Tuesday, August 26, 2025
Homeರಾಜ್ಯನಾಡಿನೆಲ್ಲೆಡೆ ಸಂಭ್ರಮದ ಗೌರಿ ಹಬ್ಬ

ನಾಡಿನೆಲ್ಲೆಡೆ ಸಂಭ್ರಮದ ಗೌರಿ ಹಬ್ಬ

Gauri festival celebrated across the country

ಬೆಂಗಳೂರು,ಆ.26- ನಾಡಿನೆಲ್ಲೆಡೆ ಇಂದು ಗೌರಿ ಹಬ್ಬವನ್ನು ಸಡಗರ, ಸಂಭ್ರಮ, ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಕಳೆದ ಒಂದು ವಾರದಿಂದಲೇ ಹಬ್ಬಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಇಂದು ಮೊದಲನೆಯದಾಗಿ ಗಂಗಮನಿಗೆ ಪೂಜೆ ಸಲ್ಲಿಸಿ ನಂತರ ಗೌರಿಯನ್ನು ಮನೆಗೆ ತಂದು ತಮ್ಮ ಶಕ್ತಿಗನುಸಾರವಾಗಿ ಪೂಜೆ ಸಲ್ಲಿಸಿದರು.

ಕೆಲವರ ಮನೆಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿದರೆ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಿದ್ದ ಗೌರಿಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು. ನವದಂಪತಿಗಳು ದೇವಾಲಯಕ್ಕೆ ತೆರಳಿ ಗೌರಿ ಬಾಗಿನ ಅರ್ಪಿಸುವ ಆಚರಣೆ ಇಂದಿಗೂ ಮುಂದುವರೆದುಕೊಂಡು ಬಂದಿದೆ.

ಮಹಿಳೆಯರಿಗೆ ಇದೊಂದು ಸಂಭ್ರಮದ ಹಬ್ಬವಾಗಿದ್ದು ತವರಿನ ಬಾಗಿನ ಪ್ರಮುಖವಾಗಿದೆ. ಸಹೋದರರು ಸಹೋದರಿಯರಿಗೆ, ತಾಯಿ ಮಗಳಿಗೆ ಬಾಗಿನ ಕೊಟ್ಟು ನೂರ್ಕಾಲ ಸುಖ, ಸಂತೋಷದಿಂದ ಜೀವನ ಸಾಗಿಸಿ ಎಂದು ಹರಸುವುದು ಹೆಣ್ಣುಮಕ್ಕಳಿಗೆ ಇದರ ಮುಂದೆ ದೊಡ್ಡ ಆಸ್ತಿ ಬೇರೊಂದಿಲ್ಲ ಎನ್ನಿಸುತ್ತದೆ.

ಸುಖ, ಶಾಂತಿ, ಆರೋಗ್ಯ ಕರುಣಿಸಲಿ ಎಂದು ತಮ ಮನೆಗಳಲ್ಲಿ ವಿಶೇಷವಾಗಿ ಗೌರಮ ದೇವಿಯನ್ನು ಪೂಜಿಸಿದ ದೃಶ್ಯಗಳು ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಂಡುಬಂದವು.

RELATED ARTICLES

Latest News