿ ಮೌಲ್ಯದ ಡ್ರಗ್ಸ್ ವಶ

ಮುಂಬೈ,ಫೆ.17- ಇಲ್ಲಿನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ಮುಂಬೈನ ಜುಹು ಪ್ರದೇಶದಲ್ಲಿ 3.37 ಕೋಟಿ ಮೌಲ್ಯದ ಎಂಡಿಎಂಎ (ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ) ಹೊಂದಿರುವ ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ. ಜುಹು ತಾರಾ ರಸ್ತೆಯಲ್ಲಿರುವ ಪಂಚತಾರಾ ಹೋಟೆಲ್ ಬಳಿ ವಿದೇಶಿ ಪ್ರಜೆ ಎಗ್ವೆ ಜಾನ್‍ನನ್ನು ಬಂಧಿಸಲಾಗಿದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

ಎಗ್ವೆ ಜಾನ್‍ನನ್ನು 3.37 ಕೋಟಿ ಮೌಲ್ಯದ ಎಂಡಿಎಂಎಯೊಂದಿಗೆ ಬಂಧಿಸಲಾಗಿದ್ದು, ಆತನ ಸಹಚರ ಪರಾರಿಯಾಗಿದ್ದಾನೆ. ಬಂಧನದ ವೇಳೆ ಆತನ ಬಳಿ ಎರಡು ಕಿಲೋಗ್ರಾಂಗಳಷ್ಟು ಮಾದಕ ದ್ರವ್ಯ ಪತ್ತೆಯಾಗಿದ್ದು, ಪಕ್ಕದ ಪಾಲ್ಘರ್‍ನ ನಲಸೋಪಾರಾದಲ್ಲಿರುವ ಆತನ ಸಹಚರನ ಮನೆಯಿಂದ 250 ಗ್ರಾಂ ವಶಪಡಿಸಿಕೊಳ್ಳಲಾಗಿದೆ.

ನಾರ್ಕೋಟಿಕ್ ಡ್ರಗ್ಸ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

RELATED ARTICLES

Latest News