Thursday, January 1, 2026
Homeರಾಜ್ಯಬೆಂಗಳೂರು-ಕರಾವಳಿ ಜಿಲ್ಲೆಗಳ ನಡುವೆ ರೈಲಲ್ಲಿ ಸಂಚರಿಸುವವರಿಗೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು-ಕರಾವಳಿ ಜಿಲ್ಲೆಗಳ ನಡುವೆ ರೈಲಲ್ಲಿ ಸಂಚರಿಸುವವರಿಗೆ ಇಲ್ಲಿದೆ ಗುಡ್ ನ್ಯೂಸ್

Here is good news for those traveling by train between Bengaluru and coastal districts

ಬೆಂಗಳೂರು,ಜ.1- ಕರಾವಳಿ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರು ನಡುವಿನ ಪ್ರಯಾಣದ ವೇಗವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಬಹುನಿರೀಕ್ಷಿತ ಬೆಂಗಳೂರು-ಮಂಗಳೂರು ವಂದೇ ಭಾರತ್‌ ಎಕ್ಸ್ ಪ್ರೆಸ್‌‍ ರೈಲು ಶೀಘ್ರದಲ್ಲೇ ಹಳಿಗೆ ಬರಲಿದೆ. ಈ ಮೂಲಕ ದಕ್ಷಿಣಕನ್ನಡದ ಪುಣ್ಯಕ್ಷೇತ್ರಗಳಿಗೆ ಮತ್ತು ಪ್ರವಾಸಿ ತಾಣಗಳಿಗೆ ತೆರಳುವವರಿಗೆ ಸುಸಜ್ಜಿತ ಹಾಗೂ ವೇಗವಾಗಿ ಪ್ರಯಾಣ ಮಾಡಬಹುದಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು, ಮಂಗಳೂರು ಮತ್ತು ಬೆಂಗಳೂರು ನಡುವಿನ ವಂದೇ ಭಾರತ್‌ ರೈಲು ಸೇವೆ ಈಗಾಗಲೇ ಅಂತಿಮ ಹಂತದಲ್ಲಿದೆ. ಕರ್ನಾಟಕದ ರಮಣೀಯ ಪಶ್ಚಿಮ ಘಟ್ಟಗಳ ಮೂಲಕ ಐಕಾನಿಕ್‌ ವಂದೇ ಭಾರತ್‌ ರೈಲುಗಳು ಶೀಘ್ರದಲ್ಲೇ ಓಡುವುದನ್ನು ಜನರು ಕಾಣಬಹುದು. ಇದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಇನ್ಫೋಸಿಸ್‌‍ನ ಮಾಜಿ ಸಿಎಫ್‌ಒ ಮೋಹನದಾಸ್‌‍ ಪೈ ಅವರು ಈ ರೈಲು ಮಾರ್ಗದ ಬಗ್ಗೆ ಮಾಡಿದ್ದ ಪೋಸ್ಟ್‌ ಹಾಗೂ ಸಾರ್ವಜನಿಕರ ನಿರಂತರ ಒತ್ತಾಯಕ್ಕೆ ಕೇಂದ್ರ ಸರ್ಕಾರ ಈ ಮೂಲಕ ಸಕಾರಾತಕವಾಗಿ ಸ್ಪಂದಿಸಿದೆ.

ಈ ಹೈಸ್ಪೀಡ್‌ ರೈಲು ಸಂಚಾರಕ್ಕೆ ಅತಿದೊಡ್ಡ ಸವಾಲಾಗಿದ್ದ ಸಕಲೇಶಪುರ ಮತ್ತು ಸುಬ್ರಹಣ್ಯ ರಸ್ತೆಯ ನಡುವಿನ 55 ಕಿ.ಮೀ ಘಾಟ್‌ ರಸ್ತೆ ವಿಭಾಗದ ವಿದ್ಯುಧೀಕರಣ ಕಾರ್ಯವು ಈಗ ಪೂರ್ಣಗೊಂಡಿದೆ. ಇದು ಅತ್ಯಂತ ಕಠಿಣ ಮೈಲಿಗಲ್ಲಾಗಿದ್ದು, ಈಗ ರೈಲು ಹಳಿ ಮೇಲೆ ಓಡಲು ಹಸಿರು ನಿಶಾನೆ ಸಿಕ್ಕಂತಾಗಿದೆ. ಘಾಟ್‌ರಸ್ತೆ ವಿಭಾಗದಲ್ಲಿ ಸಂಪೂರ್ಣ ವಿದ್ಯುಧೀಕರಣವಾಗಿರುವುದರಿಂದ ರೈಲು ಕಾರ್ಯಾಚರಣೆಯು ಸ್ವಚ್ಛ, ತ್ವರಿತ ಮತ್ತು ಹೆಚ್ಚು ಇಂಧನ ಉಳಿತಾಯ ಮಾಡಲಿದೆ.

ಲಾಭಗಳೇನು?
ವೇಗದ ಪ್ರಯಾಣ: ಪ್ರಸ್ತುತ ಇರುವ ರೈಲುಗಳಿಗಿಂತ ವಂದೇ ಭಾರತ್‌ ವೇಗವಾಗಿ ಚಲಿಸುವುದರಿಂದ ಪ್ರಯಾಣದ ಅವಧಿ ಗಣನೀಯವಾಗಿ ಇಳಿಕೆಯಾಗಲಿದೆ. ಆರಾಮದಾಯಕ ಸೀಟುಗಳು: ಸೆಮಿ-ಹೈಸ್ಪೀಡ್‌ ರೈಲಿನಲ್ಲಿ ವಿಶ್ವದರ್ಜೆಯ ಸೌಲಭ್ಯಗಳು, ಆರಾಮದಾಯಕ ಸೀಟುಗಳು ಮತ್ತು ಉತ್ತಮ ಆಹಾರ ವ್ಯವಸ್ಥೆ ಇರಲಿದೆ.

ಪ್ರವಾಸೋದ್ಯಮಕ್ಕೆ ಬಲ: ಪಶ್ಚಿಮ ಘಟ್ಟಗಳ ಹಸಿರು ಬೆಟ್ಟಗಳು ಮತ್ತು ಜಲಪಾತಗಳ ನಡುವೆ ಈ ರೈಲು ಸಾಗುವುದರಿಂದ ಪ್ರವಾಸಿಗರಿಗೆ ಇದೊಂದು ಅವಿಸರಣೀಯ ಅನುಭವ ನೀಡಲಿದೆ. Here is good news for those traveling by train between Bengaluru and coastal districtsಪುಣ್ಯಕ್ಷೇತ್ರಗಳ ದರ್ಶನ: ಕುಕ್ಕೆ ಸುಬ್ರಹಣ್ಯ, ಧರ್ಮಸ್ಥಳ ಹಾಗೂ ಮಂಗಳೂರಿನ ದೇವಸ್ಥಾನಗಳಿಗೆ ಹೋಗುವ ಭಕ್ತರಿಗೆ ಈ ರೈಲು ವರದಾನವಾಗಲಿದೆ.

RELATED ARTICLES

Latest News