ಬೆಂಗಳೂರು,ಆ.12– ಖಾಸಗಿಯವರು ನಿರ್ಮಾಣ ಮಾಡುವ ಲೇಔಟ್‌ಗಳಿಗೆ ವಿದ್ಯುತ್, ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಅವರೇ ಒದಗಿಸಿಕೊಡಬೇಕು. ಸರ್ಕಾರ ಇದನ್ನು ಮಾಡಿಕೊಡುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಪರಿಷತ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಸದಸ್ಯ ಸತೀಶ್‌ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಖಾಸಗಿಯವರು ನಿರ್ಮಾಣ ಮಾಡುವ ಲೇಔಟ್‌ಗಳಿಗೆ ಸರ್ಕಾರ ವಿದ್ಯುತ್, ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅವರೇ ನಿರ್ಮಾಣ ಮಾಡಿಕೊಡಬೇಕು. ಇದನ್ನು ಸರ್ಕಾರ ಹೇಗೆ ಮಾಡಿಕೊಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.
ಲೇಔಟ್ ನಿರ್ಮಾಣ ಮಾಡುವಾಗಲೇ ಸಂಬಂಧಪಟ್ಟ ಮಾಲೀಕರು ನಿರ್ಮಾಣ ಮಾಡಬೇಕೆಂಬ ನಿಯಮವಿರುತ್ತದೆ. ಸರ್ಕಾರದಿಂದ ನಿರ್ಮಾಣ ಮಾಡುವ ಲೇಔಟ್‌ಗಳಿಗೆ ನಾವು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತೇವೆ. ಖಾಸಗಿಯವರಿಗೂ ನಮಗೂ ಏನು ಸಂಬಂಧ ಎಂದು ಮರುಪ್ರಶ್ನಿಸಿದರು.
ಯಾವುದೇ ಲೇಔಟ್ ನಿರ್ಮಾಣ ಮಾಡುವಾಗ ಪೂರ್ಣ ಪ್ರಮಾಣದಲ್ಲಿ ಮಾಲೀಕರು ಬಳಸಲು ಬರುವುದಿಲ್ಲ. ಪ್ರಾರಂಭದಲ್ಲಿ ಶೇ.40ರಷ್ಟು ಯೋಜನೆಗೆ ಅನುಮೋದನೆ ನೀಡಲಾಗುತ್ತದೆ. ನಂತರ ಹಂತ ಹಂತವಾಗಿ ಅಭಿವೃದ್ಧಿಪಡಿಸಿದ ಬಳಿಕ ಪೂರ್ಣ ಅನುಮೋದನೆ ನೀಡಲಾಗುವುದು ಎಂದರು.