ಬೆಂಗಳೂರು,ನ.22- ಒಡಿಶಾ ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದ ಕಡಿಮೆ ಬೆಲೆಗೆ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಆರೋಪಿ ಸೇರಿದಂತೆ ಮೂವರನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿ 3.25 ಕೋಟಿ ರೂ. ಮೌಲ್ಯದ 318 ಕೆಜಿ ಗಾಂಜಾ, ಕಾರು ಹಾಗೂ ಮೂರು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳದ ಅಚ್ಚು ಸಂತೋಷ್(28), ನಗರದ ಜಕ್ಕೂರಿನಲ್ಲಿ ವಾಸವಾಗಿದ್ದ ಜಮೀರ್ ಖಾನ್(29) ಮತ್ತು ಈತನ ಪತ್ನಿ ರೇಷ(28) ಬಂಧಿತರು. ಆರೋಪಿ ಅಚ್ಚು ಸಂತೋಷ್ ವಿರುದ್ಧ ಕೇರಳದಲ್ಲಿ ಪ್ರಕರಣಗಳು ದಾಖಲಾಗಿದ್ದು, ಈತ ಕೇರಳ ಪೊಲೀಸರಿಗೆ ಬೇಕಾಗಿದ್ದನು.
ಎಚ್ಆರ್ಬಿಆರ್ ಲೇಔಟ್ನ ಮೂರು ವ್ಯಕ್ತಿಗಳು ಮಾದಕವಸ್ತು ಗಾಂಜಾವನ್ನು ಕವರ್ನಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ ಕೇರಳದ ಪ್ರಮುಖ ಆರೋಪಿ ಸೇರಿದಂತೆ ಕಾರು ಚಾಲಕ ಹಾಗು ಮಹಿಳೆಯನ್ನು ಬಂಧಿಸಿ ತಪಾಸಣೆ ನಡೆಸಿ ಅವರ ಬಳಿ ಇದ್ದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಮಾದಕವಸ್ತುವನ್ನು ಒರಿಸ್ಸಾ ಮತ್ತು ಆಂಧ್ರಪ್ರದೇಶದಿಂದ ಕಡಿಮೆ ಬೆಲೆಗೆ ಖರೀದಿಸಿ ತಂದು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದದ್ದು ವಿಚಾರಣೆಯಿಂದ ಗೊತ್ತಾಗಿದೆ.ಜಮೀರ್ ಖಾನ್ ಟ್ರಾವೆಲ್‌್ಸ ಏಜೆನ್ಸಿ ಇಟ್ಟುಕೊಂಡಿದ್ದು, ಕೇರಳಕ್ಕೆ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದಾಗ ಅಲ್ಲಿ ಅಚ್ಚು ಸಂತೋಷ್ ಪರಿಚಯವಾಗಿದ್ದು, ಈತನಿಂದ ಮಾದಕವಸ್ತು ಗಾಂಜಾವನ್ನು ಪಡೆದು ನಗರಕ್ಕೆ ತರುತ್ತಿದ್ದನು.
ಈ ಮಾದಕವಸ್ತುವನ್ನು ಈತನ ಪತ್ನಿ ಮಾರಾಟ ಮಾಡುತ್ತಿದ್ದದ್ದು ವಿಚಾರಣೆಯಿಂದ ಗೊತ್ತಾಗಿದೆ. ಇನ್ಸ್ಪೆಕ್ಟರ್ ಜಯರಾಜ್ ನೇತೃತ್ವದ ಸಿಬ್ಬಂದಿ ತಂಡ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ. ಇಬ್ಬರ ಬಂಧನ: ಒಂದು ಲಕ್ಷ ಮೌಲ್ಯದ ಗಾಂಜಾ ಜಪ್ತಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಬೆಟ್ಟದಾಸನಪುರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಇನ್ಸ್ಪೆಕ್ಟರ್ ನವೀನ್ ಅವರ ತಂಡ ಬಂಧಿಸಿ ಒಂದು ಲಕ್ಷ ಮೌಲ್ಯದ 2 ಕೆಜಿ 560 ಗ್ರಾಂ ಗಾಂಜಾ, ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ಇವರಿಬ್ಬರಿಗೆ ಕಡಿಮೆ ಬೆಲೆಗೆ ನಿಷೇಧಿತ ಮಾದಕವಸ್ತು ಗಾಂಜಾವನ್ನು ಕೊಡುತ್ತಿದುದ್ದು ವಿಚಾರಣೆಯಿಂದ ಗೊತ್ತಾಗಿದೆ.