Friday, November 28, 2025
Homeರಾಷ್ಟ್ರೀಯಒಳನುಸುಳುಕೋರರನ್ನು ಮತದಾರರೆಂದು ಪರಿಗಣಿಸಬೇಕೆ..? : ಸುಪ್ರೀಂ ಪ್ರಶ್ನೆ

ಒಳನುಸುಳುಕೋರರನ್ನು ಮತದಾರರೆಂದು ಪರಿಗಣಿಸಬೇಕೆ..? : ಸುಪ್ರೀಂ ಪ್ರಶ್ನೆ

'Should Intruders With Aadhaar Be Made Voter?' Supreme Court's Big Question

ನವದೆಹಲಿ, ನ.27- ಮಹತ್ವದ ಬೆಳವಣಿಗೆಯಲ್ಲಿ ಆಧಾರ್‌ ಹೊಂದಿರುವ ಒಳನುಸುಳುಕೋರ ರನ್ನೂ ಮತದಾರರೆಂದು ಪರಿಗಣಿಸಬೇಕೆ? ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ಭಾರತಕ್ಕೆ ಒಳನುಗ್ಗುವವರ ಬಳಿ ಆಧಾರ್‌ ಇದ್ದರೆ ಅವರು ಮತ ಚಲಾವಣೆ ಮಾಡಲು ಅರ್ಹರೇ ಎಂದು ಪ್ರಶ್ನೆ ಮಾಡಲಾಗಿದೆ.

ಆಧಾರ್‌, ಸಾಮಾಜಿಕ ಕಲ್ಯಾಣ ಪ್ರಯೋಜನಗಳು ಎಲ್ಲರಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಈ ದಾಖಲೆಯು ಸ್ವಯಂಚಾಲಿತವಾಗಿ ಮತದಾನದ ಹಕ್ಕನ್ನು ನೀಡಬಾರದು ಎಂದು ನ್ಯಾಯಾಲಯ ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರ ಪೀಠವು ಹಲವಾರು ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ನಡೆಸುವ ಚುನಾವಣಾ ಆಯೋಗದ ಕ್ರಮದ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆ ನಡೆಸುವ ಸಂದರ್ಭದಲ್ಲಿ ಪೀಠ ಈ ಹೇಳಿಕೆಯನ್ನು ನೀಡಿದೆ. ಆಧಾರ್‌ ಕಾರ್ಡ್‌ ಪೌರತ್ವದ ಸಂಪೂರ್ಣ ಪುರಾವೆಯನ್ನು ನೀಡುವುದಿಲ್ಲ ಎಂದು ಪೀಠ ಪುನರುಚ್ಚರಿಸಿತು.

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಗೆ ವಿರುದ್ಧವಾಗಿ ಹಲವು ಅರ್ಜಿಗಳು ಸುಪ್ರೀಂಕೋರ್ಟ್‌ ಅಂಗಳದಲ್ಲಿವೆ. ಅದನ್ನು ಸಮರ್ಥಿಸಿಕೊಂಡಿರುವ ಹಿರಿಯ ವಕೀಲ ಕಪಿಲ್‌ ಸಿಬಲ್‌ ಎಲ್ಲರ ಬಳಿ ಆಧಾರ್‌ ಕಾರ್ಡ್‌ ಇದೆಯಲ್ಲಾ ಅದರಲ್ಲೇ ಜನ ದಿನಾಂಕ ಎಲ್ಲವೂ ಇರಲಿದೆ, 18 ವರ್ಷ ಮೇಲ್ಪಟ್ಟವರು ಅಲ್ಲವೋ ಹೌದೋ ಎಂದು ಪರಿಗಣಿಸಲು ಅಷ್ಟು ಸಾಕಲ್ಲವೇ ಎನ್ನುವ ಪ್ರಶ್ನೆಗೆ ಪೀಠ ಉತ್ತರ ನೀಡಿದೆ.

ಹಾಗಾದರೆ ಪ್ರಜೆಯಲ್ಲದವರ ಬಳಿಯೂ ಆಧಾರ್‌ ಕಾರ್ಡ್‌ ಹಾಗಾದರೆ ಅವರನ್ನೂ ಮತದಾರರೆಂದು ಪರಿಗಣಿಸಬೇಕೆ ಎಂದು ಪೀಠ ಪ್ರಶ್ನೆ ಕೇಳಿದೆ. ಬೇರೆ ದೇಶದಿಂದ ಒಳನುಸುಳುವ ವ್ಯಕ್ತಿಗಳು ಇದ್ದಾರೆ, ನೆರೆಯ ದೇಶಗಳಿಂದ ಭಾರತಕ್ಕೆ ಬರುತ್ತಾರೆ, ಅವರು ಭಾರತದಲ್ಲಿ ಕೆಲಸ ಮಾಡುತ್ತಿದ್ದಾರೆ, ಭಾರತದಲ್ಲಿಯೇ ವಾಸಿಸುತ್ತಿದ್ದಾರೆ. ರಿಕ್ಷಾ ಚಲಾಯಿಸುವವರಿದ್ದಾರೆ, ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರಿದ್ದಾರೆ.

ನೀವು ಅವರಿಗೆ ಆಧಾರ್‌ ಕಾರ್ಡ್‌ ನೀಡಿದರೆ ಅವರು ಸಬ್ಸಿಡಿ ಪಡಿತರ ಅಥವಾ ಯಾವುದೇ ಪ್ರಯೋಜನವನ್ನು ಪಡೆಯಬಹುದು, ಅದು ನಮ ಸಾಂವಿಧಾನಿಕ ನೀತಿಯ ಭಾಗವಾಗಿದೆ, ಅದು ನಮ್ಮ ಸಾಂವಿಧಾನಿಕ ನೈತಿಕತೆ. ಆದರೆ ಅವರನ್ನು ಮತದಾರರನ್ನಾಗಿ ಮಾಡಬೇಕೆ?. ಸತ್ತ ಮತದಾರರನ್ನು ತೆಗೆದುಹಾಕುವ ಅಗತ್ಯವನ್ನು ನ್ಯಾಯಮೂರ್ತಿ ಬಾಗ್ಚಿ ಒತ್ತಿ ಹೇಳಿದರು, ಪಟ್ಟಿಗಳನ್ನು ಪಂಚಾಯತ್ಗಳಲ್ಲಿ ಮತ್ತು ಅಧಿಕೃತ ವೆಬ್ಸೈಟ್ಗಳಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆ ಎಂದರು.

RELATED ARTICLES

Latest News