Friday, April 25, 2025
HomeUncategorizedBREAKING : ಖ್ಯಾತ ವಿಜ್ಞಾನಿ, ಇಸ್ರೋ ಮಾಜಿ ಮುಖ್ಯಸ್ಥ ಕೆ.ಕಸ್ತೂರಿರಂಗನ್ ಇನ್ನಿಲ್ಲ..!

BREAKING : ಖ್ಯಾತ ವಿಜ್ಞಾನಿ, ಇಸ್ರೋ ಮಾಜಿ ಮುಖ್ಯಸ್ಥ ಕೆ.ಕಸ್ತೂರಿರಂಗನ್ ಇನ್ನಿಲ್ಲ..!

Former ISRO Chief K Kasturirangan Passes Away In Bengaluru-

ಬೆಂಗಳೂರು, ಏ.25- ಪದ್ಮಶ್ರೀ ಸರಣಿಯ ಪ್ರಶಸ್ತಿಗಳ ಪುರಸ್ಕೃತ ಹಾಗೂ ಖ್ಯಾತ ವಿಜ್ಞಾನಿ ಕೆ.ಕಸ್ತೂರಿರಂಗನ್ ಅವರು ಇಂದು ವಿಧಿವಶರಾಗಿದ್ದಾರೆ. ನಗರದಲ್ಲಿರುವ ಅವರ ನಿವಾಸದಲ್ಲಿ ಬೆಳಿಗ್ಗೆ ಕಸ್ತೂರಿರಂಗನ್ (84) ಅವರು ಕೊನೆಯಿಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಕೆ.ಕಸ್ತೂರಿರಂಗನ್ ಅವರು ಇಸ್ರೋ ಅಧ್ಯಕ್ಷರಾಗಿ 1994ರಿಂದ 2003ರವರೆಗೆ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಜಿಎಸ್‌ಎಲ್‌ವಿಯ ಹಲವಾರು ಉಪಕರಣಗಳನ್ನು ಅಭಿವೃದ್ಧಿಪಡಿಸಿ ಯಶಸ್ವಿಯಾಗಿ ಉಡಾವಣೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಭಾರತೀಯ ಬಾಹ್ಯಾಕಾಶ ಯೋಜನೆಯಲ್ಲಿ ಕಸ್ತೂರಿರಂಗನ್ ಅವರ ಪಾತ್ರ ಗಣ್ಯವಾಗಿದ್ದು, ಉಪಗ್ರಹ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಆನ್ವೇಷಣೆಯಲ್ಲಿ ಹೆಚ್ಚಿನ ತಜ್ಞತೆ ಪಡೆದಿದ್ದರು. ತಮ್ಮ ಜೀವಮಾನದ ಸಾಧನೆಗಾಗಿ ಭಾರತದ ಅತ್ಯುನ್ನತ ಗೌರವಗಳಾದ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಸೇರಿದಂತೆ ಸರಣಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು.

ಇಸ್ರೋದಿಂದ ನಿವೃತ್ತರಾದ ಬಳಿಕ ವೈಜ್ಞಾನಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜೊತೆಗೆ ಸರ್ಕಾರದ ಹಲವಾರು ಸಮಿತಿಗಳಲ್ಲಿ ಕೆಲಸ ಮಾಡಿ ನಾಗರಿಕರ ಸೌಲಭ್ಯ ಸುಧಾರಣೆ ಸೇರಿದಂತೆ ಹಲವು ಸ್ಮರಣೀಯ ಕೆಲಸಗಳನ್ನು ಮಾಡಿದ್ದರು.

1940ರ ಅಕ್ಟೋಬರ್ 24 ರಂದು ಕೇರಳದ ಎರಾಕುಲಂನಲ್ಲಿ ಕೃಷ್ಣಸ್ವಾಮಿ ಅಯ್ಯರ್ ಮತ್ತು ವಿಶಾಲಾಕ್ಷಿಯವರ ಪುತ್ರರಾಗಿ ಜನಿಸಿದರು. ಕಸ್ತೂರಿರಂಗನ್ ಅವರ ಪೋಷಕರು ತಮಿಳುನಾಡಿನಿಂದ ಕೇರಳಕ್ಕೆ ಸ್ಥಳಾಂತರಗೊಂಡಾಗ ಪಾಲ್ಕಾಡ್ ಜಿಲ್ಲೆಯ ನಲ್ಲೆಪಲ್ಲಿ ಅಗ್ರಹಾರಂನಲ್ಲಿ ನೆಲೆಸಿದ್ದರು. ಇಸ್ರೋ ನಿವೃತ್ತಿ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು.

RELATED ARTICLES

Latest News