ನವದೆಹಲಿ, ಮಾ.2– ಒಂಬತ್ತು ತಿಂಗಳ ಬಾಹ್ಯಾಕಾಶ ಪ್ರಯಾಣದಿಂದ ಕ್ಷೇಮವಾಗಿ ಹಿಂತಿರುಗಿರುವ ಭಾರತೀಯ ಮೂಲದ ಅಮೆರಿಕ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರಿಗೆ ಭಗವದ್ಗೀತೆ, ಗಣೇಶ ವಿಗ್ರಹ ಹಾಗೂ ಭಾರತೀಯ ಆಹಾರ ಎಂದರೆ ಪಂಚ ಪ್ರಾಣವಂತೆ. ಮೂರನೇ ಬಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ ಸಂದರ್ಭದಲ್ಲಿ ಸುನೀತಾ ವಿಲಿಯಮ್ಸೌ ಅವರು ತಮ ಜೊತೆ ಭಗವದ್ಗೀತೆ ಮತ್ತು ಗಣೇಶ ಮೂರ್ತಿ ವಿಗ್ರಹವನ್ನು ಜತೆಯಲ್ಲೇ ತೆಗೆದುಕೊಂಡು ಹೋಗಿದ್ದರು.
ಮನೆಯಿರಲಿ, ಕಚೇರಿಯಿರಲಿ ಎಲ್ಲಿಗೆ ಹೋದರೂ ನಾನುಭಗವದ್ಗೀತೆ ಮತ್ತು ಗಣೇಶ ಮೂರ್ತಿಯನ್ನು ಜೊತೆಯಲ್ಲೇ ಕೊಂಡೊಯ್ಯುತ್ತೇನೆ. ನನಗೆ ಭಾರತೀಯ ಸಂಪ್ರದಾಯ, ಆಚಾರ-ವಿಚಾರಗಳು ಪಂಚ ಪ್ರಾಣ ಎಂದು ಸುನೀತಾ ಹೇಳಿಕೊಂಡಿದ್ದಾರೆ.ಭಗವದ್ಗೀತೆ ಜತೆಗೆ ಗಣೇಶ ಇದ್ದರೆ ಅಲ್ಲಿ ಅಪಜಯದ ಮಾತೇ ಇಲ್ಲ ಎಂದು ನಾನು ನಂಬುತ್ತೇನೆ. ಅದಕ್ಕೆ ನಾನು ಹಲವಾರು ಕಷ್ಟದ ಸಂದರ್ಭದಲ್ಲಿ ನನಗೆ ರಕ್ಷಣೆಯಾಗಿತ್ತು ಎಂಬುದನ್ನು ನಾನು ಸದಾಕಾಲ ಸರಿಸುತ್ತೇನೆ ಎಂದು ಸುನೀತಾ ಹೇಳಿದ್ದಾರೆ.
ಸುನೀತಾ ಅವರ ಪತಿ ಕೂಡ ಹಿಂದು ಸಂಪ್ರದಾಯವನ್ನು ಅನುಸರಿಸುತ್ತಿದ್ದು, ಅಲ್ಲಿನ ಆಧ್ಯಾತಕ ಹಾಗೂ ಸನಾತನ ಧರ್ಮದ ಬಗ್ಗೆ ಅಪಾರ ಪ್ರೀತಿ ಜತೆಗೆ ಜ್ಞಾನವನ್ನೂ ಹೊಂದಿದ್ದಾರೆ. ಹಲವಾರು ಬಾರಿ ಸಮಸ್ಯೆಗಳು ಎದುರಾದಾಗ ಭಗವದ್ಗೀತೆಯನ್ನು ಪಠಿಸುವುದರ ಜತೆಗೆ ವೇದ-ಮಂತ್ರಗಳನ್ನೂ ಆಲಿಸುತ್ತಿದ್ದರು.
ಇದೀಗ ಸುನೀತಾ ಅವರು ಕ್ಷೇಮವಾಗಿ ಹಿಂತಿರುಗಿದ್ದು, ಚೇತರಿಸಿಕೊಂಡ ನಂತರ ಅವರೊಂದಿಗೆ ನಾವು ಭಾರತಕ್ಕೆ ಭೇಟಿ ನೀಡಲಿದ್ದೇವೆ ಎಂದು ಅಮೆರಿಕದಲ್ಲಿ ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
ಭಾರತ ಭೇಟಿ ಸಂದರ್ಭದಲ್ಲಿ ತಮಗಿಷ್ಟವಾದ ಭಾರತೀಯ ಖಾದ್ಯಗಳ ರುಚಿ ನೋಡಲು ಕಾತರದಿಂದ ಕಾಯುತ್ತಿದ್ದೇವೆ. ಅದರಲ್ಲೂ ಸುನೀತಾಗೆ ಸಮೋಸಾ ಎಂದರೆ ಪಂಚಪ್ರಾಣ ಎಂದು ಸುನೀತಾ ಅವರ ಅತ್ತಿಗೆ ಪಾಂಡ್ಯ ವಿವರಣೆ ನೀಡಿದ್ದಾರೆ.