ನವದೆಹಲಿ,ಎ.11 – ಅಮೆರಿಕದಿಂದ ಭಾರತಕ್ಕೆ ಗಡೀಪಾರಾಗಿರುವ 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಪಾಕಿಸ್ತಾನ ಮೂಲದ ಕುಖ್ಯಾತ ಭಯೋತ್ಪಾದಕ ತಪವೂರ್ ರಾಣಾನ ವಿಚಾರಣೆಗಾಗಿ ವಿಶೇಷ ತನಿಖಾ ನ್ಯಾಯಾಲಯವು 18 ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆ) ಎನ್ ಐಎ) ಕನ್ನಡಿಗೆ ನೀತಿ ಆದೇಶ ನೀಡಿದೆ.
ಬಂಧನದ ಬಳಿಕ ತಡರಾತ್ರಿ ಎನ್‌ಐಎ ಜೈಲು ವ್ಯಾನ್, ಮಹೀಂದ್ರಾ, ಮಾರ್ಕ್ಸ್ಮನ್ ಶಸ್ತ್ರಸಜ್ಜಿತ ವಾಹನ ಮತ್ತು ಅಂಬ್ಯುಲೆನ್ಸ್ ಸೇರಿದಂತೆ ಬೆಂಗಾವಲು ಪಡೆಯೊಂದಿಗೆ ರಾಣಾನನ್ನು ಬಿಗಿ ಭದ್ರತೆಯ ನಡುವೆ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಕರೆತರಲಾಯಿತು.
ಈ ವೇಳೆ ಎನ್‌ಐಎ ಪರ ವಕೀಲರು, ಮುಂಬೈ ದಾಳಿಯ ಪಿತೂರಿಗೆ ಸಂಬಂಧಿಸಿದಂತೆ ಉಗ್ರ ಹೆಡ್ಲಿ ಮತ್ತು ರಾಣಾ ನಡುವಿನ ಇಮೇಲ್ ಪುರಾವೆಗಳನ್ನು ಉಲ್ಲೇಖಿಸಿದರು. ಕ್ರಿಮಿನಲ್ ಪಿತೂರಿಯ ಭಾಗವಾಗಿ ಡೇವಿಡ್ ಹೆಡ್ಲಿ ಭಾರತಕ್ಕೆ ಭೇಟಿ ನೀಡುವ ಮೊದಲು ತಪವೂರ್ ರಾಣಾನ ಜೊತೆ ಸಂಪೂರ್ಣ ಕಾರ್ಯಾಚರಣೆಯ ಬಗ್ಗೆ ಚರ್ಚಿಸಿದ್ದ. ಹೀಗಾಗಿ ಆತನನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಈ ವಾದವನ್ನು ಪುರಸ್ಕರಿಸಿದ ವಿಶೇಷ ಎನ್‌ಐಎ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಅವರ ಮುಂದೆ ಹಾಜರುಪಡಿಸಿದಾಗ ರಾಣಾನ ಕಸ್ಟಡಿಗೆ ಅನುಮತಿ ನೀಡಿದರು.
ಕ್ರಿಮಿನಲ್ ಪಿತೂರಿ, ಭಾರತ ಸರ್ಕಾರದ ವಿರುದ್ಧ ಯುದ್ಧ ನಡೆಸುವುದು, ಕೊಲೆ ಮತ್ತು ನಕಲಿ ದಾಖಲೆ ಮತ್ತು ಕಾನೂನುಬಾಹಿರ ಚಟುವಟುಕೆಗಳ ಕಾಯ್ದೆಯಡಿ ರಾಣಾ ಮೇಲೆ ಆರೋಪ ಹೊರಿಸಲಾಗಿದೆ. 64 ವರ್ಷದ ತಹವೂರ್ ರಾಣಾನನ್ನು ವಿಚಾರಣೆ ಎದುರಿಸಲು ಮುಂಬೈಗೆ ಸ್ಥಳಾಂತರಿಸಬಹುದು ಎಂದು ಮೂಲಗಳು ತಿಳಿಸಿವೆ.
ಹಿರಿಯ ವಕೀಲ ದಯಾನ್ ಕೃಷ್ಣನ್ ಮತ್ತು ವಿಶೇಷ ಸಾರ್ವಜನಿಕ ಅಭಿಯೋಜಕ ನರೇಂದರ್ ಮಾನ್ ಎನ್‌ಐಎ ಪರ ವಾದಿಸಿದರು. ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲ ಪಿಪೀಯೂಷ್ ಸಚ್ವ ತಹವೂರ್ ರಾಣಾ ಪರ ವಾದಿಸಿದರು.
ಇಮೇಲ್ ಸಂವಹನಗಳಂತಹ ಪ್ರಮುಖ ಪುರಾವೆಗಳನ್ನು ಉಲ್ಲೇಖಿಸಿ ಎನ್‌ಐಎ ಆರಂಭದಲ್ಲಿ ರಾಣಾನನ್ನು 20 ದಿನಗಳ ಕಸ್ಟಡಿಗೆ ಕೋರಿತ್ತು ಎಂದು ಮೂಲಗಳು ತಿಳಿಸಿವೆ. ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ಸಲ್ಲಿಕೆಯಲ್ಲಿ, ಶಂಕಿತ ಪಿತೂರಿಯನ್ನು ತನಿಖೆ ಮಾಡಲು ರಾಣಾನ ಕಸ್ಟಡಿ ವಿಚಾರಣೆ ಅತ್ಯಗತ್ಯ ಎಂದು ಎನ್‌ಐಎ ವಾದಿಸಿತು. ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಗುರಿಯನ್ನು ಹೊಂದಿರುವ ಕ್ರಿಮಿನಲ್ ಸಂಚಿನಲ್ಲಿ ರಾಣಾ ಇತರರೊಂದಿಗೆ ಸಹಕರಿಸಿದ್ದಾನೆ. ಎಂದು ಅದು ಆರೋಪಿಸಿದೆ.
ವಿಚಾರಣೆ ಸಮಯದಲ್ಲಿ ನ್ಯಾಯಾಲಯವು ರಾಣಾ ಖಾಸಗಿ ವಕೀಲರನ್ನು ನೇಮಿಸಿಕೊಳ್ಳಲು ಬಯಸುತ್ತೀರಾ ಅಥವಾ ನ್ಯಾಯಾಲಯದಿಂದ ಕಾನೂನು ನೆರವು ನೀಡಲು ಬಯಸುತ್ತೀರಾ ಎಂದು ವಿಚಾರಿಸಿತು.
ರಾಣಾನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಮೊದಲು, ದೆಹಲಿ ಪೊಲೀಸರು ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಮಾಧ್ಯಮ ಪ್ರತಿನಿಧಿಗಳು ಮತ್ತು ಸಾರ್ವಜನಿಕರನ್ನು ನ್ಯಾಯಾಲಯದ ಆವರಣದೊಳಗೆ ಬಿಡಲಿಲ್ಲ, ನ್ಯಾಯಾಲಯ ಸಂಕೀರ್ಣಕ್ಕೆ ಜನರ ಪ್ರವೇಶವನ್ನು ನಿರ್ಬಂಧಿಸುವುದರಿಂದ ಭದ್ರತೆ ಮತ್ತು ಸುರಕ್ಷತೆಯ ಕಾಳಜಿಯನ್ನು ಪೊಲೀಸ್ ಅಧಿಕಾರಿಗಳು ಉಲ್ಲೇಖಿಸಿ ಯಾರನ್ನೂ ಒಳಗೆ ಅನುಮತಿಸಲಾಗುವುದಿಲ್ಲ ಎಂದು ಹೇಳಿದರು.
ತಹವೂರ್ ರಾಣಾನ ಮೊದಲ ರಾತ್ರಿ ಅಲ್ಲಿ ಇಲ್ಲಿ ಅಲೆದಾಡುತ್ತಾ ಕಳೆದಿದೆ. ಸ್ವಲ್ಪ ಕಾಲ ಎನ್ ಐಎ ಪ್ರಧಾನ ಕಚೇರಿಯಲ್ಲಿ ಇದ್ದ. ನಂತರ ಅವನನ್ನು ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ತಡರಾತ್ರಿ ಅವನನ್ನು ಮತ್ತೆ ರಿಮಾಂಡ್‌ಗೆ ಕಳುಹಿಸಲಾಯಿತು. ಇದೀಗ ಮತ್ತೆ ಎನ್‌ಐಎ ಪ್ರಧಾನ ಕಚೇರಿಯಲ್ಲಿದ್ದಾರೆ. ಭಯೋತ್ಪಾದಕ ತಹವೂರ್ ರಾಣಾನನ್ನು ಭಾರತಕ್ಕೆ ಕರೆತರುವುದು ಒಂದು ದೊಡ್ಡ ಯಶಸ್ಸು. ಈಗ ಮುಂಬೈ ದಾಳಿಯ ಪಿತೂರಿಯ ಪ್ರತಿಯೊಂದು ಸತ್ಯ ಹೊರಬರುತ್ತದೆ. ತಹವೂರ್ ರಾಣಾ ಎಂಬ ಭಯೋತ್ಪಾದಕನೇ ಆಗಿದ್ದಾನೆ. ಆತನ ಸಹಾಯದಿಂದ ಭಯೋತ್ಪಾದಕರು 2008 ರ ನವೆಂಬರ್ 26ರಂದು ಮಾಯಾನಗರದಲ್ಲಿ ನಡೆದ ನರಮೇಧವನ್ನು ನಡೆಸಿದ್ದರು. ಈ ರಕ್ತಸಿಕ್ತ ಆಟ ಲಷ್ಕರ್-ಎ-ತೊಯ್ದಾ ಮತ್ತು ಪಾಕಿಸ್ತಾನದ ಐಎಸ್‌ಐನ ಆದೇಶದ ಮೇರೆಗೆ ನಡೆಯಿತು.
ಭಯೋತ್ಪಾದಕ ರಾಣಾ ಪಾಕಿಸ್ತಾನಿ ಮೂಲದ 64 ವರ್ಷದ ಕೆನಡಾದ ಪ್ರಜೆ ರಾಣಾ 26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಡೇವಿಡ್ ಕೋಲ್ಡನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಗೆ ಆಪ್ತನಾಗಿದ್ದಾನೆ ಎಂದು ಹೇಳಲಾಗುತ್ತದೆ. ಹೆಡ್ಲಿ ಒಬ್ಬ ಅಮೇರಿಕನ್ ಪ್ರಜೆ. ವಿ.4ರಂದು ಅಮೆರಿಕ ಸುಪ್ರೀಂಕೋರ್ಟ್ ರಾಣಾ ಅವರ ಹಸ್ತಾಂತರದ ವಿರುದ್ಧದ ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿದ ನಂತರ ಅವರನ್ನು ಭಾರತಕ್ಕೆ ಕರೆತರಲಾಯಿತು.
ದಾಳಿಯ ಸಂಚುಕೋರನಾಗಿ ಅವನ ಪಾತ್ರವನ್ನು ತನಿಖೆ ಮಾಡಬೇಕೆಂದು ಅದು ನ್ಯಾಯಾಲಯಕ್ಕೆ ತಿಳಿಸಿದೆ. 3. ಕ್ರಿಮಿನಲ್ ಪಿತೂರಿಯ ನಂಬರ್ 1 ಆರೋಪಿ ಡೇವಿಡ್ ಕೋಲ್ಡನ್ ಹೆಡ್ಲಿ ಭಾರತಕ್ಕೆ ಭೇಟಿ ನೀಡುವ ಮೊದಲು ಭಯೋತ್ಪಾದಕ ರಾಣಾ ಜೊತೆ ಸಂಪೂರ್ಣ ಪಿತೂರಿಯ ಬಗ್ಗೆ ಚರ್ಚಿಸಿದ್ದ ಎಂದು ಎನ್ ಐಎ ಹೇಳಿದೆ.
ಹಡ್ಲಿ ಹಲವು ಸವಾಲುಗಳನ್ನು ಎದುರಿಸಬಹುದು ಎಂಬ ಆತಂಕದಲ್ಲಿದ್ದ ಎಂದು ಎನ್‌ಐಎ ನ್ಯಾಯಾಲಯಕ್ಕೆ ತಿಳಿಸಿದೆ. ಅವನು ರಾಣಾಗಿ ತನ್ನ ವಸ್ತುಗಳು ಮತ್ತು ಆಸ್ತಿಯ ವಿವರಗಳನ್ನು ನೀಡಿ ಇಮೇಲ್ ಕಳುಹಿಸಿದ್ದ. ಪಾಕಿಸ್ತಾನಿ ನಾಗರಿಕರಾದ ಇಲ್ಯಾಸ್ ಕಾಶ್ಮೀರಿ ಮತ್ತು ಅಬ್ದುರ್ ರೆಹಮಾನ್ ಅವರ ಕೈವಾಡದ ಬಗ್ಗೆ ಹಚ್ಚಿ ರಾಣಾಗೆ ಮಾಹಿತಿ ನೀಡಿದ್ದ ಎಂದು ಹೇಳಿದೆ.
ಆಸ್ರೇಲ್ ಶ್ಲಾಘನೆ: ತಹವೂರ್ ರಾಣಾ ಹಸ್ತಾಂತರವನ್ನು ಇಸ್ರೇಲ್ ಶ್ಲಾಘಿಸಿದೆ. ಭಯೋತ್ಪಾದಕರನ್ನು ನ್ಯಾಯಕ್ಕೆ ತರುವಲ್ಲಿ ಭಾರತ ಸರ್ಕಾರವು ತೋರಿದ ನಿರಂತರತೆಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೆನ್ ಆಜರ್ ತಿಳಿಸಿದ್ದಾರೆ.
ರಾಣಾನ ಹಸ್ತಾಂತರವು 1997ರ ಭಾರತ-ಯುಎಸ್ ಹಸ್ತಾಂತರ ಒಪ್ಪಂದದಡಿ ಭಾರತೀಯ ಅಧಿಕಾರಿಗಳು ಯುನೈಟೆಡ್ ಸ್ಟೇಟ್ಸ್ ಮೇಲೆ ಒತ್ತಡ ಹೇರಿದ ದೀರ್ಘ ಕಾನೂನು ಮತ್ತು ರಾಜತಾಂತ್ರಿಕ ಹೋರಾಟದ ಫಲವಾಗಿದೆ ಎಂದು ಹೇಳಿದ್ದಾರೆ.
ಭಯೋತ್ಪಾದಕ ತಹವೂರ್ ರಾಣಾ 18 ದಿನಗಳ ಕಾಲ ಎನ್‌ಐಎ ಕಸ್ಟಡಿಯಲ್ಲಿ ಇರುತ್ತಾನೆ. ಮುಂಬೈ ದಾಳಿಯಲ್ಲಿ ಯಾರ ಪಾತ್ರ ಏನು, ಪಾಕಿಸ್ತಾನ ಹೇಗೆ ಬೆಂಬಲ ನೀಡಿತು, ಭಯೋತ್ಪಾದಕನ ಉದ್ದೇಶವೇನು, ಹೆಡ್ಲಿಗೆ ಹೇಗೆ ಬೆಂಬಲ ನೀಡಿದ ಇತ್ಯಾದಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲಿದೆ.