Friday, November 22, 2024
Homeಅಂತಾರಾಷ್ಟ್ರೀಯ | Internationalಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ತಲುಪಿದ ಪ್ರಧಾನಿ ಮೋದಿ

ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ತಲುಪಿದ ಪ್ರಧಾನಿ ಮೋದಿ

ಬಾರಿ (ಇಟಲಿ), ಜೂ.14- ಮಹತ್ವದ ಜಿ 7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಯ ಅಪುಲಿಯಾಗೆ ಆಗಮಿಸಿದರು. ಅಪುಲಿಯಾದಲ್ಲಿರುವ ಬ್ರಿಂಡಿಸಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಇಟಲಿಯಲ್ಲಿನ ಭಾರತದ ರಾಯಭಾರಿ ವಾಣಿ ರಾವ್‌ ಮತ್ತು ಇತರ ಅಧಿಕಾರಿಗಳು ಬರಮಾಡಿಕೊಂಡರು.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಯ ಬ್ರಿಂಡಿಸಿ ವಿಮಾನ ನಿಲ್ದಾಣಕ್ಕೆ ತಡ ರಾತ್ರಿ ಆಗಮಿಸಿದ್ದಾರೆ. ಇದು ಖುಷಿಯ ವಿಚಾರ. ಅಪುಲಿಯಾದಲ್ಲಿ ಶೃಂಗಸಭೆಯಲ್ಲಿ ಅವರು ಭಾಗಿಯಾಗಲಿದ್ದು, ಅಲ್ಲಿ ಅವರು ವಿಶ್ವ ನಾಯಕರೊಂದಿಗೆ ಹಲವು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎಂದು ಭಾರತದ ದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್‌ ಜೈಸ್ವಾಲ್‌ ವಿಡಿಯೋ ಮೂಲಕ ಖಚಿತಪಡಿಸಿದ್ದಾರೆ.

ಇಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗೂ ಪ್ರಧಾನಿ ಮೋದಿ ನಡುವೆ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆ. ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ಮೋದಿಯವರ ಮೊದಲ ವಿದೇಶ ಪ್ರವಾಸ ಇದಾಗಿದೆ.

ಬೋರ್ಗೊ ಎಗ್ನಾಜಿಯಾದ ಐಷಾರಾಮಿ ರೆಸಾರ್ಟ್ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ವಿಶ್ವದ ಗಣ್ಯ ನಾಯಕರ ಜೊತೆಗೆ ಜನರ ಜೀವನ ಸುಧಾರಿಸುವ ಹಾಗೂ ಕೃತಕ ಬುದ್ಧಿಮತ್ತೆ, ಶಕ್ತಿ, ಆಫ್ರಿಕಾ-ಮೆಡಿಟರೇನಿಯನ್‌ ವಿಷಯ ಸೇರಿದಂತೆ ಹಲವು ವಿಚಾರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಈ ವೇಳೆ ಇಟಾಲಿಯನ್‌ ಪ್ರಧಾನಿ ಜಾರ್ಜಿಯಾ ಮೆಲೋನಿ, ಪೋಪ್‌ ಫ್ರಾನ್ಸಿಸ್ ಅವರು ಸಹ ಇರಲಿದ್ದಾರೆ.ಅಪುಲಿಯಾದಲ್ಲಿ ಶೃಂಗಸಭೆಯಲ್ಲಿ ಅವರು ಭಾಗಿಯಾಗಲಿದ್ದು, ಅಲ್ಲಿ ಅವರು ವಿಶ್ವ ನಾಯಕರೊಂದಿಗೆ ಹಲವು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎಂದು ಭಾರತದ ದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್‌ ಜೈಸ್ವಾಲ್‌ ವಿಡಿಯೋ ಮೂಲಕ ಖಚಿತಪಡಿಸಿದ್ದಾರೆ.

ಪ್ರಧಾನಿ ಟ್ವೀಟ್‌ :
ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿಗೆ ಆಗಮಿಸಲಾಗಿದೆ. ವಿಶ್ವ ನಾಯಕರೊಂದಿಗೆ ದ್ವಿಪಪಕ್ಷೀಯ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಎದುರು ನೋಡುತ್ತಿದ್ದೇನೆ. ನಾವೆಲ್ಲರೂ ಒಟ್ಟಾಗಿ, ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ಉಜ್ವಲ ಭವಿಷ್ಯಕ್ಕಾಗಿ ಅಂತಾರಾಷ್ಟ್ರೀಯ ಸಹಕಾರವನ್ನು ಬೆಳೆಸುವ ಗುರಿಯನ್ನು ಹೊಂದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಹ ಟ್ವೀಟ್‌‍ ಮಾಡಿಕೊಂಡಿದ್ದಾರೆ.

ಜೂನ್‌ 13-15 ರವರೆಗೆ ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ಬೊರ್ಗೊ ಎಗ್ನಾಜಿಯಾ ರೆಸಾರ್ಟ್‌ನಲ್ಲಿ ಜಿ7 ಶೃಂಗಸಭೆ ನಡೆಯುತ್ತಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್‌, ್ರಾನ್‌್ಸ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌, ಜಪಾನ್‌ ಪ್ರಧಾನಿ ್ಯಮಿಯೊ ಕಿಶಿದಾ, ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರಡೊ ಸೇರಿದಂತೆ ಇಟಲಿ ಆಫ್ರಿಕಾ, ದಕ್ಷಿಣ ಅಮೆರಿಕ ಮತ್ತು ಇಂಡೋ-ಪೆಸಿಫಿಕ್‌ ಪ್ರದೇಶದ 11 ಅಭಿವೃದ್ಧಿಶೀಲ ರಾಷ್ಟ್ರಗಳ ನಾಯಕರನ್ನು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಿದೆ.

ಜಿ7 ಯುಎಸ್‌‍, ಯುಕೆ,ಫ್ರಾನ್ಸ್ , ಇಟಲಿ, ಜರ್ಮನಿ, ಕೆನಡಾ ಹಾಗೂ ಜಪಾನ್‌ ಅನ್ನು ಒಳಗೊಂಡಿದೆ. ಭಾರತವಲ್ಲದೆ ಆಫ್ರಿಕಾ, ದಕ್ಷಿಣ ಅಮೆರಿಕ ಹಾಗೂ ಇಂಡೋ ಪೆಸಿಫಿಕ್‌ ಪ್ರದೇಶದ 11 ಅಭಿವೃದ್ಧಿಶೀಲ ರಾಷ್ಟ್ರಗಳ ನಾಯಕರನ್ನು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ಆಹ್ವಾನಿಸಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಮೋದಿ ಭಾಗವಹಿಸಿದ್ದರು.

RELATED ARTICLES

Latest News