Saturday, April 19, 2025
Homeರಾಜ್ಯಶಕ್ತಿ ಯೋಜನೆ ಫಲಾನುಭವಿಗಳಿಗೆ ಸ್ಮಾರ್ಟ್‌ ಕಾರ್ಡ್‌ ನೀಡಲು ಮುಂದಾದ ಸರ್ಕಾರ

ಶಕ್ತಿ ಯೋಜನೆ ಫಲಾನುಭವಿಗಳಿಗೆ ಸ್ಮಾರ್ಟ್‌ ಕಾರ್ಡ್‌ ನೀಡಲು ಮುಂದಾದ ಸರ್ಕಾರ

Government to provide smart cards to Shakti Yojana beneficiaries

ಬೆಂಗಳೂರು,ಏ.17- ರಾಜ್ಯ ಕಾಂಗ್ರೆಸ್‌‍ ಸರ್ಕಾರ ಮಹಿಳೆಯರಿಗಾಗಿ ಜಾರಿ ಮಾಡಲಾಗಿದ್ದ ಶಕ್ತಿ ಯೋಜನೆ ಯನ್ನು ಸರಳೀಕರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಶೀಘ್ರದಲ್ಲೇ ಫಲಾನುಭವಿಗಳಿಗೆ ಸಾರ್ಟ್‌ ಕಾರ್ಡ್‌ ವಿತರಿಸಲಿದೆ. ಇದರಿಂದ ಮಹಿಳೆಯರಿಗೆ ಆಧಾರ್‌ ಕಾರ್ಡ್‌ ಇಟ್ಟುಕೊಂಡು ಪ್ರಯಾಣ ಮಾಡುವ ಕಿರಿಕಿರಿ ತಪ್ಪಲಿದೆ.

ಸಾರಿಗೆ ಬಸ್‌‍ನಲ್ಲಿ ಪ್ರಯಾಣಿಸುವ ರಾಜ್ಯದ ಮಹಿಳೆಯರು ಇನುಂದೆ ಸಾರ್ಟ್‌ ಕಾರ್ಡ್‌ ತೋರಿಸಿದ್ರೆ ಸಾಕು, ಆಧಾರ್‌ ಕಾರ್ಡ್‌ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಇನ್ನೆರಡು ತಿಂಗಳಲ್ಲಿ ಮಹಿಳೆಯರಿಗೆ ಸಾರ್ಟ್‌ ಕಾರ್ಡ್‌ ಉಚಿತವಾಗಿ ಕೈಸೇರಲಿದೆ. ಈಗಾಗಲೇ ಹಣಕಾಸು ಇಲಾಖೆಗೆ ಕಡತ ಹೋಗಿದ್ದು ಅನುಮತಿ ಒಂದೇ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಟೆಂಡರ್‌ ಕೂಡ ಕರೆಯಲು ಸಾರಿಗೆ ಇಲಾಖೆ ಮುಂದಾಗಿದೆ.

ಮಹಿಳೆಯರು ಸಾರ್ಟ್‌ ಕಾರ್ಡ್‌ ಬೇಕು ಅಂದರೆ, ಗ್ರಾಮ ಒನ್‌, ಬೆಂಗಳೂರು ಒನ್‌ನಲ್ಲಿ ಅರ್ಜಿ ಹಾಕಿದರೆ, ಸಾರ್ಟ್‌ ಕಾರ್ಡ್‌ ಸಿಗಲಿದೆ. ಇನ್ನೆರಡು ತಿಂಗಳಲ್ಲಿ ಸಾರ್ಟ್‌ ಕಾರ್ಡ್‌ ಸಿಗಲಿದೆ. ಸರ್ಕಾರದಿಂದ ಪ್ರತ್ಯೇಕ ಸಾರ್ಟ್‌ ಕಾರ್ಡ್‌ಗಳ ವಿತರಣೆ ಇರಲ್ಲ. ಸಾರ್ಟ್‌ ಕಾರ್ಡ್‌ ಪಡೆಯುವ ವೇಳೆ ನಕಲಿ ಆಧಾರ್‌ ಕಾರ್ಡ್‌ ನೀಡಿ ತಗಲಾಗಿಕೊಂಡರೆ ನಿಮ ಅರ್ಜಿಯನ್ನೇ ರದ್ದುಗೊಳಿಸುವ ಸಾಧ್ಯತೆ ಇರಲಿದೆ.

ಪ್ರಿಂಟ್‌ ಆದ ಮಾಹಿತಿಯುಳ್ಳ ದಾಖಲೆಯೇ ಸಾರ್ಟ್‌ ಕಾರ್ಡ್‌ ಆಗಿರಲಿದೆ. ಮಾಸಿಕ ಪಾಸಿನಂತೆ ಪ್ರತ್ಯೇಕ ಪಾಸ್‌‍ ವಿತರಣೆ ಇರಲ್ಲ. ಅರ್ಜಿ ಸಲ್ಲಿಸಿದ ಕೂಡಲೇ ನೀಡಲಾಗುವ ಪ್ರಿಂಟ್‌ಔಟ್‌ ಅನ್ನು ಸಾರ್ಟ್‌ ಕಾರ್ಡ್‌ ಎಂದು ಪರಿಗಣಿಸಲಾಗುತ್ತದೆ.ಸೇವಾಸಿಂಧು ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ. ಆಧಾರ್‌ ಕಾರ್ಡ್‌ನ್ನು ದಾಖಲೆಯಾಗಿ ಪರಿಗಣಿಸಿ ರಾಜ್ಯದ ಮಹಿಳೆಯರಿಗೆ ಸಾರ್ಟ್‌ ಕಾರ್ಡ್‌ ವಿತರಣೆ ಮಾಡಲಾಗತ್ತದೆ. ಸೇವಾಕೇಂದ್ರದಲ್ಲಿಯೇ ಸಾರ್ಟ್‌ಕಾರ್ಡ್‌ ಪ್ರಿಂಟ್‌ ಹಾಕಲಾಗುತ್ತದೆ.

ನಮ ರಾಜ್ಯದ ನಿವಾಸಿಗೆ ಮಾತ್ರ ಸಾರ್ಟ್‌ ಕಾರ್ಡ್‌ ವಿತರಿಸಲಾಗುತ್ತದೆ. ಆಧಾರ್‌ ಕಾರ್ಡ್‌ನಲ್ಲಿ ಕೇವಲ ಕರ್ನಾಟಕದೊಳಗಿನ ವಿಳಾಸ ಇರಬೇಕು. ಶಕ್ತಿ ಯೋಜನೆಯ ಲಾಭಕ್ಕಾಗಿ ಆಧಾರ್‌ ಕಾರ್ಡ್‌ನಲ್ಲಿ ವಿಳಾಸ ಬದಲಿಸಿಕೊಂಡರೆ ಸಾರ್ಟ್‌ ಕಾರ್ಡ್‌ ಸಿಗೋದು ಅನುಮಾನ ಎಂದು ಹೇಳಲಾಗುತ್ತಿದೆ.

RELATED ARTICLES

Latest News