ಗದಗ,ಆ.14- ಹೋಟೆಲ್‌ಗೆ ಬಿರಿಯಾನಿ ತಿನ್ನಲು ಬಂದಿದ್ದ ಯುವಕನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಭೀಕರವಾಗಿ ಕೊಲೆ ಮಾಡಿದ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.
ಬಸವರಾಜ್ ಮಮಟಗೇರಿ (22) ಕೊಲೆಯಾದ ಯುವಕ ನರಗುಂದ ಪಟ್ಟಣದಲ್ಲಿದ್ದ ತಾಜ್ ಹೋಟೆಲ್‌ಗೆ ಬಂದಿದ್ದ ಬಸವರಾಜ್ ಬಿರಿಯಾನಿ ತಿನ್ನುವಾಗ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಬಸವರಾಜ್ ಕಣ್ಣಿಗೆ ಖಾರದಪುಡಿ ಮನಬಂದಂತೆ ಹಲ್ಲೆ ನಡೆಸಿ ಕೊಂದು ಪರಾರಿಯಾಗಿದ್ದಾರೆ.
ಇದರಿಂದ ಅಲ್ಲಿದ್ದ ಜನರು ಕೂಡ ಆತಂಕದೕಮದ ಹೊರಗೆ ಓಡಿದ್ದಾರೆ.ಸಿದ್ದಿ ತಿಳಿದು ನರಗುಂದ ಡಿವೈಎಸ್ಪಿ ಪ್ರಭುಘಟನಾ ಸ್ಥಳಕ್ಕೆ ನರಗುಂದ ಡಿವೈಎಸ್ಪಿ ಪ್ರಭು ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.