Monday, December 29, 2025
Homeರಾಜ್ಯಗೃಹಸಚಿವ ಪರಮೇಶ್ವರ್ ರಾಜೀನಾಮೆಗೆ ಬಿಜೆಪಿ ಒತ್ತಾಯ

ಗೃಹಸಚಿವ ಪರಮೇಶ್ವರ್ ರಾಜೀನಾಮೆಗೆ ಬಿಜೆಪಿ ಒತ್ತಾಯ

BJP demands Home Minister Parameshwara's resignation

ಬೆಂಗಳೂರು,29-ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ದಂಧೆ ಪ್ರಕರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್ ತಕ್ಷಣವೇ ತಮ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಂತಿ ಸುವ್ಯವಸ್ಥೆಗೆ ಹೆಸರಾಗಿದ್ದ ಕರ್ನಾಟಕ ಇಂದು ಬೇರೆ ಬೇರೆ ಕಾರಣಗಳಿಂದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಇದಕ್ಕೆ ಗೃಹ ಇಲಾಖೆ ಮತ್ತು ಗೃಹಸಚಿವರು ವಿಫಲರಾಗಿರುವುದೇ ಸಾಕ್ಷಿ ಎಂದು ದೂರಿದರು.

ರಾಜ್ಯದಲ್ಲಿ ಡ್ರಗ್‌ ಫ್ಯಾಕ್ಟರಿಗಳು ತಲೆ ಎತ್ತುತ್ತಿವೆ. ಕರ್ನಾಟಕ ಸರ್ಕಾರವೇ ಡ್ರಗ್‌ ಸರ್ಕಾರ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಡ್ರಗ್‌ ಮಾಫಿಯಾ ಮಿತಿಮೀರಿದೆ, ಎಲ್ಲ ಗೊತ್ತಿದ್ದೂ ಸರ್ಕಾರ ನಿಯಂತ್ರಣ ಮಾಡುತ್ತಿಲ್ಲ. ಸರ್ಕಾರವೇ ಡ್ರಗ್‌ ಮಾಫಿಯಾ ನಡೆಸುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದರು.

ನಮ ಪೊಲೀಸರಿಗೆ ಡ್ರಗ್‌ ಫ್ಯಾಕ್ಟರಿ ಇರುವುದೇ ಗೊತ್ತಿಲ್ಲ. ಮಹಾರಾಷ್ಟ್ರ ಪೊಲೀಸರು ಬಂದು ತೋರಿಸಿ ಕೊಟ್ಟಿದ್ದಾರೆ. ನಮ ಗೃಹ ಇಲಾಖೆ ಸತ್ತಿದೆಯಾ? ಬೇಹುಗಾರಿಕೆಯವರು ಪೊಲೀಸರು ಏನು ಮಾಡುತ್ತಿದ್ದಾರೆ? ಮಹಾರಾಷ್ಟ್ರ ಪೊಲೀಸರು ಪತ್ತೆ ಮಾಡಿದ ಮೇಲೆ ನಮವರು ಏನೋ ಘನಕಾರ್ಯ ಮಾಡಿದವರಂತೆ ತಾವೇ ಪತ್ತೆ ಮಾಡಿದಂತೆ ಮಾತನಾಡುತ್ತಾರೆ. ಗೃಹ ಇಲಾಖೆ ನಡೆಸಲು ಆಗದಿದ್ದರೆ ಪರಮೇಶ್ವರ್‌ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.

ಎಷ್ಟು ದಿನ ಸಬೂಬು ಹೇಳುತ್ತೀರಿ? ಇಲಾಖೆ ಬಿಡಿ, ಬೇರೆಯವರಾದರೂ ಬರುತ್ತಾರೆ. ಪರಮೇಶ್ವರ್‌ ಅಸಹಾಯಕತೆಯೋ? ಅಥವಾ ಅವರ ವಿರುದ್ಧ ಷಢ್ಯಂತ್ರ ನಡೆಯುತ್ತಿದೆಯೋ? ಅದನ್ನು ಪರಮೇಶ್ವರ್‌ ಹೇಳಲಿ. ಇಲ್ಲವೇ ರಾಜೀನಾಮೆ ಕೊಡಲಿ ಎಂದು ಅವರು ಪುನರುಚ್ಚರಿಸಿದರು.

ಕೋಗಿಲು ಲೇಔಟ್‌ ತೆರವು ಪ್ರಕರಣ ಕುರಿತು ಮಾತನಾಡಿದ ಅವರು, ಕೋಗಿಲು ಲೇಔಟ್‌ನಲ್ಲಿ ರೋಹಿಂಗ್ಯಾಗಳು ವಾಸ ಇದ್ದಾರೆ ಅಂತ ಐದಾರು ವರ್ಷಗಳಿಂದ ನಮಗೆ ಮಾಹಿತಿ ಬರುತ್ತಿತ್ತು. ಅವರ ವಿರುದ್ಧ ಹೋರಾಟಗಳೂ ನಮ ಕಡೆಯಿಂದ ನಡೆದಿವೆ. ಎಲ್ಲವೂ ಕೃಷ್ಣಭೈರೇಗೌಡರಿಗೆ ಗೊತ್ತಿದೆ ಎಂದರು.

ಕಳೆದ ವಾರ ತೆರವು ಕಾರ್ಯಾಚರಣೆ ಮಾಡಲಾಗಿದೆ. ಈಗ ಅದಕ್ಕೆ ಬೇರೆ ತಿರುವು ಸಿಕ್ಕಿದೆ. ಪಿಣರಾಯಿ ವಿಜಯನ್‌ ಅವರು ಇದಕ್ಕೆ ಬುಲ್ಡೋಜರ್‌ ನೀತಿ ಅಂತ ಲೇಬಲ್‌ ಹಚ್ಚಿದರು. ಆಮೇಲೆ ಅದಕ್ಕೆ ಬೇರೆ ಆಯಾಮ ಸಕ್ಕಿತು. ಕೃಷ್ಣಭೈರೇಗೌಡ ಅವರು ತಟಸ್ಥರಾದರು. ನಂತರ ವೇಣುಗೋಪಾಲ್‌ ಅವರು ಪುನರ್ವಸತಿಗೆ ಸೂಚನೆ ಕೊಟ್ಟರು. ಸಿಎಂ ಅದರಂತೆ ಮುಂದಾಗಿದ್ದಾರೆ ಎಂದರು.

ಕೇರಳದವರು ಅಲ್ಲಿ ಗುಡಿಸಲು ಹಾಕಿದ್ರಾ? ಪಿಣರಾಯಿಗೂ ಇಲ್ಲಿಗು ಸಂಬಂಧ ಏನು? ಇಲ್ಲಿ ಏನು ನಡೀತಿದೆ? ರಾಜ್ಯದಲ್ಲಿ ಕೇರಳದಿಂದ ಬಂದವರು ಯಾರೂ ಗುಡಿಸಲು ಹಾಕಿ ವಾಸ ಮಾಡುತ್ತಿಲ್ಲ, ಹಾಗಾದರೆ ಪಿಣರಾಯಿಗೇನು ಸಂಬಂಧ? ಸಿದ್ದರಾಮಯ್ಯ ದುರ್ಬಲ ಆದರೇ ಎಂದು ಪ್ರಶ್ನಿಸಿದರು.
ಬೇರೆ ರಾಜ್ಯದವರು ಇಲ್ಲಿಗೆ ಬಂದು ಒತ್ತಡ ಹಾಕುತ್ತಿದ್ದಾರೆ. ಇವರು ಗುಲಾಮರಾಗಿದ್ದಾರೆ, ನೀವು ಯಾರ ಗುಲಾಮರಾದರೂ ಆಗಿ, ವೇಣುಗೋಪಾಲ್‌ ಗುಲಾಮರಾಗಿ ನೀವು ಬೇಕಾದರೆ ಗುಲಾಮರಾದರೆ ನಮ ನಾಡು, ನಮ ಜನರನ್ನು ಗುಲಾಮರಾಗಿ ಮಾಡಬೇಡಿ. ವೇಣುಗೋಪಾಲ್‌ ಯಾರು ನಮ ಆಡಳಿತಲ್ಲಿ ತಲೆ ಹಾಕಲು? ಎಂದು ಪ್ರಶ್ನಿಸಿದರು.

ಕೋಗಿಲು ಲೇಔಟ್‌ ತೆರವಿಗೆ ಸಿಎಂ ಆದೇಶ ಮಾಡಿದ ಮೇಲೆ ಇನ್ನೇನಿದೆ? ಸರ್ಕಾರದಲ್ಲಿ ವ್ಯವಸ್ಥಿತ ಪಿತೂರಿ ನಡೆಯುತ್ತಿದ.ಎ ಕೋಗಿಲು ಲೇಔಟ್‌ನಲ್ಲಿದ್ದವರಿಗೆ ಪುನರ್ವಸತಿ ಕೊಡುತ್ತಿದ್ದಾರೆ. ಆ ಜನ ಯಾರು? ಎಲ್ಲಿಯವರು ಎಂಬುದನ್ನು ಸರ್ಕಾರ ಪರಿಶೀಲನೆ ಮಾಡಿದೆಯೇ? ಬಾಂಗ್ಲಾದಿಂದ ಬಂದವರಿಗೆ ಮನೆಗಳನ್ನು ಕೊಡ್ತಿದ್ದೀರಿ, ಇದು ಸರಿಯಲ್ಲ. ಹೊರ ರಾಜ್ಯ, ಹೊರದೇಶಗಳಿಂದ ಬಂದವರಿಗೆ ಮನೆ ಕೊಡುತ್ತಿದೆ ಈ ಸರ್ಕಾರ ಎಂದು ದೂರಿದರು.
ಮುಖ್ಯವಾಗಿ ಆ ಜನ ಯಾರೆಂದು ಪರಿಶೀಲನೆ ಮಾಡಬೇಕು? ಅಲ್ಲಿದ್ದವರಿಂದ ಹಣ ಪಡೆದು ಸೈಟು ಮಾರಿದ ವಸೀಮ್‌ ನನ್ನ ಇನ್ನೂ ಯಾಕೆ ಬಂಧಿಸಿಲ್ಲ? ಎಂಥ ಗುಜರಿ ಸರ್ಕಾರ ನಡೆಸುತ್ತಿದ್ದೀರಿ ನೀವು? ಎಂಥ ಗುಲಾಮಗಿರಿ ಸರ್ಕಾರ ಇದು ಎಂದು ಟೀಕಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬಹಳ ತಾಕತ್ತಿನ ಮನುಷ್ಯ ಅಂದುಕೊಂಡಿದ್ದಾರೆ. ಆದರೆ ಅವರು ಠುಸ್‌‍ ಪಟಾಕಿ ಎಂದು ವ್ಯಂಗ್ಯವಾಡಿದರು.
ಇದೇ ಸಂದರ್ಭಲದಲಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಪೋಸ್ಟರ್‌ ಬಿಡುಗಡೆ ಮಾಡಿದರು. ಕಾಂಗ್ರೆಸ್‌‍ ದುರಾಡಳಿತದಿಂದ ಗಂಧದನಾಡು ಗಾಂಜಾ ಬೀಡಾಗ್ತಿದೆ, ರಾಜೀನಾಮೆ ಯಾವಾಗ ಎಂದು ಬರೆದಿರುವ ಬಿಜೆಪಿ ಸರ್ಕಾರವೇ ಗಾಂಜಾ ಹೊಡೆದಿರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದೆ.

RELATED ARTICLES

Latest News