ಬೆಂಗಳೂರು,ಜು.18- ಮೇಕೆಗಳನ್ನು ಸಾಗಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿ ಸುಮಾರು 16 ಮೇಕೆಗಳು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನೈಸ್‍ರೋಡ್‍ನಲ್ಲಿ ನಡೆದಿದೆ.ವಿಜಯಪುರದಿಂದ ತಮಿಳುನಾಡಿಗೆ ಸುಮಾರು 40 ಮೇಕೆಗಳನ್ನು ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ 16 ಮೇಕೆಗಳು ಮೃತಪಟ್ಟಿವೆ. ಚಾಲಕ ಶಿವಾನಂದನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.