ನವದೆಹಲಿ,ಅ.15- ರಾಷ್ಟ್ರ ರಾಜಧಾನಿ ಯಲ್ಲಿ ಚಿನ್ನದ ಬೆಲೆ ಒಂದೇ ದಿನದಲ್ಲಿ 2,850 ರೂ. ಏರಿಕೆಯಾಗುವುದರ ಮೂಲಕ 10 ಗ್ರಾಂಗೆ 1,30,800 ರೂ. ತಲುಪಿದೆ. ಧಂತೇರಾಸ್ ಹಬ್ಬದ ಹಿನ್ನೆಲೆಯಲ್ಲಿ ಚಿಲ್ಲರೆ ವ್ಯಾಪಾರಿಗಳು ಮತ್ತು ಆಭರಣ ವ್ಯಾಪಾರಿಗಳಿಂದ ಭಾರೀ ಪ್ರಮಾಣದಲ್ಲಿ ಹಬ್ಬದ ಖರೀದಿ ನಡೆದಿದೆ.
ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, 99.9 ಪ್ರತಿಶತ ಶುದ್ಧತೆಯ ಅಮೂಲ್ಯ ಲೋಹ ಸೋಮವಾರ 10 ಗ್ರಾಂಗೆ 1,27,950 ರೂ.ಗೆ ಮುಕ್ತಾಯಗೊಂಡಿತ್ತು.99.5 ಪ್ರತಿಶತ ಶುದ್ಧ ಚಿನ್ನವು ಮಂಗಳವಾರ 2,850 ರೂ. ಏರಿಕೆಯಾಗಿ 10 ಗ್ರಾಂಗೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ) ದಾಖಲೆಯ 1,30,200 ರೂ. ತಲುಪಿದೆ. ಇಲ್ಲಿವರೆಗೆ ಬಂಗಾರದ ಬೆಲೆ ಅಂದರೆ 2024ರ ಡಿಸೆಂಬರ್‌ನಿಂದ ಇಲ್ಲಿಯವರೆಗೆ ಶೇ.65.67ರಷ್ಟು ಏರಿಕೆಯಾಗಿದೆ.
ಜಾಗತಿಕ ರಾಜಕೀಯ ಕಾರಣಗಳು, ಪೂರೈಕೆ ನಿರ್ಬಂಧಗಳು ಮತ್ತು ಬಲವಾದ ದೇಶೀಯ ಹೂಡಿಕೆ ಬೇಡಿಕೆ ಹಾಗೂ ದುರ್ಬಲ ರೂಪಾಯಿಯಿಂದ ಚಿನ್ನ ಮತ್ತು ಬೆಳ್ಳಿ ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ. ಏರಿಕೆಯ ಪ್ರವೃತ್ತಿ ಹಾಗೇ ಮುಂದುವರೆದಿದೆ.
ಬೆಳ್ಳಿ ಕೂಡ 6,000 ರೂ.ಗಳಷ್ಟು ಏರಿಕೆಯಾಗಿ ಪ್ರತಿ ಕಿಲೋಗ್ರಾಂಗೆ 1,85,000 ರೂ.ಗಳ ಜೀವಮಾನದ ಗರಿಷ್ಠ ಮಟ್ಟ ತಲುಪಿದೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ), ಇದು ಸತತ 5ನೇ ದಿನದ ಏರಿಕೆಯನ್ನು ಸೂಚಿಸುತ್ತದೆ. ಹಿಂದಿನ ಮಾರುಕಟ್ಟೆ ಅವಧಿಯಲ್ಲಿ ಬಿಳಿ ಲೋಹವು ಪ್ರತಿ ಕೆಜಿಗೆ 1,79,000 ರೂ.ಗಳಲ್ಲಿ ಸ್ಥಿರವಾಗಿತ್ತು.
ರೂಪಾಯಿ ಕುಸಿತವೇ ಬೆಲೆ ಏರಿಕೆಗೆ ಕಾರಣ:
ಹಬ್ಬ ಮತ್ತು ಮದುವೆ ಋತುವಿಗೆ ಮುಂಚಿತವಾಗಿ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ನಿರಂತರ ಬೇಡಿಕೆ ಹೆಚ್ಚಾಗಿದೆ. ಮಂಗಳವಾರ ಯುಎಸ್ ಡಾಲರ್ ವಿರುದ್ಧ 12 ಪೈಸೆ ಕುಸಿದು 88.80ರಷ್ಟು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಮರಳಿದ್ದು, ಬೆಳ್ಳಿ ಬೆಲೆಯಲ್ಲಿ ತೀವ್ರ ಏರಿಕೆಗೆ ಕಾರಣ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಬೆಳ್ಳಿ ಬೆಲೆ 95,300 ರೂ. ಅಥವಾ ಶೇ. 106.24ರಷ್ಟು ಏರಿಕೆಯಾಗಿದೆ. ಡಿಸೆಂಬರ್ 31, 2024 ರಂದು ಪ್ರತಿ ಕಿಲೋಗ್ರಾಂಗೆ 89,700 ರೂಪಾಯಿ ಇತ್ತು. ಸತತ ಎಂಟು ವಾರಗಳ ಕಾಲ ಏರಿಕೆ ಕಂಡ ಸ್ಪಾಟ್ ಚಿನ್ನ, ಪ್ರತಿ ಔನ್‌್ಸಗೆ 4,179 ಡಾಲರ್‌ಗಳ ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ.
ವಿಶ್ವದ ಅತಿದೊಡ್ಡ ಬೆಳ್ಳಿ ಬಳಕೆದಾರ ರಾಷ್ಟ್ರವಾದ ಭಾರತದಲ್ಲಿ, ಬಿಳಿ ಲೋಹದ ಬೆಲೆಗಳು ಜಾಗತಿಕ ಮಾನದಂಡಗಳಿಗಿಂತ ಶೇ. 10-15ರಷ್ಟು ಹೆಚ್ಚಿನ ಏರಿಕೆಯಾಗಿ ವಹಿವಾಟು ನಡೆಸುತ್ತಿವೆ. ಬಲವಾದ ಹೂಡಿಕೆ ಮತ್ತು ಹಬ್ಬ ಸಂಬಂಧಿತ ಬೇಡಿಕೆಯಿಂದಾಗಿ, ಭೌತಿಕವಾಗಿ ಬೆಂಬಲಿತ ಇಟಿಎಪ್‌ಗಳು ಹೊಸ ಚಂದಾದಾರಿಕೆಗಳನ್ನು ನಿಲ್ಲಿಸಲು ಪ್ರೇರೇಪಿಸುತ್ತಿವೆ ಎಂದು ಸರಕು ಮತ್ತು ಕರೆನ್ಸಿಗಳ ಮುಖ್ಯಸ್ಥ ಪ್ರವೀಣ್ ಸಿಂಗ್ ಹೇಳಿದ್ದಾರೆ.
ದೇಶೀಯ ಮಾರುಕಟ್ಟೆಗಳಲ್ಲಿ ಬೆಳ್ಳಿ ಪ್ರತಿ ಕಿಲೋಗ್ರಾಂಗೆ ರೂ. 1,94,639 ಕ್ಕೆ ಏರುವ ಸಾಧ್ಯತೆಯಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಇದು ಔನ್‌್ಸಗೆ ಯುಎಸ್‌ಡಿ 59.89 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.