ಪಣಜಿ, ಮಾ.1- ಉತ್ತರ ಗೋವಾದ ಮಾಂಡ್ರೆಮ್ ಕಡಲತೀರದಲ್ಲಿ ಮುಳುಗುತ್ತಿದ್ದ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ರಷ್ಯನ್ನರನ್ನು ರಕ್ಷಿಸಲಾಗಿದೆ. ಗೋವಾ ಸರ್ಕಾರ ನೇಮಿಸಿದ ಜೀವರಕ್ಷಕ ಸಂಸ್ಥೆ ಸಿಬ್ಬಂದಿಗಳು ಕಡಲಿನಲ್ಲಿ ಮುಳುಗುತ್ತಿದ್ದ ನಾಲ್ವರು ವಿದೇಶಿ ಪ್ರವಾಸಿಗರನ್ನು ರಕ್ಷಿಸಿದ್ದಾರೆ.
ಈ ಪ್ರದೇಶದಲ್ಲಿ ಹಠಾತ್ ಮತ್ತು ಅನಿರೀಕ್ಷಿತ ಎತ್ತರದ ಅಲೆಗಳು ಉಲ್ಬಣಗೊಂಡ ನಂತರ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ನೀರಿನಲ್ಲಿ ಮುಳುಗತೊಡಗಿದರು. ಅವರಿಗೆ ಈಜಿ ದಡ ಸೇರಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ತಕ್ಷಣ ಕಾರ್ಯಚರಣೆ ನಡೆಸಿದ ಜೀವರಕ್ಷಕ ಸಿಬ್ಬಂದಿಗಳು ರಕ್ಷಣಾ ಮಂಡಳಿಯೊಂದಿಗೆ ನೀರಿಗೆ ಧಾವಿಸಿ ಅವರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾದರು.