Saturday, May 17, 2025
Homeರಾಷ್ಟ್ರೀಯ | Nationalಎಸ್-500 ಬಂದರೆ ಭಾರತವನ್ನು ಯಾರೂ ಟಚ್ ಮಾಡೋಕೆ ಆಗಲ್ಲ : ರಕ್ಷಣಾ ಕ್ಷೇತ್ರದ ತಜ್ಞರು

ಎಸ್-500 ಬಂದರೆ ಭಾರತವನ್ನು ಯಾರೂ ಟಚ್ ಮಾಡೋಕೆ ಆಗಲ್ಲ : ರಕ್ಷಣಾ ಕ್ಷೇತ್ರದ ತಜ್ಞರು

Forget S-400! India May Soon Go For Russian S-500 To Boost Its Air Defence

ನವದೆಹಲಿ, ಮೇ 17- ಭಾರತದ ಸೇನಾ ಬತ್ತಳಿಕೆಗೆ ಶೀಘ್ರದಲ್ಲೇ ಎಸ್-500 ಸೇರ್ಪಡೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಈ ಅಸ್ತ್ರ ಸೇನೆಗೆ ಬಂದರೆ ವಿಶ್ವದಲ್ಲಿ ನಮ್ಮನ್ನು ಯಾರು ಏನು ಮಾಡಲು ಸಾಧ್ಯವಾಗುವುದಿಲ್ಲ ಎಂದು ರಕ್ಷಣಾ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಪರೇಷನ್ ಸಿಂಧೂರ ಕಾರ್ಯಚರಣೆಯಲ್ಲಿ ಭಾರತದ ಸೇನಾ ಸಾಮರ್ಥ್ಯ ಕಂಡು ಇಡೀ ಜಗತ್ತೇ ಅಚ್ಚರಿಗೊಂಡಿದೆ. ಹೀಗಾಗಿ ಭಾರತದ ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ನಡುವೆ ಭಾರತದ ರಕ್ಷಣಾ ವ್ಯವಸ್ಥೆ ಇನ್ನಷ್ಟು ಬಲಿಷ್ಠವಾಗುತ್ತಿರುವ ಬಗ್ಗೆ ರಕ್ಷಣಾ ಕ್ಷೇತ್ರದ ವಿಶ್ಲೇಷಕರು ಮಾಹಿತಿ ನೀಡಿದ್ದಾರೆ.

ಸದ್ಯ ಇಸ್ರೇಲ್‌ನ ಐರನ್ ಡೋಮ್, ರಷ್ಯಾದ-400. ಅಮೆರಿಕ ಅಭಿವೃದ್ಧಿಪಡಿಸಿರುವ ಥಾಡ್ ಏರ್ ಡಿಫೆನ್ಸ್ ಸಿಸ್ಟಂ, ಡೇವಿಡ್ ಸಿಲ್ಲಿಂಗ್ ಏರ್ ಡಿಫೆನ್ಸ್ ಸಿಸ್ಟಂ ಜಗತ್ತಿನ ಶಕ್ತಿಶಾಲಿ ವಾಯುರಕ್ಷಣಾ ವ್ಯವಸ್ಥೆಗಳಾಗಿ ಗುರುತಿಸಿಕೊಂಡಿವೆ.

ಆದ್ರೆ ಎಸ್-500 ಏರ್ ಡಿಫೆನ್ಸ್ ಸಿಸ್ಟಂ ಭಾರತಕ್ಕೆ ಬಂದರೆ ಜಗತ್ತಿನಲ್ಲಿ ಭಾರತದ ಸೇನಾ ಶಕ್ತಿ ಮತ್ತಷ್ಟು ಬಲಿಷ್ಠವಾಗಲಿದೆ. ಜೊತೆಗೆ ಅಮೆರಿಕ, ರಷ್ಯಾ ದೇಶಗಳ ವಾಯುರಕ್ಷಣಾ ವ್ಯವಸ್ಥೆಯನ್ನೂ ಹಿಂದಿಕ್ಕಲಿದೆ ಎಂದು ಅಂದಾಜಿಸಲಾಗಿದೆ.

ಎಸ್-500 ರಕ್ಷಣಾ ವ್ಯವಸ್ಥೆಯು ಎಸ್-400ನ ಮುಂದುವರಿದ ಭಾಗವಾಗಿದೆ. 600 ಕಿಮೀ ದೂರದಿಂದಲೇ ಶತ್ರುಗಳ ಡೋನ್, ಫೈಟರ್ ಜೆಟ್, ಮಿಸೈಲ್ಗಳನ್ನ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಪರೇಷನ್ ಸಿಂಧೂರದ ಕಾರ್ಯಾಚರಣೆ ವೇಳೆ ಪಾಕ್‌ನಿಂದ ಬರುತ್ತಿದ್ದ ಕ್ಷಿಪಣಿಗಳನ್ನು ಧ್ವಂಸಗೈದು ಭಾರತವನ್ನು ರಕ್ಷಿಸಿದ್ದ ಎಸ್-400 ವಾಯು ರಕ್ಷಣಾ ಕ್ಷಿಪಣಿಗೆ ಬೇಡಿಕೆ ಹೆಚ್ಚಾಗಿದೆ. ಪಾಕ್ ನಡುವಿನ ಸಂಘರ್ಷದಲ್ಲಿ ಇದರ ಪ್ರಯೋಗ ಯಶಸ್ವಿಯಾದ ಬೆನ್ನಲ್ಲೇ ಭಾರತ ಮತ್ತಷ್ಟು ಎಸ್-400 ವಾಯು ರಕ್ಷಣಾ ಕ್ಷಿಪಣಿಗೆ ಬೇಡಿಕೆಯಿಟ್ಟಿದೆ ಎಂದು ವರದಿಗಳು ತಿಳಿಸಿವೆ.

RELATED ARTICLES

Latest News