ಮೈಸೂರು, ಜು. 10- ಗೋಬರ್ ಗ್ಯಾಸ್ ಬಾವಿಗೆ ಬಿದ್ದಿದ್ದ ಹುಲಿಯನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ಜಿಲ್ಲೆಯ ಸರಗೂರು ವ್ಯಾಪ್ತಿಯ ಬಿಡಗಲು ಗ್ರಾಮದಲ್ಲಿ ಹುಲಿಯನ್ನು ರಕ್ಷಣೆ ಮಾಡಲಾಗಿದೆ.
ಗ್ರಾಮದ ನವೀನ್ ಎಂಬುವವರ ಹಳೆಯ ಗೋಬರ್ ಗ್ಯಾಸ್ ಬಾವಿಗೆ ಹುಲಿ ಬಿದ್ದಿತ್ತು. ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಗೆ ಅರವಳಿಕೆ ಮದ್ದು ನೀಡಿ ರಕ್ಷಿಸಿದ್ದಾರೆ.
ಆರೋಗ್ಯವಾಗಿರುವ 6 ತಿಂಗಳ ಗಂಡು ಹುಲಿಯನ್ನು ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ.ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ರಕ್ಷಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದ್ದಾರೆ.
- ಬೆಂಗಳೂರಲ್ಲಿ ಅನಧಿಕೃತ ಪಾರ್ಕಿಂಗ್ ಮಾಡಿದ 12 ಸಾವಿರ ವಾಹನ ಸವಾರರ ವಿರುದ್ಧ ಎಫ್ಐಆರ್
- ಶೇ.50 ರಷ್ಟು ರಿಯಾಯಿತಿ ಹಿನ್ನೆಲೆಯಲ್ಲಿ ಮುಗಿಬಿದ್ದು ದಂಡ ಕಟ್ಟಿದ ವಾಹನ ಸವಾರರು
- ಶಾಂತಿಯುತ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆಗೆ ಸೂಕ್ತ ಭದ್ರತೆ : ಆಯುಕ್ತರು
- ಸೆ.1ರಿಂದ ಬಿಜೆಪಿ ‘ಧರ್ಮಸ್ಥಳ ಚಲೋ’
- ಯೂಟ್ಯೂಬರ್ ಸಮೀರ್ ಲ್ಯಾಪ್ಟಾಪ್, ಮೊಬೈಲ್ ಜಪ್ತಿ ಸಾಧ್ಯತೆ