ಚನ್ನರಾಯಪಟ್ಟಣ,ಜ.22- ಜೂಟ್ಟನಹಳ್ಳಿ ಪಂಚಾಯತಿ, ಚನ್ನೇನಹಳ್ಳಿ ಗ್ರಾಮದ ಮಾಜಿ ಸದಸ್ಯರಾದ ಪುಟ್ಟೇಗೌಡರು ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.
ಅವರು ತಮ ಎರಡು ಕಣ್ಣುಗಳನ್ನು ದಾನ ಮಾಡಿ ಇಬ್ಬರ ಬಾಳಿಗೆ ಬೆಳಕಾಗುವ ಮಾದರಿಯಾಗಿ ಮರೆಯಾಗಿದ್ದಾರೆ. ಪುಟ್ಟೇಗೌಡರು ಸದಾ ಜನಾನುರಾಗಿ ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿದ್ದವರು, ರೈತನ ಮಗನಾಗಿ ಹುಟ್ಟಿ ಭೂತಾಯಿಯ ಸೇವೆ ಮಾಡುತ್ತ ಸದಾ ಜನಸೇವೆ, ಸಮಾಜ ಸೇವೆಯಲ್ಲಿ ನಿರತರಾಗಿದ್ದರು.
ಭಾನುವಾರ ಬಾರದ ಲೋಕಕ್ಕೆ ತೆರಳಿದ ಪುಟ್ಟೇಗೌಡರು ಕಿಮ್ಸ್ ಆಸ್ಪತ್ರೆಯಲ್ಲಿ ತಮ ನೇತ್ರಗಳನ್ನು ದಾನ ಮಾಡಿದ್ದಾರೆ. ಸದಾ ಸೇವಾ ಮನೋಭಾವ ಹೊಂದಿದ್ದ ಗ್ರಾಮದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದ ಪುಟ್ಟೇಗೌಡರ ಅಕಾಲಿಕ ನಿಧನಕ್ಕೆ ಇಡೀ ಗ್ರಾಮವೇ ಕಂಬನಿ ಮಿಡಿದಿದೆ.
ದುರ್ವಿಧಿಯ ಅಟ್ಟಹಾಸಕ್ಕೆ ಅಪಘಾತದಿಂದ ಸಾವನ್ನಪ್ಪಿದ ಗ್ರಾಮ ಪಂಚಾಯತಿಯ ಮಾಜಿ ಸದಸ್ಯರಾದ ಪುಟ್ಟೇಗೌಡರು ಈಗ ತಮ ಎರಡು ನಯನಗಳನ್ನು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿರುವುದು ನಿಜಕ್ಕೂ ಶ್ಲಾಘನೀಯ.