ಮುಂಬೈ,ಜು.27- ನವಿ ಮುಂಬೈನ ಸಿಬಿಡಿ ಬೇಲಾಪುರ ಪ್ರದೇಶದಲ್ಲಿ ಇಂದು ಮುಂಜಾನೆ ನಾಲ್ಕು ಅಂತಸ್ತಿನ ವಸತಿ ಕಟ್ಟಡ ಕುಸಿದಿದ್ದು, ಇಬ್ಬರನ್ನು ರಕ್ಷಣೆ ಮಾಡಲಾಗಿದೆ.ರಕ್ಷಿಸಲ್ಪಟ್ಟವರನ್ನು ಲಾಲ್ ಮೊಹಮದ್ (22) ಮತ್ತು ರುಖ್ಸಾನಾ (21) ಎಂದು ಗುರುತಿಸಲಾಗಿದ್ದು, ಇತರರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕುಸಿದು ಬಿದ್ದ ಕಟ್ಟಡ ಕೇವಲ 10 ವರ್ಷ ಹಳೆಯದಾಗಿದೆ.
ಅವಶೇಷಗಳಡಿ ಸಿಲುಕಿರುವ ಇತರ ಮೂವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈ ಘಟನೆಯು ಶಹಬಾಜ್ ಗ್ರಾಮದಲ್ಲಿ ಮುಂಜಾನೆ 4.10 ಕ್ಕೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ವಸತಿ ಘಟಕಗಳು ಮತ್ತು ಮೂರು ಅಂಗಡಿಗಳನ್ನು ಹೊಂದಿರುವ ನಾಲ್ಕು ಅಂತಸ್ತಿನ ಕಟ್ಟಡವು ಇಂದು ಮುಂಜಾನೆ ಕುಸಿದಿದೆ. 13 ಮಕ್ಕಳು ಸೇರಿದಂತೆ ಐವತ್ತೆರಡು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ಒಬ್ಬ ಪುರುಷ ಮತ್ತು ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ವ್ಯಕ್ತಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ನವಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಎಂಎಅಸಿ) ಆಯುಕ್ತ ಕೈಲಾಸ್ ಶಿಂಧೆ ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್‌ಎಫ್) ಮತ್ತು ನಾಗರಿಕ ಸಂಸ್ಥೆಯ ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದರು ಮತ್ತು ಇತರರನ್ನು ಹೊರತೆಗೆಯುವ ಕಾರ್ಯ ನಡೆಸಿದ್ದಾರೆ.
ಎನ್‌ಎಂಎಅಸಿಯ ವಿಭಾಗೀಯ ಅಗ್ನಿಶಾಮಕ ಅಧಿಕಾರಿ ಪುರುಷೋತ್ತಮ್ ಜಾಧವ್ ಅವರು ಪಿಟಿಐಗೆ ತಿಳಿಸಿದ್ದಾರೆ. ಆರಂಭದಲ್ಲಿ, ಬೆಳಿಗ್ಗೆ 6 ಗಂಟೆ ಸುಮಾರಿಗೆ ರಕ್ಷಿಸಲ್ಪಟ್ಟ ಇಬ್ಬರು ವ್ಯಕ್ತಿಗಳನ್ನು ಹೊರತುಪಡಿಸಿ, ಒಬ್ಬ ವ್ಯಕ್ತಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಭಯದಿಂದ ಮತ್ತು ರಕ್ಷಣಾ ತಂಡಗಳು ಅವರ ಮೊಬೈಲ್‌ಗೆ ಕರೆ ಮಾಡಲು ಪ್ರಯತ್ನಿಸಿದವು, ಆದರೆ ವ್ಯರ್ಥವಾಯಿತು.