ಬೆಂಗಳೂರು,ಅ.21-ಇತ್ತೀಚಿಗಷ್ಟೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದಿದ್ದ ಭಾರತ ಇದೀಗ ಬಹುನಿರೀಕ್ಷೀತ ಮಾನವಸಹಿತ ಗಗನಯಾನ ಸಿದ್ಧತೆಯ ಭಾಗವಾಗಿ, ಇಸ್ರೋ ನಡೆಸಿದ ಮೊದಲ ಪ್ರಾಯೋಗಿಕ ಪರೀಕ್ಷಾರ್ಥ ಯಶಸ್ವಿಯಾಗಿ ಉಡಾವಣೆಯಾಗಿದ್ದು, ಮತ್ತೊಂದು ಮೈಲಿಗಲ್ಲು ಸೃಷ್ಟಿಯಾಗಲು ಇನ್ನೆರೆಡು ಹೆಜ್ಜೆ ಬಾಕಿ ಮಾತ್ರ ಇದೆ.
ಉದ್ದೇಶಿತ ಮೂರು ಪರೀಕ್ಷೆಗಳಲ್ಲಿ ಇದು ಮೊದಲನೆಯದ್ದಾಗಿದೆ. ಕ್ರ್ಯೂ ಮಾಡೆಲ್, ಕ್ರ್ಯೂ ಎಸ್ಕೇಪ್ ಮಾಡೆಲ್ ಒಳಗೊಂಡ ರಾಕೆಟ್ ನಭಕ್ಕೆ ಹಾರಿತ್ತು. ರಾಕೆಟ್‍ನಿಂದ ಬೇರ್ಪಟ್ಟು ಎರಡೂ ಮಾಡೆಲ್‍ಗಳು ಪ್ಯಾರಚೂಟ್ ಮೂಲಕ ಭೂಮಿಗೆ ಬಂದಿಳಿದಿವೆ. ಮೂರು ಬಾರಿ ವಿಫಲವಾದ ಬಳಿಕ ಮತ್ತೊಮ್ಮೆ ರಾಕೆಟ್ ಉಡಾವಣೆಗೆ ಪ್ರಯತ್ನಿಸಿದ ಇಸ್ರೋ, ತಾಂತ್ರಿಕ ದೋಷ ಸರಿಪಡಿಸಿದ ನಂತರ ಬೆಳಗ್ಗೆ 10 ಗಂಟೆ ವೇಳೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ, ಗಗನಯಾನ ಪರೀಕ್ಷಾ ವಾಹನ – ಪ್ರದರ್ಶನದ(ಟಿವಿ- ಡಿ1 ) ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಒಂದು ಮಿಷನ್‍ಗಾಗಿ ಪರೀಕ್ಷಾ ಹಾರಾಟಗಳ ಸರಣಿಯಲ್ಲಿ ಇದು ಮೊದಲನೆಯದು, ಇದು ಸ್ವತಃ ಸಿಬ್ಬಂದಿಯನ್ನು ಒಳಗೊಂಡ ಬಾಹ್ಯಾಕಾಶ ನೌಕೆಯನ್ನು ಉಡಾಯಿಸಬಹುದಾದ ದೇಶಗಳ ಸಣ್ಣ ಮತ್ತು ವಿಶೇಷ ಪಟ್ಟಿಯಲ್ಲಿ ಭಾರತವನ್ನು ಇರಿಸುತ್ತದೆ ಯಶಸ್ವಿಯಾಗಿ ಹಾರಾಟ ನಡೆಸಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಗಗನಯಾನ ಮಿಷನ್ ಮೂರು ದಿನಗಳ ಕಾರ್ಯಾಚರಣೆಗಾಗಿ 400 ಕಿ.ಮೀ ಕಡಿಮೆ ಭೂಮಿಯ ಕಕ್ಷೆಯಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿ ಹೊಂದಿದೆ ಹಾಗೂ ನಂತರ ಅವರನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ತರುತ್ತದೆ. ಯಶಸ್ವಿ ಪರೀಕ್ಷಾ ವಾಹನ ಉಡಾವಣೆಯ ನಂತರ ಗಗನ್ಯಾನ್ ಟಿವಿ- ಡಿ1ನ ಮೂರು ಪ್ರಮುಖ ಪ್ಯಾರಾಚೂಟ್‍ಗಳನ್ನು ನಿಯೋಜಿಸಲಾಗಿದೆ. ಗಗನ್ಯಾನ್ ಟಿವಿ-ಡಿ1 ಕ್ರ್ಯೂ ಮಾಡ್ಯೂಲ್ ಸುರಕ್ಷಿತವಾಗಿ ಬಂಗಾಳ ಕೊಲ್ಲಿಯಲ್ಲಿ ಇಳಿದಿದೆ.
ಟಿವಿ- ಡಿ1 ಮಿಷನ್‍ನ ಯಶಸ್ವಿ ಸಾಧನೆಯನ್ನು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ಈ ಕಾರ್ಯಾಚರಣೆಯ ಉದ್ದೇಶವು ಗಗನ್ಯಾನ್ ಕಾರ್ಯಕ್ರಮಕ್ಕಾಗಿ ಮಾನವರಹಿತ ವ್ಯವಸ್ಥೆಯನ್ನು ಪ್ರದರ್ಶಿಸುವುದಾಗಿತ್ತು ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದಾರೆ.
ಇದಕ್ಕೂ ಮುನ್ನ ಬೆಳಗ್ಗೆ 8:45 ಗಂಟೆಗೆ ಮಾನವರಹಿತ ಪರೀಕ್ಷಾರ್ಥ ವಾಹನ ಉಡಾವಣೆಗೆ ಇಸ್ರೋ ಸಜ್ಜಾಗಿತ್ತು. ಆದರೆ ಹವಾಮಾನ ವೈಪರಿತ್ಯದಿಂದ ಸಮಯ ಬದಲಾವಣೆ ಮಾಡಲಾಗಿತ್ತು. ಕೊನೇ ಕ್ಷಣದಲ್ಲಿ ಇಂಜಿನ್‍ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಾಟಕ್ಕೆ ರಾಕೆಟ್ ಉಡಾವಣೆ ಮಾಡಲಾಯಿತು.
ಟಿವಿ-ಡಿ1 ಪರೀಕ್ಷಾರ್ಥ ಹಾರಾಟವು ಗಗನಯಾನ ಮಿಷನ್‍ನ ನಿರ್ಣಾಯಕ ಭಾಗವಾಗಿದೆ. ಇದು ಮೂರು ವ್ಯಕ್ತಿಗಳ ಸಿಬ್ಬಂದಿಯನ್ನು 3 ದಿನಗಳ ಕಾರ್ಯಾಚರಣೆಗಾಗಿ 400 ಕಿಲೋಮೀಟರ್ ಕಕ್ಷೆಗೆ ಕಳುಹಿಸುವುದು, ಈ ಮೂಲಕ ಹಿಂದೂ ಮಹಾಸಾಗರದ ನೀರಿನಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮತ್ತು ಅವರ ಸುರಕ್ಷಿತ ವಾಪಸಾತಿಯನ್ನು ಖಚಿತಪಡಿಸಿಕೊಳ್ಳುವುದು ಇದರೊಂದಿಗೆ ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಭಾರತದ ಸಾಮಥ್ರ್ಯ ಪ್ರದರ್ಶಿಸುವ ಗುರಿಯನ್ನು ಹೊಂದಿದೆ.
ಅಮೆರಿಕನ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್
ಟಿವಿ- ಡಿ1 ವಾಹನವು ಮಾರ್ಪಡಿಸಿದ ವಿಕಾಸ್ ಎಂಜಿನ್ ಒಳಗೊಂಡಿದ್ದು, ಕ್ರ್ಯೂ ಮಾಡ್ಯೂಲ್ ಮತ್ತು ಕ್ರ್ಯೂ ಎಸ್ಕೇಪ್ ಸಿಸ್ಟಂ ಅನ್ನು ಬಳಸುತ್ತದೆ. ಇದು 34.9 ಮೀಟರ್ ಎತ್ತರದಲ್ಲಿದೆ ಮತ್ತು 44 ಟನ್‍ಗಳಷ್ಟು ತೂಕ ಹೊಂದಿದೆ.
2024ರ ಮೊದಲ ತ್ರೈಮಾಸಿಕದಲ್ಲಿ ಎರಡನೇ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತದೆ. ಎರಡೂ ಪರೀಕ್ಷಾರ್ಥ ಉಡಾವಣೆಗಳ ಬಳಿಕ 2024ರ ಕೊನೆಯಲ್ಲಿ ಅಂತಿಮ ಗಗನಯಾನ ಕೈಗೊಳ್ಳುವ ಯೋಜನೆ ಹೊಂದಲಾಗಿದೆ. ಮೊದಲ ಎರಡು ಉಡಾವಣೆಗಳು ಮಾನವರಹಿತವಾಗಿರಲಿದೆ. ಮೂರನೇ ಬಾರಿ ಪರೀಕ್ಷಾರ್ಥ ಉಡಾವಣೆಯಲ್ಲಿ ಒತ್ತಡೀಕೃತ ಸಿಬ್ಬಂದಿ ಮಾಡ್ಯೂಲ್‍ನ್ನು ಕಳುಹಿಸಲಾಗುವುದು.
ಮಾನವ ಸಹಿತ ಉಡಾವಣೆಗೂ ಮುನ್ನ ಹೀಗೆ ನಾಲ್ಕು ಪರೀಕ್ಷೆಗಳನ್ನು ನಡೆಸುವಂತೆ ಗಗನಯಾನ ಸಲಹಾ ಸಮಿತಿ ಸೂಚಿಸಿದೆ. ಅದರಲ್ಲೂ ಸಿಬ್ಬಂದಿ ತಪ್ಪಿಸಿಕೊಳ್ಳುವ ವ್ಯವಸ್ಥೆಯನ್ನು ಕರಾರುವಕ್ಕಾಗಿ ಪರೀಕ್ಷಿಸುವಂತೆ ತಿಳಿಸಿದೆ. ಮಾನವ ಸಹಿತ ಗಗನಯಾನವು ಪರೀಕ್ಷಾರ್ಥ ಉಡಾವಣೆಗಳು ಫಲಿತಾಂಶದ ಮೇಲೆ ಆಧಾರವಾಗಿದೆ.
ಗಗನಯಾನ ಮಿಷನ್‍ಗೆ 3,040 ಕೋಟಿ ರೂ. ಖರ್ಚು ಮಾಡಲಾಗಿದೆ. ಮಾನವ ಸಹಿತ ಗಗನಯಾನ ಯೋಜನೆಗೆ ನಾಲ್ವರು ಫೈಟರ್ ಜೆಟ್ ಪೈಲಟ್‍ಗಳನ್ನು ಭಾರತೀಯ ವಾಯುಪಡೆ ಗುರುತಿಸಿದೆ. ಇವರು ರಷ್ಯಾಗೆ ತೆರಳಿ ಅಲ್ಲಿ ತರಬೇತಿ ಪಡೆದುಕೊಳ್ಳಲಿದ್ದಾರೆ. ಬ್ಯಾಚ್ ಟೆಸ್ಟಿಂಗ್ ಪ್ರಗತಿಯಲ್ಲಿದೆ ಎಂದೂ ಸರಕಾರ ಹೇಳಿದ.
ಏನು ಪರೀಕ್ಷಿಸಲಾಗುತ್ತದೆ?
ಸಿಬ್ಬಂದಿ ಸಹಿತ ಗಗನಯಾನದ ವೇಳೆ ಗಗನಯಾನಿಗಳು ಸುರಕ್ಷಿತವಾಗಿ ಭೂಮಿಗೆ ಮರಳಲು ¿ಪ್ಯಾರಾಚೂಟ್¿ ವ್ಯವಸ್ಥೆ ಬಳಸಲು ಉದ್ದೇಶಿಸಲಾಗಿದೆ. ಈ ವ್ಯವಸ್ಥೆಯಡಿ, ಸಿಬ್ಬಂದಿಯನ್ನು ಒಳಗೊಂಡ ಪ್ಯಾರಾಚ್ಯೂಟ್ ಸಮುದ್ರದೊಳಗೆ ಬೀಳಲಿದೆ (ಸ್ಟ್ರಾಶ್ ಡೌನ್). ನೀರಿಗೆ ಬಿದ್ದ ಪ್ಯಾರಾಚೂಟ್‍ನಿಂದ ಸಿಬ್ಬಂದಿಯ ರಕ್ಷಣೆ ಮಾಡುವ ಬಗ್ಗೆ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುವುದು.
ಸುರಕ್ಷತೆಯ ಖಾತ್ರಿ: ವಿವಿಧ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ, ಕ್ರ್ಯೂ ಎಸ್ಕೇಪ್ ಸಿಸ್ಟಮ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಉದ್ದೇಶಿತ ರೀತಿಯಲ್ಲಿ ಕಾರ್ಯಾಚರಿಸುತ್ತವೆಯೇ ಎನ್ನುವುದು ಖಾತ್ರಿಯಾಗಲಿದೆ. ಇದು ಗಗನಯಾತ್ರಿಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
ತಂತ್ರಜ್ಞಾನದ ಖಚಿತತೆ: ಪರೀಕ್ಷೆಗಳನ್ನು ನಡೆಸುವ ಮೂಲಕ ಮಾನವ ಸಹಿತ ಗಗನಯಾತ್ರೆ ಕೈಗೊಳ್ಳಲು ಅವಶ್ಯಕವಾದ ಜೀವ ಬೆಂಬಲ ವ್ಯವಸ್ಥೆ ಹಾಗೂ ಬಾಹ್ಯಾಕಾಶ ಕ್ಯಾಪ್ಸೂಲ್ ಸೇರಿದಂತೆ ವಿವಿಧ ಆಧುನಿಕ ತಂತ್ರಜ್ಞಾನಗಳ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯ.
ಅಪಾಯಗಳನ್ನು ತಗ್ಗಿಸುವುದು: ಸಮರ್ಪಕವಾಗಿ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ ಸಂಭಾವ್ಯ ಸಮಸ್ಯೆಗಳು ಹಾಗೂ ಅಪಾಯಗಳನ್ನು ಗುರುತಿಸಿ, ನೈಜ ಮಾನವ ಸಹಿತ ಯೋಜನಾ ಜಾರಿಗೂ ಮುನ್ನವೇ ಅದನ್ನು ಸರಿಪಡಿಸಲು ಸಾಧ್ಯವಾಗುತ್ತದೆ.
ಸಿಬ್ಬಂದಿ ತರಬೇತಿ: ಸಂಪೂರ್ಣ ಪರೀಕ್ಷೆಗಳನ್ನು ನಡೆಸುವುದರಿಂದ, ಗಗನಯಾತ್ರಿಗಳು ಮತ್ತು ಭೂ ಸಿಬ್ಬಂದಿಗೆ ಪರಿಪೂರ್ಣ ತರಬೇತಿ ಲಭಿಸುತ್ತದೆ. ಎಲ್ಲಾ ಉಪಕರಣಗಳನ್ನು, ಕಾರ್ಯಾಚರಣೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯ.
ಯೋಜನಾ ಯಶಸ್ಸು: ಎಲ್ಲಾ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿ ಕಾರ್ಯಾಚರಿಸುತ್ತಿವೆ ಎಂದು ಖಾತ್ರಿಪಡಿಸಿಕೊಳ್ಳುವುದರಿಂದ ಯೋಜನೆಯ ಯಶಸ್ಸು ಸಾಸುವ ಸಾಧ್ಯತೆಗಳು ಹೆಚ್ಚಾಗಿ, ಗಗನಯಾನ ಯೋಜನೆಯ ಗುರಿಗಳನ್ನು ಸಾಸಲು ನೆರವಾಗುತ್ತದೆ.