ದೇವಾಸ್,ಡಿ.21-ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಮನೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ದಂಪತಿ ಮತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ನಯಾಪುರ ಪ್ರದೇಶದಲ್ಲಿ ಬೆಳಗಿನ ಜಾವ 4.45ರ ಸುಮಾರಿಗೆ ಮನೆಯ ಆವರಣದಲ್ಲೇ ಇದ್ದ ಹಾಲಿನ ಪಾರ್ಲರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಅದೇ ಆವರಣದಲ್ಲಿ ಕುಟುಂಬವೊಂದು ವಾಸವಿತ್ತು ಎಂದು ನಹರ್ ದರ್ವಾಜ ಪೊಲೀಸ್ ಠಾಣೆ ಅಧಿಕಾರಿ ಮಂಜು ಯಾದವ್ ತಿಳಿಸಿದ್ದಾರೆ.
ಸಂತ್ರಸ್ತರಾದ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಉಸಿರುಗಟ್ಟುವಿಕೆ ಮತ್ತು ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ದಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದೆ.
ಮೃರತನ್ನು ದಿನೇಶ್ ಕಾರ್ಪೆಂಟರ್ (35), ಅವರ ಪತ್ನಿ ಗಾಯತ್ರಿ (30), 10 ವರ್ಷದ ಮಗಳು ಇಶಿಕಾ (10) ಮತ್ತು ಏಳು ವರ್ಷದ ಮಗ ಚಿರಾಗ್ ಎಂದು ಗುರುತಿಸಲಾಗಿದೆ.
ದಿನೇಶ್ ಅವರು ಕಟ್ಟಡದ ನೆಲ ಮಹಡಿಯಲ್ಲಿ ಡೈರಿ ಹೊಂದಿದ್ದು, ಎರಡನೇ ಮಹಡಿಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಟ್ ಹೇಳಿದ್ದಾರೆ.
ನೆಲಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ಹೊತ್ತಿಕೊಳ್ಳುವ ಕೆಲವು ವಸ್ತುಗಳನ್ನು ಅಲ್ಲಿ ಸಂಗ್ರಹಿಸಿಟ್ಟಿದ್ದರಿಂದ ಘಟನೆಯ ಬಗೆ ಅನುಮಾನ ವ್ಯಕ್ತವಾಗಿದೆ ಮತ್ತು ಎರಡನೇ ಮಹಡಿಯಲ್ಲಿದ್ದರೂ ಕುಟುಂಬವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಮತ್ತು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಎಸ್ಪಿ ಹೇಳಿದರು.
ವಿಧಿವಿಜ್ಞಾನ ತಂಡವು ತನಿಖೆ ನಡೆಸಿದ ನಂತರ ಬೆಂಕಿಗೆ ನಿಖರವಾದ ಕಾರಣ ತಿಳಿಯಲಿದೆ, ಘಟನೆಯು ಗಂಭೀರವಾಗಿದೆ ಮತ್ತು ಅಂತಹ ಅಪಘಾತಗಳನ್ನು ತಡೆಗಟ್ಟಲು ಪೊಲೀಸರು ಆಡಳಿತ ಮತ್ತು ಸ್ಥಳೀಯ ನಾಗರಿಕ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಗೆಹ್ಲೋಟ್ ಹೇಳಿದರು.