Friday, September 20, 2024
Homeರಾಷ್ಟ್ರೀಯ | Nationalಯುಪಿಎಸ್‌‍ಸಿ ನೂತನ ಅಧ್ಯಕ್ಷರಾಗಿ ಪ್ರೀತಿ ಸುದನ್ ನೇಮಕ

ಯುಪಿಎಸ್‌‍ಸಿ ನೂತನ ಅಧ್ಯಕ್ಷರಾಗಿ ಪ್ರೀತಿ ಸುದನ್ ನೇಮಕ

ನವದೆಹಲಿ,ಜು.31-ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌‍ಸಿ)ದ ನೂತನ ಅಧ್ಯಕ್ಷರಾಗಿ ನಿವೃತ್ತ ಐಎಎಸ್‌‍ ಅಧಿಕಾರಿ ಪ್ರೀತಿ ಸುದನ್ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಸರ್ಕಾರದ ಶಿಫಾರಸ್ಸಿನ ಮೇರೆಗೆ ಪ್ರೀತಿ ಸುದನ್ ಅವರನ್ನು ಯುಪಿಎಸ್‌‍ಸಿ ಅಧ್ಯಕ್ಷರನ್ನಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಆಂಧ್ರಪ್ರದೇಶ ಕೇಡರ್‌ನ 1983ರ ಬ್ಯಾಚ್‌ನ ಮಾಜಿ ಐಎಎಸ್‌‍ ಅಧಿಕಾರಿ ಪ್ರೀತಿ ಸುದನ್‌, ಕೋವಿಡ್‌-19 ವೇಳೆ ಕೇಂದ್ರ ಆರೋಗ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು 2020ರ ಜುಲೈನಲ್ಲಿ ಸೇವೆಯಿಂಖದ ನಿವೃತ್ತರಾಗಿದ್ದರು.

2024 ಆಗಸ್ಟ್‌ 1ರಿಂದ ಮುಂದಿನ ಆದೇಶಗಳವರೆಗೆ ಅಥವಾ 2025, ಏಪ್ರಿಲ್‌ 29ರವರೆಗೆ ಜಾರಿಗೆ ಬರುವಂತೆ ಸಂವಿಧಾನದ 316ನೇ ವಿಧಿಯ ಷರತ್ತು (1ಂ) ಅಡಿಯಲ್ಲಿ ಯುಪಿಎಸ್‌‍ಸಿ ಸದಸ್ಯರಾಗಿದ್ದ ಪ್ರೀತಿ ಸುದನ್‌ ಅವರ ನೇಮಕವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದಿಸಿದ್ದಾರೆ. ಪ್ರೀತಿ ಸುಡಾನ್‌ ಅವರು 37 ವರ್ಷಗಳ ಸರ್ಕಾರಿ ಆಡಳಿತದಲ್ಲಿ ಅನುಭವ ಹೊಂದಿದ್ದಾರೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿಯಂತಹ ಮಹತ್ವದ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ. ಜೊತೆಗೆ ಅವರು ಕೋವಿಡ್‌ ಸಾಂಕ್ರಾಮಿಕವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಅವರು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣಾ ಸಚಿವಾಲಯಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಆಡಳಿತದಲ್ಲಿ, ಹಣಕಾಸು ಯೋಜನೆ, ವಿಪತ್ತು ನಿರ್ವಹಣೆ, ಪ್ರವಾಸೋದ್ಯಮ ಮತ್ತು ಕೃಷಿ ಸೇರಿದಂತೆ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು.
ಅರ್ಥಶಾಸ್ತ್ರದಲ್ಲಿ ಎಂ.ಫಿಲ್‌ ಮತ್ತು ಎಂ.ಎಸ್ಸಿ, ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್‌್ಸನಿಂದ ಸಾಮಾಜಿಕ ನೀತಿ ಮತ್ತು ಯೋಜನೆಯಲ್ಲಿ ಬೇಟಿ ಬಚಾವೋ ಬೇಟಿ ಪಢಾವೋ ಮತ್ತು ಆಯುಷಾನ್‌ ಭಾರತ್‌ ಸೇರಿದಂತೆ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅವರು ರಾಷ್ಟ್ರೀಯ ವೈದ್ಯಕೀಯ ಆಯೋಗ, ಅಲೈಡ್‌ ಹೆಲ್ತ್‌ ಪೊಫೆಷನಲ್‌್ಸ ಕಮಿಷನ್‌ ಮತ್ತು ಇ-ಸಿಗರೇಟ್‌ಗಳ ನಿಷೇಧದಂತಹ ಮಹತ್ವದ ಶಾಸನಗಳಿಗೆ ಕೊಡುಗೆ ನೀಡಿದ್ದಾರೆ. ವಿಶ್ವಬ್ಯಾಂಕ್‌ನ ಸಲಹೆಗಾರರಾಗಿ ಅವರ ಅಧಿಕಾರಾವಧಿಯಿಂದ ಅನುಭವವು ಮತ್ತಷ್ಟು ಪುಷ್ಟೀಕರಿಸಲ್ಪಟ್ಟಿದೆ.

ಜುಲೈ 20ರಂದು ಡಾ ಮನೋಜ್‌ ಸೋನಿ ವೈಯಕ್ತಿಕ ಕಾರಣಗಳನ್ನು ನೀಡಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜುಲೈ 31, 2024 ರಿಂದ ಜಾರಿಗೆ ಬರುವಂತೆ ಯುಪಿಎಸ್‌‍ಸಿ ಅಧ್ಯಕ್ಷ ಸ್ಥಾನದಿಂದ ಡಾ ಸೋನಿ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಇದಕ್ಕೂ ಮೊದಲು, ಡಾ ಸೋನಿ 28 ಜೂನ್‌ 2017ರಿಂದ 15 ಮೇ 2023ರವರೆಗೆ ಯುಪಿಎಸ್‌‍ಸಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹೆಸರಾಂತ ಶಿಕ್ಷಣತಜ್ಞ ಮನೋಜ್‌ ಜೂನ್‌ 28, 2017ರಂದು ಯುಪಿಎಸ್‌‍ಸಿ ಸದಸ್ಯರಾಗಿ ಅಧಿಕಾರ ವಹಿಸಿಕೊಂಡಿದ್ದರು.

RELATED ARTICLES

Latest News