Wednesday, January 1, 2025
Homeರಾಷ್ಟ್ರೀಯ | Nationalತಮಿಳುನಾಡು : ತೋಟದ ಮನೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ತಮಿಳುನಾಡು : ತೋಟದ ಮನೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

Four of Chennai family found dead in Tiruvannamalai; suicide suspected

ತಿರುವಣ್ಣಾಮಲೈ(ತಮಿಳುನಾಡು),ಡಿ.29- ತಿರುವಣ್ಣಮಲೈ ಗಿರಿವಾಲಂ ಪಾತ್‌ನಲ್ಲಿರುವ ತೋಟದ ಮನೆಯಲ್ಲಿ ತಂಗಿದ್ದ ಚೆನ್ನೈ ಮೂಲದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಮೃತರನ್ನು ರುಕಿಣಿ ಪ್ರಿಯ (45), ಮಹಾಕಾಳವ್ಯಾಸ (55), ಮುಕುಂದ ಆಕಾಶ್‌ಕುಮಾರ್‌ (17) ಮತ್ತು ಜಲಂಧರಿ (20) ಎಂದು ಗುರುತಿಸಲಾಗಿದೆ. ಮೃತರು ಶಿವಗಂಗೆ ಜಿಲ್ಲೆಯವರಾಗಿದ್ದು, ಚೆನ್ನೈನಲ್ಲಿ ನೆಲೆಸಿದ್ದರು.

ಅಲ್ಲಿ ಅನೇಕ ವಸತಿ ನಿಲಯಗಳು, ಅಪಾರ್ಟ್‌ಮೆಂಟ್‌ಗಳು ಹಾಗೂ ಫಾರಂಹೌಸ್‌‍ ಗಳಿದ್ದು, ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಅಣ್ಣಾಮಲೆ ದೇವರ ದರ್ಶನಕ್ಕೆ ಬರುವ ಭಕ್ತರು ತೋಟದ ಮನೆಗಳನ್ನು ಬಾಡಿಗೆ ಪಡೆದು ತಂಗುತ್ತಾರೆ. ಇದೇ ರೀತಿ ಡಿ.26 ರಂದು ಚೆನ್ನೈನ ವ್ಯಾಸರವಾಡಿಯ ನಾಲ್ವರು ಆನ್‌ಲೈನ್‌ ಮೂಲಕ ಗಿರಿವಾಲಂ ಪಾತ್‌ನಲ್ಲಿರುವ ಫಾರಂಹೌಸ್‌‍ ಬುಕ್‌ ಮಾಡಿ ಶುಕ್ರವಾರ ಸುಮಾರು 1 ಗಂಟೆ ಸಮಯಕ್ಕೆ ತೋಟದ ಮನೆಗೆ ಬಂದಿದ್ದರು.

ಶನಿವಾರ ಬೆಳಗ್ಗೆ ಫಾರಂಹೌಸ್‌‍ ಸಿಬ್ಬಂದಿ ಅವರು ತಂಗಿದ್ದ ಕೊಠಡಿಯ ಬಾಗಿಲು ತಟ್ಟಿದ್ದಾರೆ. ಎಷ್ಟೇ ಸಮಯ ತಟ್ಟಿದರೂ ಅವರು ಬಾಗಿಲು ತೆರೆದಿರಲಿಲ್ಲ. ಬಾಗಿಲು ತೆರೆಯದ ಕಾರಣ ಬುಕ್ಕಿಂಗ್‌ ವೇಳೆ ನೀಡಿದ್ದ ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಿದರು. ಫೋನ್‌ ರಿಂಗ್‌ ಆಗುತ್ತಲೇ ಇತ್ತು. ಆದರೆ ಯಾರೂ ಕರೆ ಸ್ವೀಕರಿಸಲಿಲ್ಲ. ಬಳಿಕ ಕೊಠಡಿಯ ಕಿಟಕಿಯಿಂದ ನೋಡಿದಾಗ ನಾಲ್ವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವ ಹಾಗೆ ಕಂಡುಬಂದಿದೆ.

ಇದರಿಂದ ಗಾಬರಿಗೊಂಡ ಫಾರಂಹೌಸ್‌‍ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಿರುವಣ್ಣಾಮಲೈ ಜಿಲ್ಲಾ ಸಹಾಯಕ ಪೊಲೀಸ್‌‍ ವರಿಷ್ಠಾಧಿಕಾರಿ ಸತೀಶ್‌ ಕುಮಾರ್‌ ಅವರು ತಮ ಸಿಬ್ಬಂದಿ ಜೊತೆ ಕೂಡಲೇ ಸ್ಥಳಕ್ಕಾಗಮಿಸಿ ಅವರು ತಂಗಿದ್ದ ಕೊಠಡಿಯ ಬೀಗ ಒಡೆದು ಒಳಹೋಗಿ ಪರಿಶೀಲನೆ ನಡೆಸಿದಾಗ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ.

ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಸತೀಶ್‌ಕುಮಾರ್‌ ಮಾಧ್ಯಮದವರಿಗೆ ತಿಳಿಸಿದರು.

ಮೃತರು ತಂಗಿದ್ದ ಕೊಠಡಿಯಲ್ಲಿ ಡೆತ್‌ನೋಟ್‌ ಹಾಗೂ ವಿಡಿಯೋ ದೊರೆತಿದ್ದು, ಅದರ ಪ್ರಕಾರ, ತಿರುವಣ್ಣಾಮಲೈನಲ್ಲಿ ಸಾವನ್ನಪ್ಪಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿಂದ ನಾಲ್ವರೂ ಆತಹತ್ಯೆ ಮಾಡಿಕೊಂಡಿದ್ದಾರೆ.ಈ ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಅವರ ಸಂಬಂಧಿಕರು ಹಾಗೂ ಸ್ನೇಹಿತರ ವಿಚಾರಣೆ ನಡೆಸಲಾಗುವುದು ಎಂದು ಹೇಳೀದರು.

RELATED ARTICLES

Latest News