ಬೆಂಗಳೂರು,ನ.19- ನಕಲಿ ಕಂಪನಿಗಳನ್ನು ಸೃಷ್ಟಿಸಿ ಆ ಕಂಪನಿಗಳ ಮೂಲಕ ಫಲಾನುಭವಿಗಳಲ್ಲದ 869 ಮಂದಿಗೆ ಇಎಸ್ಐ ಕಾರ್ಡ್ ಮಾಡಿಸಿ ಇಎಸ್ಐ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸರ್ಕಾರಕ್ಕೆ ಕೊಟ್ಯಾಂತರ ರೂ. ನಷ್ಟ ಉಂಟು ಮಾಡುತ್ತಿದ್ದ ಇಎಸ್ಐ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಾರ್ಮಿಕರಲ್ಲದ ರೋಗಿಗಳು ಇಎಸ್ಐ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯ ಇಎಸ್ಐ ವ್ಯಾಪ್ತಿಗೆ ಒಳಪಡುವ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ಸಿಸಿಬಿ ಸಂಘಟನಾ ಅಪರಾಧ ದಳದ ಸಿಬ್ಬಂದಿ ಮಾಹಿತಿ ಕಲೆ ಹಾಕಿ ಬಂಧಿಸಿದ್ದಾರೆ.
ಆರೋಪಿಗಳಿಂದ 5 ಮೊಬೈಲ್, 459,500 ನಗದು, ನಕಲಿ ಕಂಪನಿಗಳ ಸೀಲ್, ವಿವಿಧ ಆಸ್ಪತ್ರೆಗಳ ವೈದ್ಯರ ಸೀಲ್, 4 ಲಾಪ್ಟಾಪ್ ಸೇರಿದಂತೆ ಇಎಸ್ಐ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ. ಒಬ್ಬ ಆರೋಪಿಯನ್ನು ಬಸವೇಶ್ವರನಗರದ ನಿವಾಸದಲ್ಲಿ, ಮತ್ತೊಬ್ಬ ಇಎಸ್ಐ ಸೆಕ್ಯೂರಿಟಿಗಾರ್ಡ್ ಹಾಗೂ ಮತ್ತೊಬ್ಬ ಆರೋಪಿಯನ್ನು ಹೆಸರುಘಟ್ಟ ಸಿಲ್ವೇಪುರದ ನಿವಾಸದಲ್ಲಿ ವಶಕ್ಕೆ ಪಡೆದು ಸುದೀರ್ಘ ವಿಚಾರಣೆಗೆ ಒಳಪಡಿಸಿ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಆರೋಪಿತ ಇಬ್ಬರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ನೋಟಿಸ್ ಜಾರಿ ಮಾಡಿ ಕಳುಹಿಸಲಾಗಿದೆ. ಈ ಆರೋಪಿಗಳು ಇಎಸ್ಐಸಿ ವೆಬ್ಸೈಟ್ನಲ್ಲಿ ಅಸ್ಥಿತ್ವದಲ್ಲಿಲ್ಲದ ಕಂಪನಿಗಳನ್ನು ನೋಂದಣಿ ಮಾಡಿಕೊಂಡು ಆಕಂಪನಿಗಳ ಸಹಾಯದಿಂದ ರಿಜಿಸ್ಟಾರ್ ಮಾಡಿಕೊಂಡ ಪ್ರತಿಯೊಬ್ಬರಿಂದ 20 ಸಾವಿರಕ್ಕೂ ಹೆಚ್ಚಿನ ಹಣವನ್ನು ಮುಂಗಡವಾಗಿ ಪಡೆದುಕೊಂಡು ನೌಕರರೆಂದು ಬಿಂಬಿಸಿ ಇಎಸ್ಐ ಕಾರ್ಡ್ ಮಾಡಿಸಿ ರೋಗಿಗಳಿಂದ ಪ್ರತಿ ತಿಂಗಳು 500 ಹಣ ಪಡೆದು ಇಎಸ್ಐ ಖಾತೆಗೆ 280 ಹಣ ಟ್ಟಿ ಉಳಿದ 220 ಹಣ ಪಡೆದುಕೊಳ್ಳುತ್ತಿದ್ದದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.