Tuesday, September 17, 2024
Homeರಾಷ್ಟ್ರೀಯ | Nationalಕೇರಳದ ಅನಂತ ಪದ್ಮನಾಭ ದೇವಾಲಯ ಪ್ರವೇಶಿಸಲು ವಿದೇಶಿ ಮಹಿಳೆಗೆ ನಿರಾಕಕರಣೆ : ವಿಡಿಯೋ ವೈರಲ್

ಕೇರಳದ ಅನಂತ ಪದ್ಮನಾಭ ದೇವಾಲಯ ಪ್ರವೇಶಿಸಲು ವಿದೇಶಿ ಮಹಿಳೆಗೆ ನಿರಾಕಕರಣೆ : ವಿಡಿಯೋ ವೈರಲ್

ತಿರುವಂತನಪುರಂ,ಜು.17– ಕೇರಳದ ವಿಶ್ವ ವಿಖ್ಯಾತ ಅನಂತ ಪದ್ಮನಾಭ ಸ್ವಾಮಿ ದೇವಾಲಯ ಪ್ರವೇಶಿಸಲು ವಿದೇಶಿ ಮಹಿಳೆಯೊಬ್ಬರಿಗೆ ನಿರಾಕರಿಸಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಭಾರತೀಯ ಯುವಕನನ್ನು ವರಿಸಲು ನಿರ್ಧರಿಸಿರುವ ವಿದೇಶಿ ಮಹಿಳೆಯೊಬ್ಬರು ಸಂಪ್ರದಾಯದಂತೆ ಸೀರೆ ಉಟ್ಟು ದೇವಾಲಯಕ್ಕೆ ಬಂದರೂ ಅವರು ಹಿಂದೂ ಅಲ್ಲ ಎಂಬ ಕಾರಣಕ್ಕೆ ದೇವಾಲಯ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿತ್ತು.
ದೇವಾಲಯ ಪ್ರವೇಶ ನಿರಾಕರಿಸಿದ್ದನ್ನು ವಿದೇಶಿ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಪೋಸ್್ಟ ಅನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು ಕೆಲವರು ಅದನ್ನು ಅನ್ಯಾಯ ಎಂದು ಕರೆದರೆ ಇನ್ನು ಕೆಲವರು ಸಂಪ್ರದಾಯ ಪಾಲಿಸುವುದರಲ್ಲಿ ತಪ್ಪೇನಿದೆ ಎಂದು ವಾದ ಮಾಡಿದ್ದಾರೆ.

ವಿದೇಶಿ ಮಹಿಳೆ ಭಾರತೀಯ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ ಹಾಗೂ ಗೀತೆಯನ್ನು ಓದಿದ್ದೇನೆ ನಾನು ಕೂಡ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದೇನೆ ಎಂದು ತಿಳಿಸಿದರೂ ದೇವಾಲಯ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು.

ವಿದೇಶಿ ಮಹಿಳೆಯ ಹಿಂದೂ ಧರ್ಮ ಪ್ರೀತಿಯನ್ನು ಆರ್ಥ ಮಾಡಿಕೊಳ್ಳದೆ ಆಕೆಯ ದೇವಾಲಯ ಭೇಟಿ ನಿರಾಕರಿಸಿರುವುದು ಯಾವ ನ್ಯಾಯ ಎಂದು ಸಂಸದ ಕಾರ್ತಿ ಚಿದಂಬರಂ ಪ್ರಶ್ನಿಸಿದ್ದಾರೆ. ಇದು ನ್ಯಾಯೋಚಿತವಲ್ಲ, ಆಕೆ ಭಾರತೀಯ ವರನನ್ನು ವರಿಸಲು ಮುಂದಾಗಿದ್ದಾರೆ ಹಾಗೂ ಗೀತೆ ಓದಿರುವುದರಿಂದ ಆಕೆಯ ಭೇಟಿಗೆ ಅವಕಾಶ ನೀಡದಿರುವುದು ಅಕ್ಷಮ್ಯ ಎಂದು ಅವರು ಗುಡುಗಿದ್ದಾರೆ.

ಲಕ್ಷಾಂತರ ಕಾಮೆಂಟ್ಗಳ ವಿಭಾಗದಲ್ಲಿ ಕೆಲವು ಬಳಕೆದಾರರು ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡುವ ವಿದೇಶಿಯರ ವಾದವನ್ನು ಬೆಂಬಲಿಸಿದರೆ, ಇತರರು ಸಂಪ್ರದಾಯಗಳನ್ನು ಗೌರವಿಸಬೇಕು ಎಂದು ಪ್ರತಿಪಾದಿಸಿದ್ದಾರೆ.

ಯಾರಾದರೂ ಅವರ ಧರ್ಮ ಮತ್ತು ರಾಷ್ಟ್ರೀಯತೆಯನ್ನು ಲೆಕ್ಕಿಸದೆ, ಹಿಂದೂ ದೇವಾಲಯಗಳ ಒಳಗೆ ಪ್ರವೇಶಿಸಬೇಕು. ಅವರು ವಸ ಸಂಹಿತೆ, ಸಸ್ಯಾಹಾರ ತಿನ್ನುವುದು, ಚಪ್ಪಲಿ ತೆಗೆಯುವುದು ಮುಂತಾದ ದೇವಾಲಯದ ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಅದು ಧಾರ್ಮಿಕ ಸ್ಥಳವಲ್ಲ, ಪವಿತ್ರ ಸ್ಥಳವಾಗಿದೆ ಎಂದು ನಾನು ಸಾಕಷ್ಟು ಕಾಮೆಂಟ್ಗಳನ್ನು ಒಪ್ಪುತ್ತೇನೆ, ನಂಬಿಕೆಯನ್ನು ಬಯಸುವ ಯಾರಿಗಾದರೂ ಮೈತ್ರಿ ಮಾಡಿಕೊಳ್ಳಬೇಕು ಎಂದು ನಾನು ನಂಬುತ್ತೇನೆ. ಅವರು ನಿಯಮಗಳು ಮತ್ತು ಸಂಪ್ರದಾಯಗಳನ್ನು ಗೌರವಿಸಿದರೆ, ಯಾವುದೇ ಸಮಸ್ಯೆ ಇರಬಾರದು ಎಂದು ಕೆಲವರು ಹೇಳಿದ್ದಾರೆ.

RELATED ARTICLES

Latest News