ಬೆಂಗಳೂರು,ಜ.14- ಹೊಸ ವರ್ಷದ ಆರಂಭದ ಬಳಿಕ ಭಾರಿ ಚಿನ್ನದ ಬೆಲೆ ಏರಿಕೆ ಬಳಿಕ ಇಂದು ಕೊಂಚ ಇಳಿಕೆ ಆಗಿದೆ. ಜ.4 ರಂದು 45 ರೂಪಾಯಿ ಇಳಿಕೆ ಆಗಿದ್ದು ಬಿಟ್ಟರೆ, ಮತ್ತೆ ಇಂದು ಎರಡನೇ ಬಾರಿಗೆ ಕೊಂಚ ಇಳಿಕೆ ಆಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ಜನವರಿ 14 ರಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಇಳಿಕೆಯಾಗಿದೆ. ಹೀಗಾಗಿ ಇಂದಿನ 1 ಗ್ರಾಂ ಬೆಲೆ 7,330 ಕ್ಕೆ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನದಲ್ಲಿ 11 ರೂಪಾಯಿ ಇಳಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ 7,996 ರೂಪಾಯಿ ಆಗಿದೆ.
22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 73,300 ರೂ. ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 79,960 ರೂ. ಇದೆ. ಬೆಂಗಳೂರಲ್ಲಿ 1 ಗ್ರಾಂ ಚಿನ್ನದ ಬೆಲೆ 7,330 ರೂ. ಇದೆ. ಬೆಳ್ಳಿಯ ಬೆಲೆ 2 ರೂಪಾಯಿ ಇಳಿಕೆಯಾಗಿ 92.50 ರೂ. ಇದೆ.
ಜ.1 ರಂದು 7,150 ರೂ. ನಷ್ಟಿದ್ದ ಚಿನ್ನದ ಬೆಲೆ ಜನವರಿ 14 ಕ್ಕೆ 7330 ರೂ. ಆಗಿದೆ. ವರ್ಷದ ಆರಂಭದಲ್ಲೇ ಚಿನ್ನದ ಬೆಲೆ ಏರಿಕೆ ಆರಂಭವಾಗಿತ್ತು. ಪ್ರಸಕ್ತ ವರ್ಷದ ಜನವರಿಯಲ್ಲಿ 2 ಬಾರಿ ಮಾತ್ರ ಕೊಂಚ ಬೆಲೆ ಇಳಿಕೆ ಆಗಿದ್ದು, ಚಿನ್ನದ ದರ ಸದ್ಯ ಏರಿಕೆಯ ಹಾದಿಯಲ್ಲಿದೆ.