Friday, November 22, 2024
Homeರಾಜ್ಯರಾಜ್ಯದ 137 ಧಾರ್ಮಿಕ ಸಂಸ್ಥೆಗಳಿಗೆ 786.50 ಲಕ್ಷ ರೂ.ಬಿಡುಗಡೆ ಮಾಡಿದ ಸರ್ಕಾರ

ರಾಜ್ಯದ 137 ಧಾರ್ಮಿಕ ಸಂಸ್ಥೆಗಳಿಗೆ 786.50 ಲಕ್ಷ ರೂ.ಬಿಡುಗಡೆ ಮಾಡಿದ ಸರ್ಕಾರ

ಬೆಂಗಳೂರು,ಮಾ.6- ರಾಜ್ಯದ 137 ಧಾರ್ಮಿಕ ಸಂಸ್ಥೆಗಳಿಗೆ 786.50 ಲಕ್ಷ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಧಾರ್ಮಿಕ ಸ್ಥಳಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ವಸತಿ ವ್ಯವಸ್ಥೆ 386 ನಿರ್ಮಾಣದಡಿಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಆಯುಕ್ತರಿಗೆ ಷರತ್ತುಗೊಳಪಟ್ಟು ಅನುದಾನ ಬಿಡುಗಡೆ ಮಾಡಲು ಮಂಜೂರಾತಿ ನೀಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ವಿವಿಧ ಗಣ್ಯರು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳಿಂದ ಅನುದಾನ ಕೋರಿ ಸ್ವೀಕೃತವಾದ ಪ್ರಸ್ತಾವನೆಗಳನ್ನು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಪರಿಶೀಲಿಸಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.ಪ್ರಸಕ್ತ ಆರ್ಥಿಕ ಸಾಲಿನಲ್ಲಿ ದುರಸ್ಥಿ, ಜೀರ್ಣೋದ್ಧಾರ, ನಿರ್ಮಾಣ ಯೋಜನೆಯಡಿಯಲ್ಲಿ ವಿವಿಧ ಜಿಲ್ಲೆಗಳ ದೇವಸ್ಥಾನ, ಮಠ, ಸಂಘ ಸಂಸ್ಥೆಗಳ ದುರಸ್ಥಿ, ಜೀರ್ಣೋದ್ಧಾರ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವನ್ನು ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಯುಕ್ತರು ಕೋರಿದ್ದರು.

ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಕೆಲವು ಷರತ್ತುಗಳನ್ನ ವಿಸಿ ಅನುದಾನ ಬಿಡುಗಡೆಗೆ ಮಂಜೂರಾತಿ ನೀಡಿದೆ. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಧಾರ್ಮಿಕ ಸಂಸ್ಥೆಗಳಿಗೆ ಮಂಜೂರು ಮಾಡಲಾದ ಅನುದಾನವನ್ನು ಖಜಾನೆ-2 ರ ಮೂಲಕ ಜಿಲ್ಲಾಕಾರಿಗಳ ಡಿಡಿಓ ಸಂಕೇತಕ್ಕೆ ಅಪ್ಲೋಡ್ ಮಾಡುವುದು, ಜಿಲ್ಲಾಕಾರಿಗಳು ನಿಯಮಾನುಸಾರ ಈ ಅನುದಾನವನ್ನು ಡ್ರಾ ಮಾಡಲು ಕ್ರಮ ವಹಿಸಬೇಕು.

ಅನುದಾನ ಬಿಡುಗಡೆ ಮಾಡಿರುವ ಸಂಸ್ಥೆಯು ನಿಯಮಾನುಸಾರ ನೀಡಬಹುದಾದ ಮೊತ್ತವನ್ನು ಮುಂಗಡ ರಸೀದಿ ಪಡೆದು ಬಿಲ್ ಪಾವತಿಸಬೇಕು ಎಂಬುದು ಸೇರಿದಂತೆ ಕೆಲವು ಷರತ್ತುಗಳನ್ನು ಆದೇಶದಲ್ಲಿ ವಿಸಲಾಗಿದೆ. 2 ಲಕ್ಷದಿಂದ 50 ಲಕ್ಷ ರೂ.ವರೆಗೂ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ರಾಮದುರ್ಗದ ಶಿವಪ್ರತಿಷ್ಠಾಪನಾ ಸೇವಾ ಸಮಿತಿಗೆ 50 ಲಕ್ಷ ರೂ. ಮಂಜೂರು ಮಾಡಲಾಗಿದೆ.

RELATED ARTICLES

Latest News