ಸಮಸ್ತಿಪುರ್, ನ.16 – ರೈಲಿನ ಬೋಗಿಯೊಂದರಲ್ಲಿ ಸ್ಪೋಟ ಸಂಭವಿಸಿ ಮಹಿಳೆ ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ಬಿಹಾರದ ಸಮಸ್ತಿಪುರ ರೈಲು ನಿಲ್ದಾಣದಲ್ಲಿ ನಡೆದಿದೆ. ಪ್ರಯಾಣಿಕರ ಬ್ಯಾಗ್‍ನೊಳಗಿದ್ದ ಗನ್‍ಪೌಡರ್‍ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ಸ್ಪೋಟ ಸಂಭವಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಮಿಳುನಾಡು, ಪುದುಚೇರಿಯಲ್ಲಿ ರಣಮಳೆ
ಭಾಗಲ್ಪುರ್-ದರ್ಬಂಗಾ ಇಂಟರ್‍ಸಿಟಿ ಎಕ್ಸ್‍ಪ್ರೆಸ್ ರೈಲು ಸಮಸ್ತಿಪುರ ರೈಲು ನಿಲ್ದಾಣದ ಹೊರ ಸಿಗ್ನಲ್‍ನಲ್ಲಿದ್ದಾಗ ಸ್ಪೋಟ ಸಂಭವಿಸಿದೆ. ಆರ್‍ಪಿಎಫ್ ಮತ್ತು ಜಿಆರ್‍ಪಿ ಸಿಬ್ಬಂದಿಯ ತಂಡವು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಮಲಗುವ ಸ್ಥಳದ ಮೇಲೆ ಇರಿಸಲಾಗಿದ್ದ ಬ್ಯಾಗ್‍ನಿಂದ ಹೊಗೆ ಕಾಣಿಸಿಕೊಂಡಿತು.
ಮತ್ತು ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮಾಹಿತಿ ನೀಡಿದ್ದಾರೆ. ಈ ಬೋಗಿಯಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸಲಾಯಿತು. ಮಧುಬನಿ ಜಿಲ್ಲೆಯ ನಿವಾಸಿಗಳಾದ ಅರವಿಂದ್ ಮಂಡಲ್ ಮತ್ತು ನವೆಂದು ಮಂಡಲ್ ಎಂಬ ಇಬ್ಬರು ಪ್ರಯಾಣಿಕರು ಪಟಾಕಿ ತಯಾರಿಸಲು ಗನ್‍ಪೌಡರ್‍ನ ಬ್ಯಾಗ್‍ನೊಂದಿಗೆ ರೈಲಿಗೆ ಹತ್ತಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.ಇಬ್ಬರನ್ನೂ ಬಂಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.