Saturday, December 6, 2025
Homeರಾಜ್ಯ'ಭ್ರಷ್ಟಾಚಾರ' ಹೇಳಿಕೆ ದುರ್ಬಳಕೆ : ನ್ಯಾಯಮೂರ್ತಿ ವೀರಪ್ಪ ಬೇಸರ

‘ಭ್ರಷ್ಟಾಚಾರ’ ಹೇಳಿಕೆ ದುರ್ಬಳಕೆ : ನ್ಯಾಯಮೂರ್ತಿ ವೀರಪ್ಪ ಬೇಸರ

ಬೆಂಗಳೂರು,ಡಿ.5- ನನ್ನ ಹೇಳಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಉಪ ಲೋಕಾಯುಕ್ತ ವೀರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನ್ನ ಹೇಳಿಕೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಬೇಡಿ ಎಂದು ರಾಜಕಾರಣಿಗಳಲ್ಲಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಎಲ್ಲಾ ಸರ್ಕಾರಗಳೂ ಕೂಡ ಭ್ರಷ್ಟಾಚಾರದಲ್ಲಿವೆ.

ನಾನು ಮಾತನಾಡುವಾಗ ಯಾವ ಸರ್ಕಾರ ಎಂದು ಹೇಳಿಲ್ಲ. ಭ್ರಷ್ಟಾಚಾರಕ್ಕೆ ಸಮಾಜ ಹಾಗೂ ಜನರೂ ಕೂಡ ಕಾರಣ ಎಂದು ಹೇಳಿದ್ದಾರೆ. ನನ್ನ ಹೇಳಿಕೆಯನ್ನು ರಾಜಕೀಯ ನಾಯಕರು ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ ಮತ್ತು ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಕಿಡಿಕಾರಿದ್ದಾರೆ.

ಭಾರತದಲ್ಲಿ ಯಾವ ಯಾವ ರಾಜ್ಯದಲ್ಲಿ ಭ್ರಷ್ಟಾಚಾರ ಇದೆ ಎಂಬ ಸರ್ವೆ ನಡೆದಿತ್ತು. ಈ ವೇಳೆ ನಾನು ಮಾತನಾಡಿದ್ದೇನೆ. ಯಾವ ಸರ್ಕಾರವನ್ನು ಗಮನದಲ್ಲಿಟ್ಟುಕೊಂಡು ಇದನ್ನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

RELATED ARTICLES

Latest News