Friday, January 31, 2025
Homeರಾಷ್ಟ್ರೀಯ | Nationalಜಿಡಿಪಿ ಬೆಳವಣಿಗೆ 6.8ಕ್ಕೆ ಏರಿಕೆ ಸಾಧ್ಯತೆ : ಸಮೀಕ್ಷೆ

ಜಿಡಿಪಿ ಬೆಳವಣಿಗೆ 6.8ಕ್ಕೆ ಏರಿಕೆ ಸಾಧ್ಯತೆ : ಸಮೀಕ್ಷೆ

GDP growth likely to rise to 6.8: Survey

ನವದೆಹಲಿ,ಜ.31- 2024-25ರ ಆರ್ಥಿಕ ಸಮೀಕ್ಷೆ ಪ್ರಕಾರ ಮುಂದಿನ 2025-26ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು 6.3ರಿಂದ 6.8ರ ನಡುವೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಸಂಸತ್ನಲ್ಲಿ ಮಂಡಿಸಿರುವ ಆರ್ಥಿಕ ಸಮೀಕ್ಷೆಯಲ್ಲಿ ಇದು ಬಹಿರಂಗಗೊಂಡಿದೆ. ಭಾರತದ ಆರ್ಥಿಕತೆಯು ಸ್ಥಿರವಾದ ಬೆಳವಣಿಗೆಯ ಹಾದಿಯಲ್ಲಿದೆ.

ಮುಂಬರುವ ವರ್ಷಗಳಲ್ಲಿ ದೇಶವು ತನ್ನ ಆರ್ಥಿಕ ಬೆಳವಣಿಗೆಯ ದರವನ್ನು ವೇಗಗೊಳಿಸಲು ಗುರಿಯನ್ನು ಹೊಂದಿರುವುದರಿಂದ, ದೇಶೀಯ ಕಾರ್ಪೊರೇಟ್ ಮತ್ತು ಹಣಕಾಸು ವಲಯಗಳಲ್ಲಿ ಬಲವಾದ ಆಯವ್ಯಯ ಪಟ್ಟಿಯನ್ನು ಹೊಂದಿದೆ. ಆದರೆ, ಜಾಗತೀಕರಣ ಹಿಂದೆ ಸರಿಯುತ್ತಿದೆ. ಆದ್ದರಿಂದ, ಮುಂದಿನ ಎರಡು ದಶಕಗಳಲ್ಲಿ ಬೆಳವಣಿಗೆಯ ಸರಾಸರಿಯನ್ನು ಹೆಚ್ಚಿಸಲು ಜನಸಂಖ್ಯಾ ಲಾಭಾಂಶವನ್ನು ಪಡೆಯುವ ಅಗತ್ಯವಿದೆ ಎಂದು ಆರ್ಥಿಕ ಸಮೀಕ್ಷೆ 2025 ಹೇಳಿದೆ.

ಸರ್ಕಾರದ ಪ್ರಯತ್ನಗಳಿಂದಾಗಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಸಿದ್ಧವಾಗಿದೆ ಎಂದು ರಾಷ್ಟ್ರಪತಿಗಳು ವಿಶ್ವಾಸ ವ್ಯಕ್ತಪಡಿಸಿದರು. ತನ್ನ ಆಡಳಿತದ ಮಾರ್ಗದರ್ಶಿ ಸೂತ್ರಗಳನ್ನು ಪುನರುಚ್ಚರಿಸಿ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್ (ಎಲ್ಲರೊಂದಿಗೆ, ಎಲ್ಲರಿಗೂ ಅಭಿವೃದ್ಧಿ, ಎಲ್ಲರ ನಂಬಿಕೆ, ಎಲ್ಲರ ಪ್ರಯತ್ನ) ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ದೇಶವು ದೇಶದ ಗಡಿಗಳನ್ನು ರಕ್ಷಿಸಲು ಮತ್ತು ಆಂತರಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಐತಿಹಾಸಿಕ ಕ್ರಮಗಳನ್ನು ತೆಗೆದುಕೊಂಡಿದೆ ಸರ್ಕಾರವು ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯತ್ತ ಹೆಜ್ಜೆ ಹಾಕಿದೆ. ಮೇಕ್ ಇನ್ ಇಂಡಿಯಾದಿಂದ ನಾವು ಜಗತ್ತಿಗೆ ಮಾಡಲು ಮುಂದಾಗಿದ್ದೇವೆ ಎಂದಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ 6.3ರಿಂದ 6.8ರಷ್ಟು ಏರಿಕೆಯಾಗುವ ಸಂಭವವಿದೆ. ಇದೊಂದು ಆಶದಾಯಕ ಬೆಳವಣಿಗೆ. ಸರ್ಕಾರದ ದಿಟ್ಟ ಕ್ರಮಗಳಿಂದಾಗಿ ಇತರೆ ದೇಶಗಳಿಗೆ ಹೋಲಿಸಿದರೆ ನಾವು ಚೇತರಿಕೆ ಹಾದಿಯಲ್ಲಿದ್ದೇವೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ದೇಶವು ಸಿದ್ದವಾಗಿದೆ ಎಂಬ ಅಂಶವು ಉಲ್ಲೇಖವಾಗಿದೆ.

ಖಾಸಗಿ ಬಳಕೆ ಸ್ಥಿರವಾಗಿದ್ದು, ದೇಶೀಯ ಬೇಡಿಕೆಯು ಹೆಚ್ಚುತ್ತಿದೆ. ಹಣಕಾಸಿನ ಶಿಸ್ತು ಮತ್ತು ಬಾಹ್ಯ ಸಮತೋಲನವು ಆರೋಗ್ಯಕರವಾಗಿದೆ. ನಮ ಆರ್ಥಿಕ ಬೆಳವಣಿಗೆಯು ಸ್ಥೂಲವಾದ ದಾರಿಯಲ್ಲಿದೆ. ಈ ಅಂಶಗಳು ಬಾಹ್ಯ ಅನಿಶ್ಚಿತತೆಗಳ ನಡುವೆ ನಿರಂತರ ಬೆಳವಣಿಗೆಗೆ ಭದ್ರ ಬುನಾದಿಯನ್ನು ಒದಗಿಸಿದೆ ಎಂದು ಸಮೀಕ್ಷೆ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಆಹಾರ ಹಣದುಬ್ಬರವು ಕುಸಿಯುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಸಮೀಕ್ಷೆ, ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಇದು ಇಳಿಕೆಯಾಗುವ ಸಂಭವವಿದೆ. ತರಕಾರಿ ಬೆಲೆಗಳ ಹೆಚ್ಚಳ ನಿರೀಕ್ಷಿತ ಮಟ್ಟದಲ್ಲಿ ಋತುಮಾನದ ಕುಸಿತ, ಖಾರೀಫ್ ಬೆಳೆ ಆಗಮನದಿಂದ ಆಹಾರದ ಹಣದುಬ್ಬರ ಹೆಚ್ಚಳವಾಗಿತ್ತು. ಇದು ಸರಿ ದಾರಿಗೆ ಬರುವ ಸಂಭವವಿದೆ ಎಂದು ನಿರೀಕ್ಷೆ ಮಾಡಲಾಗಿದೆ.

2020ರ ಹಣಕಾಸಿನ ಮೊದಲರ್ಧದ ಅವಧಿಯಲ್ಲಿ ಆಹಾರ ಬೆಲೆಗಳನ್ನು ನಿಯಂತ್ರಣದಲ್ಲಿಡಲು ನಿರೀಕ್ಷಿಸಲಾಗಿದ್ದು, ಗ್ರಾಹಕರಿಗೆ ಪರಿಹಾರವನ್ನು ಒದಗಿಸಲಾಗುತ್ತದೆ. ದೇಶದ ವಿವಿಧ ವಲಯಗಳಲ್ಲಿ ಹೂಡಿಕೆ ಮಂದಗತಿಯಲ್ಲಿ ಸಾಗುತ್ತಿದೆ ಎಂಬುದು ಕೂಡ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಇದು ತಾತ್ಕಾಲಿಕ ಎಂದಷ್ಟೇ ಹೇಳಿರುವ ಆರ್ಥಿಕ ಸಮೀಕ್ಷೆ ನೀತಿ ಬೆಂಬಲ ಮತ್ತು ವ್ಯಾಪಾರ ಮನೋಭಾವವನ್ನು ಸುಧಾರಿಸುವುದು ಸೇರಿದಂತೆ ಹಲವಾರು ಅಂಶಗಳು ಹೂಡಿಕೆಗಳಿಗೆ ಪೂರಕವಾಗಬಹುದು.

ದೇಶೀಯ ಹೂಡಿಕೆ, ಉತ್ಪಾದನಾ ಬೆಳವಣಿಗೆ ಮತ್ತು ಹಣದುಬ್ಬರ ಇಳಿತದ ಪ್ರವೃತ್ತಿಗಳು ಮುಂದಿನ ಹಣಕಾಸು ವರ್ಷದಲ್ಲಿ ನಾವು ಧನಾತಕ ಅಂಶಗಳನ್ನು ಕಾಣಬಹುದು ಎಂದು ಸಮೀಕ್ಷೆ ಹೇಳಿದೆ.ಮೂಲ ಸೌಕರ್ಯಗಳನ್ನು ಸುಧಾರಿಸುವುದು ಮತ್ತು ಬೆಳವಣಿಗೆಯ ಗುರಿಯನ್ನು ಹೆಚ್ಚಿಸುವ, ಸ್ಥೂಲ ಆರ್ಥಿಕ ಸ್ಥಿರತೆಯೊಂದಿಗೆ ಬಳಕೆ ನಿಯಂತ್ರಿತ ಹಣದುಬ್ಬರವು ಹೂಡಿಕೆಯ ಬೆಳವಣಿಗೆಯಿಂದ ಭಾರತದ ಆರ್ಥಿಕತೆಯನ್ನು ಸುಸ್ಥಿರಗೊಳಿಸಿದೆ ಎಂದು ಸಮೀಕ್ಷೆ ವಿಶ್ವಾಸ ವ್ಯಕ್ತಪಡಿಸಿದೆ.

ಆರೋಗ್ಯ, ರಕ್ಷಣೆ, ಸಂಶೋಧನೆ, ಕ್ರಿಮಿನಲ್ ನ್ಯಾಯ, ಶಿಕ್ಷಣ, ವ್ಯಾಪಾರ ಮತ್ತು ಹಣಕಾಸು ಸೇವೆಗಳಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ಷೇತ್ರದಲ್ಲಿ ಕೃತಕ ಬುದ್ದಿಶಕ್ತಿ ಮಾನವ ಕಾರ್ಯಕ್ಷಮತೆಯನ್ನು ಮೀರಿಸುತ್ತದೆ. ಈ ಪ್ರಗತಿಯು ಕಾರ್ಮಿಕರ ಸ್ಥಳಾಂತರಕ್ಕೆ ಗಮನಾರ್ಹ ಬೆಳವಣಿಗೆಯಾಗಬಹುದು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 100 ವರ್ಷ ಪೂರ್ಣಗೊಳ್ಳುವ 2047ಕ್ಕೆ ವಿಕಸಿತ ಭಾರತದ ಗುರಿಯನ್ನು ಸಾಕಾರಗೊಳಿಸಲು ದೇಶವು ಸುಮಾರು ಒಂದು ಅಥವಾ ಎರಡು ದಶಕಗಳವರೆಗೆ ಸ್ಥಿರ ಬೆಳೆಗಳಲ್ಲಿ ಸುಮಾರು 8 ಪ್ರತಿಶತದಷ್ಟು ಬೆಳವಣಿಗೆಯ ದರವನ್ನು ಸಾಧಿಸಬೇಕಾಗಿದೆ. ಜಾಗತಿಕ ಪರಿಸರ, ರಾಜಕೀಯ ಬೆಳವಣಿಗೆಗಳು, ದೇಶದ ಆರ್ಥಿಕ ಬೆಳವಣಿಗೆಗಳ ಮೇಲೆ ಪ್ರಭಾವ ಬೀರುವುದನ್ನು ತಳ್ಳಿ ಹಾಕುವಂತಿಲ್ಲ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.

RELATED ARTICLES

Latest News