ಕೋಲ್ಕತ್ತಾ, ಜ.22– ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯಲಿರುವ ಐದು ಪಂದ್ಯಗಳ ಟ್ವೆಂಟಿ-20 ಸರಣಿಗೂ ಮುನ್ನ ಟೀಮ್ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ಅವರು ಕಾಳಿಘಟ್ ನಲ್ಲಿರುವ ಕಾಳಿ ದೇಗುಲಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ 2011 ರಿಂದ 2017ರವರೆಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದ ಗೌತಮ್ ಗಂಭೀರ್ ಅವರು ಕಾಳಿ ದೇವಿಯ ಕೃಪಾರ್ಶೀವಾದದಿಂದ ಎರಡು ಬಾರಿ ತಂಡವನ್ನು ಚಾಂಪಿಯನ್ ಆಗಿಸಿದ್ದರು. 2024ರಲ್ಲಿಕೆಕೆಆರ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ತಂಡ ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಕೆಕೆಆರ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆನ್ನಲ್ಲೇ ಟೀಮ್ ಇಂಡಿಯಾದ ಹೆಡ್ ಕೋಚ್ ಆದ ಗೌತಮ್ ಗಂಭೀರ್ ಗೆ ಸತತ ಸೋಲುಗಳು ಎದುರಾಗಿದ್ದು, ತಂಡವು ನ್ಯೂಜಿಲೆಂಡ್ ವಿರುದ್ಧ 0-3 ಹಾಗೂ ಆಸ್ಟ್ರೇಲಿಯಾ ವಿರುದ್ಧ 1-3 ರಿಂದ ಸೋಲು ಕಂಡಿದ್ದು, ಇಂಗ್ಲೆಂಡ್ ಹಾಗೂ ಚಾಂಪಿಯನ್‌್ಸ ಟ್ರೋಫಿ ಗೆಲ್ಲುವ ಒತ್ತಡಕ್ಕೆ ಸಿಲುಕಿರುವುದರಿಂದ ಕಾಳಿ ದೇವಿಯ ದರ್ಶನ ಪಡೆದಿದ್ದಾರೆ.