ಬೆಂಗಳೂರು,ಏ.8- ಜಮೀನು ಮಾರಾಟ ಮಾಡಿದ್ದ ಹಣವನ್ನು ತೆಗೆದುಕೊಂಡು ಸ್ನೇಹಿತನ ಕಾರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಡ್ರಾಪ್ ಪಡೆದು ಕೊಳ್ಳುವಾಗ ಮಾರ್ಗಮಧ್ಯೆ ಎಟಿಎಂಗೆ ಹೋಗುತ್ತಿದ್ದಂತೆ ಇತ್ತ ಕಾರಿನಲ್ಲಿಟ್ಟಿದ್ದ 2.46 ಕೋಟಿ ಹಣದೊಂದಿಗೆ ಪರಾರಿಯಾಗಿದ್ದ ಸ್ನೇಹಿತ ಸೇರಿದಂತೆ ಇಬ್ಬರನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿ 2.20ಕೋಟಿ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ 15 ಲಕ್ಷ ಮೌಲ್ಯದ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.ಕಾರು ಚಾಲಕ ಮಂಜುನಾಥ್ ಮತ್ತು ಈತನ ಸಹಚರ, ಜೆಸಿಬಿ ಚಾಲಕ ನಾಗಿರುವ ಕೃಷ್ಣಕುಮಾರ್ ಬಂಧಿತ ಆರೋಪಿ ಗಳು.
ಬನಶಂಕರಿ 3ನೇ ಹಂತ, ಪಾಪಯ್ಯ ಗಾರ್ಡನ್‌ನಿವಾಸಿ ಸುಕುಮಾರ್ ಮತ್ತು ಕವಿತಾ ಎಂಬುವವರು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದು, ಇವರು ಪಾಲುಗಾರಿಕೆಯಲ್ಲಿ ಜಮೀನು ತೆಗೆದುಕೊಂಡಿದ್ದಾರೆ.
ಸುಕುಮಾರ್ ಅವರು 4 ಎಕರೆ 18 ಗುಂಟೆ ಜಮೀನನ್ನು ಮಾರಾಟ ಮಾಡಿದ್ದು, ಕನಕಪುರದ ನೊಂದಣಿ ಕಛೇರಿಯಲ್ಲಿ ನೊಂದಾಯಿಸಿ, 2 ಕೋಟಿ 47 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ.ಆ ಹಣವನ್ನು ಮನೆಗೆ ಸುರಕ್ಷಿತವಾಗಿ ತೆಗೆದುಕೊಂಡು ಹೋಗುವ ಸಲುವಾಗಿ ಈ ಹಿಂದೆ ತಮ ಮನೆಯಲ್ಲಿ ಬಾಡಿಗೆಗಿದ್ದ ಪರಿಚಿತ ಸ್ನೇಹಿತ ಮಂಜುನಾಥ್‌ನ ಕರೆಸಿಕೊಳ್ಳಲು ನಿರ್ಧರಿಸಿದ್ದಾರೆ.ಆಪ್ ಮುಖಾಂತರ ತಮ ಸ್ನೇಹಿತನ ಇನ್ನೋವಾ ಕಾರ್‌ನ್ನು ಬುಕ್ ಮಾಡಿದ್ದಾರೆ. ಸ್ನೇಹಿತ ಮಂಜುನಾಥ್‌ಬಾಡಿಗೆ ಕಾರು ಚಲಾಯಿಸಿಕೊಂಡು ಬಂದಿದ್ದಾನೆ.
ಆ ವೇಳೆ ಜಮೀನು ಮಾರಿದ್ದ ಹಣವನ್ನು ಕಾರಿನಲ್ಲಿಟ್ಟುಕೊಂಡು ಮನೆಗೆ ಹೋಗುತ್ತಿದ್ದಾಗ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಎಟಿಎಂವೊಂದರಲ್ಲಿ ತಮ ಖಾತೆಗೆ 1 ಲಕ್ಷ ಹಣವನ್ನು ಜಮಾಮಾಡಲು ಮಾರ್ಗಮಧ್ಯೆ ಇಳಿದಿದ್ದಾರೆ.ಅವರು ವಾಪಸ್ ಬರುವಷ್ಟರಲ್ಲಿ ಇತ್ತ ಚಾಲಕನಾದ ಸ್ನೇಹಿತನು ಇನ್ನೋವಾ ಕಾರಿನಲ್ಲಿದ್ದ 2 ಕೋಟಿ 46 ಲಕ್ಷ ಹಣದ ಸಮೇತ ಪರಾರಿಯಾಗಿದ್ದನು. ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿ ಸ್ನೇಹಿತನು ಕಿಮ್ಸೌ ಆಸ್ಪತ್ರೆ ಮುಂಭಾಗದಲ್ಲಿ ವಾಹನವನ್ನು ನಿಲ್ಲಿಸಿ ತನ್ನ ಸ್ವಂತ ಸ್ವಿಫ್‌್ಟ ಕಾರಿಗೆ ಸಹಚರ ಕೃಷ್ಣಕುಮಾರ್ ಸಹಾಯದಿಂದ ಹಣವನ್ನು ಶಿಫ್ಟ್ ಮಾಡಿಕೊಂಡು, ಇನ್ನೋವಾ ಕಾರ್‌ನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.
ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಹಲವು ಮಾಹಿತಿಗಳನ್ನು ಕಲೆಹಾಕಿ ಕೆ.ಎಂ ದೊಡ್ಡಿ, ಭಾರತಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗ ಇನ್ನೋವಾ ಕಾರ್ ಚಾಲಕ ಹಾಗೂ ಸಹಚರನನ್ನು ಇನ್ನೋವಾ ಕಾರ್ ಚಾಲಕನ ಮಾಲೀಕತ್ವದ ಮತ್ತೊಂದು ಕಾರ್‌ನ ಸಮೇತ ವಶಕ್ಕೆ ಪಡೆದಿದ್ದಾರೆ.
ಈ ಇಬ್ಬರನ್ನು ವಿಚಾರಣೆ ನಡೆಸಿದಾಗ ಹಣ ಹಾಗೂ ಇನ್ನೋವಾ ಕಾರ್‌ನ್ನು ಕಳುವು ಮಾಡಿರುವುದಾಗಿ ಹೇಳಿದ್ದು, ಆರೋಪಿಗಳಿಬ್ಬರ ವಶದಲ್ಲಿದ್ದ 2,20,48,000 ರೂ. ಹಣವನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸ್ವಿಫ್ಟ್ ಕಾರ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಲೋಕೇಶ್. ಭ. ಜಗಲಾಸರ್‌ಮಾರ್ಗದರ್ಶನದಲ್ಲಿ ಹಾಗೂ ಸುಬ್ರಮಣ್ಯಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಗಿರೀಶ್ ಉಸ್ತುವಾರಿಯಲ್ಲಿ, ಇನ್‌್ಸಪೆಕ್ಟರ್ ರಾಜು ಹಾಗೂ ಸಿಬ್ಬಂದಿ ತಂಡ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.