Sunday, January 11, 2026
Homeರಾಜ್ಯಆಹಾರ-ಆತಿಥ್ಯ ವಲಯದಲ್ಲಿ ಬೆಟ್ಟದಷ್ಟು ಅವಕಾಶ

ಆಹಾರ-ಆತಿಥ್ಯ ವಲಯದಲ್ಲಿ ಬೆಟ್ಟದಷ್ಟು ಅವಕಾಶ

Huge opportunities in the food and hospitality sector

ಬೆಂಗಳೂರು,ಜ.10- ಆಹಾರ ಮತ್ತು ಆತಿಥ್ಯ ವಲಯದಲ್ಲಿ ಬೆಟ್ಟದಷ್ಟು ಅವಕಾಶಗಳಿದ್ದು, ಅದರ ಸದ್ಬಳಿಕೆ ಮಾಡಿಕೊಳ್ಳಬೇಕೆಂದು ಫಸ್ಟ್‌ ಸರ್ಕಲ್‌ನ ಮುಖ್ಯ ಮಾರ್ಗದರ್ಶಕ ಜಯರಾಂ ರಾಯಪುರ ತಿಳಿಸಿದರು.

ಫಸ್ಟ್‌ ಸರ್ಕಲ್‌ ಅರಮನೆ ಮೈದಾನದಲ್ಲಿಂದು ಹಮಿಕೊಂಡಿದ್ದ ಉದ್ಯಮಿ ಒಕ್ಕಲಿಗ
ಎಕ್‌್ಸ ಪೋದಲ್ಲಿ ಆಹಾರ ಮತ್ತು ಆತಿಥ್ಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಆಹಾರ ಮತ್ತು ರೆಸ್ಟೋರೆಂಟ್‌ಗಳಿಗೆ ವಿಫುಲ ಅವಕಾಶಗಳಿವೆ. ಬೆಂಗಳೂರು ಸುತ್ತಮುತ್ತ ಹೋಂಸ್ಟೇ, ರೆಸ್ಟೋರೆಂಟ್‌, ರೆಸಾರ್ಟ್‌ಗಳನ್ನು ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಸಲಹೆ ಮಾಡಿದರು.

ಸಿದ್ದಾರ್ಥ್‌ ಅವರು ಪ್ರಾರಂಭಿಸಿದ ಕಾಫಿ ಡೇ ಪಾನೀಯ ಉದ್ಯಮಕ್ಕೆ
ಮಾದರಿಯಾಗಿದೆ. ಕೊಡಗು, ಸಕಲೇಶಪುರ, ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಹಚ್ಚಿನ ಅವಕಾಶಗಳಿವೆ. ಸಾರಿಗೆ ವ್ಯವಸ್ಥೆಗಳು ಸುಧಾರಿಸಿವೆ. ದೊಡ್ಡ ಮಟ್ಟದಲ್ಲಿ ಈ ಉದ್ಯಮವನ್ನು ಮಾಡಬಹುದಾಗಿದೆ ಎಂದರು.

ಸರ್ಕಾರ ಆಹಾರ ಸಂಸ್ಕರಣೆಗೆ ಒತ್ತು ಕೊಟ್ಟಿವೆ. ಆದರೆ ಹೋಂಸ್ಟೇಗಳಿಗೆ ಉತ್ತೇಜನ ನೀಡುವ ಬದಲು ಕಡಿವಾಣ ಹಾಕುವ ಪ್ರಯತ್ನವಾಗಿದೆ. ಸರ್ಕಾರದ ಸಹಾಯವಿಲ್ಲದಿದ್ದರೂ ಉತ್ತಮವಾಗಿ ಬೆಳವಣಿಗೆ ಕಂಡಿವೆ ಎಂದು ಹೇಳಿದರು.ಪಾನೀಯ ವ್ಯವಸ್ಥೆ ಮೊದಲಿನಿಂದಲೂ ಇತ್ತು. ಅದಕ್ಕೊಂದು ಬ್ರಾಂಡ್‌ ವ್ಯವಸ್ಥೆ ಕೊಟ್ಟಾಗ ಜನಪ್ರಿಯತೆ ಹೆಚ್ಚಾಗುತ್ತದೆ ಎಂದರು.

ಉದ್ಯಮಿ ಕಿಮನೆ ಜಯರಾಂ ಮಾತನಾಡಿ, ಆಹಾರ ಉದ್ಯಮದಲ್ಲಿ ಆತಿಥ್ಯ ಉದ್ಯಮ ದೊಡ್ಡದಾಗಿದೆ. ಆಹಾರ ಮತ್ತು ಆತಿಥ್ಯ ಉದ್ಯಮ ಪ್ರಾರಂಭಿಸುವವರು ಆತುರಾತುರವಾಗಿ ಮಾಡಬಾರದು. ಯೋಜಿತ ರೀತಿಯಲ್ಲಿ ವ್ಯವಸ್ಥಿತವಾಗಿ ಮಾಡಬೇಕು. ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ಆರ್ಥಿಕ ಶಿಸ್ತು ಇರಬೇಕು. ಸಾಕಷ್ಟು ಪರಿಶ್ರಮವೂ ಬೇಕು ಎಂದು ತಮ ಅನುಭವ ಹಾಗೂ ನಿದರ್ಶನಗಳನ್ನು ನೀಡಿ ಸಲಹೆ ಸೂಚನೆಗಳನ್ನು ನೀಡಿದರು.

ಪವಿತ್ರ ಹಳೇಕೋಟೆ ಅವರು ಮಾತನಾಡಿ, ರೆಸ್ಟೋರೆಂಟ್‌ಗಳಲ್ಲೂ ಟೇಸ್ಟಿಂಗ್‌ ಪೌಡರ್‌, ಕಲರ್‌ ಬಳಸದೇ ಮನೆಯ ಮಾದರಿಯಲ್ಲಿ ರುಚಿಕರವಾದ ಆಹಾರವನ್ನು ತಯಾರಿಸಬಹುದು. ಇದು ಜನಪ್ರಿಯವಾಗುತ್ತದೆ. ನಾವು ಈಗಾಗಲೇ ಹೋಂಸ್ಟೇಗಳಲ್ಲಿ ಇದನ್ನು ಅಳವಡಿಸಿಕೊಂಡಿದ್ದೇವೆ. ಮಲೆನಾಡು ಶೈಲಿಯ ಆಹಾರ ಪದಾರ್ಥಗಳನ್ನೂ ಕೂಡ ಮಾಡಲಾಗುತ್ತಿದೆ. ರುಚಿಕರ ಮಾಡಿದಷ್ಟೇ ಬಡಿಸುವುದೂ ಕೂಡ ಮುಖ್ಯವಾಗುತ್ತದೆ ಎಂದರು.

ವೇದಿಕೆಯಲ್ಲಿ ಅಭಿಮಾನಿ ವಸತಿ ಸಮೂಹದ ನಿರ್ದೇಶಕ ವಿ.ಪುರುಷೋತ್ತಮ್‌, ಕಿಮನೆ ಜಯರಾಂ, ಉದ್ಯಮಿಗಳಾದ ಶಿಲ್ಪಾಗೌಡ, ಅನು ಉದಯ್‌, ಸೌಮ್ಯ ರಾಣಿ, ನಾಗರವಕ್ಕ, ವರ್ಷಾಗೌಡ, ಅಮಿತ ಪ್ರಶಾಂತ್‌, ಹೇಮಾ ನಂದೀಶ್‌, ರಮ್ಯ ರಮೇಶ್‌, ಸುನಿತ ಮಂಜುನಾಥ್‌, ಸುಶಾ ಸಂಜಯ್‌, ಸುನಿತ ಗೌಡ, ಹೇಮಾ ಮದನ್‌, ಫಸ್ಟ್‌ ಸರ್ಕಲ್‌ ಅಧ್ಯಕ್ಷ ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News