ಸಿಡ್ನಿ(ಆಸ್ಟ್ರೇಲಿಯಾ): ಸಿಡ್ನಿಯ ಜನಪ್ರಿಯ ಪ್ರವಾಸಿ ತಾಣ ಬಂಡಿ ಬೀಚ್‌ನಲ್ಲಿ ಇಬ್ಬರು ಬಂದೂಕುಧಾರಿಗಳು ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದು, 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾನುವಾರ ಸಂಜೆ 6.30 (ಸ್ಥಳೀಯ ಕಾಲಮಾನ)ರ ಸುಮಾರಿಗೆ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾದಬೊಂಡಿ ಬೀಚ್‌ನಲ್ಲಿ ಹನುಕ್ಕಾ ಎಂಬ ಹಬ್ಬ ಆಚರಣೆ ಮುಂದಾಗಿದ್ದ ಜನರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಭಯಾನಕ ದಾಳಿಯಿಂದಾಗಿ 12 ಜನರು ಮೃತಪಟ್ಟಿದ್ದು, ಇಬ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಬಂದೂಕುಧಾರಿಗಳು ಮನಬಂದಂತೆ 50 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.. ಘಟನೆಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಪ್ರಧಾನಿ ಆಘಾತ ವ್ಯಕ್ತಪಡಿಸಿದ್ದಾರೆ.
ಸದ್ಯ ಇಬ್ಬರು ಶೂಟರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. 2019ರಲ್ಲಿ ನ್ಯೂಜಿಲೆಂಡ್‌ನಲ್ಲಿರುವ ಎರಡು ಮಸೀದಿಗಳಲ್ಲಿ ಭಯಾನಕ ಗುಂಡಿನ ದಾಳಿ ನಡೆದಿತ್ತು ಸಿಡ್ನಿಯಲ್ಲಿ ಹನುಕ್ಕಾ ಎಂಬ ಎಂಟು ದಿನಗಳ ಕಾಲ ನಡೆಯುವ ಯಹೂದಿಗಳ ಹಬ್ಬ ಆರಂಭವಾಗುತ್ತಿರುವ ಹಿನ್ನೆಲೆ ಈ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ. ಆಸ್ಟ್ರೇಲಿಯಾ ಕಾಲಮಾನ ಸಂಜೆ 6:30ರ ಸುಮಾರಿಗೆ ನೂರಾರು ಜನರು ಹಬ್ಬವನ್ನು ಆಚರಿಸಲು ಕಡಲತೀರದಲ್ಲಿ ಜಮಾಯಿಸಿದ್ದರು. ಈ ವೇಳೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿದೆ.
ನಡೆದದ್ದು ಏನು ..?
ಜನರು ಬೀಚ್‌ನಲ್ಲಿ ಆನಂದಿಸುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಬಂದೂಕುಧಾರಿಗಳು ಪ್ರವೇಶಿಸಿದ್ದಾರೆ. ನಂತರ ಮನಸೋಇಚ್ಛೆ ಗುಂಡು ಹಾರಿಸಲು ಶುರು ಮಾಡಿದ್ದಾರೆ. ನೂರಾರು ಪ್ರವಾಸಿಗರು ತಮ್ಮ ಜೀವ ಉಳಿಸಿಕೊಳ್ಳಲು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಪ್ಪು ಮುಖವಾಡ ಧರಿಸಿದ ಇಬ್ಬರು ಶಾಟ್‌ಗನ್‌ಗಳೊಂದಿಗೆ ಸರ್ಫ್ ಕ್ಲಬ್‌ನ ಪಕ್ಕದ ಪಾದಚಾರಿ ಸೇತುವೆಯ ಬಳಿ ಬಂದು ಗುಂಡು ಹಾರಿಸಿದ್ದಾರೆ. ಮುಖ್ಯವಾಗಿ, ಅಲ್ಲಿ ನಡೆಯುತ್ತಿದ್ದ ಯಹೂದಿಗಳ ಕಾರ್ಯಕ್ರಮವನ್ನೇ ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ. ಭೀಕರ ದಾಳಿಯಲ್ಲಿ ಕನಿಷ್ಟ 10 ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯಾದ ಪತ್ರಿಕೆಗಳು ವರದಿ ಮಾಡಿವೆ.
ಆಸ್ಟ್ರೇಲಿಯಾಯ್ ಪ್ರಧಾನಿ ಪ್ರತಿಕ್ರಿಯೆ :
ಬೊಂಡಿಯಲ್ಲಿ ನಡೆದ ಘಟನೆ ತೀವ್ರ ನೋವುಂಟು ಮಾಡಿದೆ. ಪೊಲೀಸರು ಮತ್ತು ತುರ್ತು ರಕ್ಷಣಾ ಸಿಬ್ಬಂದಿ ಸಂಕಷ್ಟದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ಶ್ರಮಿಸಿದ್ದಾರೆ. ಸಂತ್ರಸ್ತರ ಕುಟುಂಬಗಳೊಂದಿಗೆ ನಾನಿದ್ದೇನೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಆಲ್ಬನೀಸ್‌ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನೆತನ್ಯಾಹುವಿ ಆರೋಪ :
ಆಸ್ಟ್ರೇಲಿಯಾದ ಸಿಡ್ನಿಯ ಬಾಂಡಿ ಬೀಚ್ ನಲ್ಲಿ ಯಹೂದಿಗಳ ಆಚರಣೆಯನ್ನು ಗುರಿಯಾಗಿಸಿಕೊಂಡ ನಡೆದ ದಾಳಿ ಬಳಿಕ ಆಸ್ಟ್ರೇಲಿಯಾ ಸರ್ಕಾರ ಯಹೂದಿ ವಿರೋಧಿ ನೀತಿಯನ್ನು ಉತ್ತೇಜಿಸುತ್ತಿದೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಪಿಸಿದ್ದಾರೆ.
ಪ್ಯಾಲೇಸ್ಟಿನಿಯನ್ ರಾಜ್ಯತ್ವವನ್ನು ಗುರುತಿಸುವುದಾಗಿ ಕ್ಯಾನ್ ಬೆರಾ ಘೋಷಿಸಿದ ನಂತರ ಆಗಸ್ಟ್‌ನಲ್ಲಿ ಆಂಥೋನಿ ಅಲ್ಬನೀಸ್‌ಗೆ ಕಳುಹಿಸಿದ ಪತ್ರವನ್ನು ಉಲ್ಲೇಖಿಸಿದ ನೆತನ್ಯಾಹು ಹೇಳಿದ್ದಾರೆ.
ಮೂರು ತಿಂಗಳ ಹಿಂದೆಯೇ ‘ನಿಮ್ಮ ನೀತಿಯು ಯಹೂದಿ ವಿರೋಧಿ ನೀತಿಯ ಬೆಂಕಿ ಮೇಲೆ ತುಪ್ಪ ಸುರಿದಂತೆ ಎಂದು ಆಸ್ಟ್ರೇಲಿಯಾದ ಪ್ರಧಾನಿಗೆ ಬರೆದಿದ್ದಾಗಿ ತಿಳಿಸಿದ್ದಾರೆ.
