Friday, April 11, 2025
Homeರಾಜ್ಯಕೆಎಸ್‌‍ಎಫ್‌ಸಿ ಆಡಳಿತ ಮಂಡಳಿ ನಿರ್ದೇಶಕರಾಗಿ ಜಿ.ರಘು ಆಚಾರ್‌ ಆಯ್ಕೆ

ಕೆಎಸ್‌‍ಎಫ್‌ಸಿ ಆಡಳಿತ ಮಂಡಳಿ ನಿರ್ದೇಶಕರಾಗಿ ಜಿ.ರಘು ಆಚಾರ್‌ ಆಯ್ಕೆ

ಬೆಂಗಳೂರು, ಆ.1-ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾಗಿ ಜಿ.ರಘು ಆಚಾರ್‌ ಅವಿರೋಧವಾಗಿ ಚುನಾಯಿತರಾಗಿದ್ದಾರೆ.

ಜಿ.ರಘು ಆಚಾರ್‌ ಅವರ ನಿರ್ದೇಶಕರ ಅವಧಿಯು ಮೂರು ವರ್ಷಗಳ ಅವಧಿಗೆ ಅಂದರೆ, ಜುಲೈ 18 ರಿಂದ 2027ರ ಜುಲೈ 17ರವರೆಗೆ ಇರುತ್ತದೆ ಎಂದು ಕೆಎಸ್‌‍ಎಫ್‌ಸಿಯ ವ್ಯವಸ್ಥಾಪಕ ನಿರ್ದೇಶಕ ಡಾ.ರೇಜು.ಎಂ.ಟಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಹಣಕಾಸು ಸಂಸ್ಥೆಗಳ ಕಾಯಿದೆ 1951 (ತಿದ್ದುಪಡಿ ಕಾಯಿದೆ 2000)ರ ಅಧಿನಿಯಮ 10 (ಇ) ಅಡಿಯಲ್ಲಿ ಹಾಗೂ ಸಂಸ್ಥೆಯ ಸಾಮಾನ್ಯ ನಿಯಮಾವಳಿ-2002ರ 63ನೇ ನಿಬಂಧನೆಯ ಅನ್ವಯ ರಘು ಆಚಾರ್‌ ಅವಿರೋಧವಾಗಿ ಚನಾಯಿತರಾಗಿದ್ದಾರೆಂದು ಅವರು ಹೇಳಿದ್ದಾರೆ.

RELATED ARTICLES

Latest News