ಬೆಂಗಳೂರು, ಫೆ.14- ನಗರದಲ್ಲಿ ವಾಸಿಸುತ್ತಿರುವ ನಿಮಗೆ ಇನ್ನು ಇ ಖಾತಾ ಸಿಗುತ್ತಿಲ್ಲವೇ ಬೇಜಾರು ಮಾಡಿಕೊಳ್ಳಬೇಡಿ ನಿಮ್ಮ ಮನೆ ಬಾಗಿಲಿದೆ ಬಂದು ಖಾತಾ ವಿತರಿಸುವ ವಿನೂತನ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ.
ಆನ್‌ಲೈನ್‌ನಲ್ಲಿ ಇ ಖಾತ ಗೆ ಅಪ್ಪೆ ಮಾಡಿರುವ ಅಸ್ತಿ ಮಾಲೀಕರ ಮನೆ ಬಾಗಿಲಿಗೆ ಖಾತ ವಿತರಣೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ 6 ತಿಂಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಇ ಖಾತೆಗೆ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕೆಲವರಿಗೆ ಮಾತ್ರ ಇ ಖಾತಾ ಸಿಕ್ಕಿದೆ. ಉಳಿದವರು ಖಾತಾಗೆ ಪರದಾಡುತ್ತಿದ್ದಾರೆ.
ಮಾಡಿದ ಲಕ್ಷಾಂತರ ಆಸ್ತಿ ಮಾಲೀಕರು. ಇದುವರೆಗೂ ಸುಮಾರು 11 ಲಕ್ಷ ಕಟ್ಟಡ ಮಾಲೀಕರು ಇ ಖಾತಾಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕೇವಲ ಒಂದೂವರೆ ಲಕ್ಷ ಮಂದಿಗೆ ಮಾತ್ರ ಇ ಖಾತಾ ಸಿಕ್ಕಿದೆ.
ಖಾತಾಗೆ ಅರ್ಜಿ ಸಲ್ಲಿಸಿರುವವರು ಮೂಲ ಮಾಲೀಕರೇ ಅಥವಾ ಅವರ ಹೆಸರಿನಲ್ಲಿ ಬೇರೆ ಯಾರಾದರೂ ಅರ್ಜಿ ಹಾಕಿರುವವರೇ ಎಂಬ ಅನುಮಾನ ಬಿಬಿಎಂಪಿ ಅಧಿಕಾರಿಗಳಿಗೆ ಕಾಡತೊಡಗಿದೆ.
ಪ್ರತಿನಿತ್ಯ ಸಾವಿರಾರು ಮಂದಿ ನಮಗೆ ಇನ್ನು ಖಾತಾ ಸಿಕ್ಕಿಲ್ಲ ಎಂದು ದೂರು ನೀಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಆಯುಕ್ತ ತುಷಾರ್‌ಗಿರಿನಾಥ್ ಅವರು ಖಾತಾಗೆ ಅರ್ಜಿ ಸಲ್ಲಿಸಿರುವವರ ಮನೆ ಬಾಗಿಲಿಗೆ ಖಾತಾ ವಿತರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗಾಗಿ ಕೆಲವೇ ದಿನಗಳಲ್ಲಿ ಕಂದಾಯ ವಿಭಾಗದ ಅಧಿಕಾರಿಗಳಿಗೆ ನಿಮ್ಮ ಬಾಗಿಲಿಗೆ ಬಂದು ಇ ಖಾತಾ ವಿತರಿಸಲಿದ್ದಾರೆ.