Wednesday, October 16, 2024
Homeರಾಷ್ಟ್ರೀಯ | Nationalಝಿಕಾ ವೈರಸ್‌‍ : ಮುನ್ನೆಚ್ಚರಿಕೆ ವಹಿಸುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ಝಿಕಾ ವೈರಸ್‌‍ : ಮುನ್ನೆಚ್ಚರಿಕೆ ವಹಿಸುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ,ಜು.4- ಮಹಾರಾಷ್ಟ್ರದಲ್ಲಿ ಝಿಕಾ ವೈರಸ್‌‍ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸೋಂಕಿನ ಕುರಿತು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಿ ಸಲಹೆಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಝಿಕಾ ವೈರಸ್‌‍ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆ ಎಲ್ಲಾ ರಾಜ್ಯಗಳು ನಿರಂತರವಾಗಿ ಈ ಕುರಿತು ನಿಗಾ ವಹಿಸುವಂತೆ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ.ಅತುಲ್‌ ಗೋಯೆಲ್‌ ತಿಳಿಸಿದ್ದಾರೆ.

ಝಿಕಾ ಸೋಂಕು ಗರ್ಭಿಣಿ ಭ್ರೂಣದ ಮೈಕ್ರೊಸೆಾಲಿ (ತಲೆಗಾತ್ರ ಕಡಿಮೆ) ಮತ್ತು ನರವೈಜ್ಞಾನಿಕ ಸಮಸ್ಯೆಗೆ ಕಾರಣವಾಗುವ ಹಿನ್ನೆಲೆ ಅಗತ್ಯ ಮೇಲ್ವಿಚಾರಣೆಯೊಂದಿಗೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸುವಂತೆ ಸೂಚಿಸಲಾಗಿದೆ. ಝಿಕಾ ವೈರಸ್‌‍ ಸೋಂಕಿತ ಪ್ರದೇಶಗಳಲ್ಲಿ ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸುವುದು. ಇಂತಹ ಪ್ರದೇಶಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯವನ್ನು ನೀಡುವಂತೆ, ಗರ್ಭಿಣಿಯರಲ್ಲಿ ಝಿಕಾ ಸೋಂಕು ದೃಢಪಟ್ಟರೆ, ಕೇಂದ್ರ ಸರ್ಕಾರದ ಮಾರ್ಗಸೂಚನೆ ಅನುಸಾರ ಕ್ರಮ ನಡೆಸುವಂತೆ ಕೂಡ ರಾಜ್ಯಗಳಿಗೆ ಒತ್ತಾಯಿಸಲಾಗಿದೆ.

ಏಡಿಸ್‌‍ ಸೊಳ್ಳೆಗಳಿಂದ ಪ್ರದೇಶಗಳು ಮುಕ್ತವಾಗಿರುವಂತೆ ನೋಡಿಕೊಳ್ಳುವ ಜೊತೆಗೆ ಈ ಕುರಿತು ಮೇಲ್ವಿಚಾರಣೆಗೆ ನೋಡಲ್‌ ಅಽ ಕಾರಿಗಳನ್ನು ನೇಮಿಸಬೇಕು. ಅಗತ್ಯ ಆರೋಗ್ಯ ಸೌಲಭ್ಯ ಮತ್ತು ಆಸ್ಪತ್ರೆಗಳ ಕುರಿತು ಅವರು ಸಲಹೆ ನೀಡಬೇಕು. ಜನನಿಬಿಡ ಪ್ರದೇಶ, ಮನೆ ಸುತ್ತಮುತ್ತ, ಕಾರ್ಯ ಸ್ಥಳ, ಶಾಲೆ, ಕಟ್ಟಡ ನಿರ್ಮಾಣ ಸ್ಥಳಗಳು, ಸಂಸ್ಥೆ ಸುತ್ತಮುತ್ತ ಝಿಕಾ ಸೋಂಕಿನ ಕುರಿತು ಹೆಚ್ಚಿನ ಕಣ್ಗಾವಲು ವಹಿಸಿ, ಅಗತ್ಯ ಕ್ರಮಕ್ಕೆ ಮುಂದಾಗಬೇಕು.

ಜೊತೆಗೆ ರಾಜ್ಯಗಳು ಸಾಮಾಜಿಕ ಜಾಲತಾಣ ಮತ್ತಿತರ ವೇದಿಕೆ ಬಳಕೆ ಮಾಡಿಕೊಂಡು ಝಿಕಾ ವೈರಸ್‌‍ ಸೋಂಕಿನ ಕುರಿತು ಮುನ್ನೆಚ್ಚರಿಕೆ ಕ್ರಮದ ಅರಿವು ಮೂಡಿಸಬೇಕು. ಈ ಮೂಲಕ ಸೋಂಕಿನ ಕುರಿತು ಸಮುದಾಯದಲ್ಲಿ ಮೂಡಿರುವ ಆತಂಕ ತಗ್ಗಿಸುವ, ಅರಿವು ಮೂಡಿಸಬೇಕು. ಝಿಕಾ ಕೂಡ ಇತರೆ ಸೋಂಕಿನಂತೆ ಯಾವುದೇ ಲಕ್ಷಣ ಅಥವಾ ಸೌಮ್ಯ ಲಕ್ಷಣ ಹೊಂದಿದ್ದು, ಈ ಕುರಿತು ಜನರಿಗೆ ತಿಳಿಸಬೇಕು.

ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಝಿಕಾ ವೈರಸ್‌‍ ಸೋಂಕು ಮಗುವಿನ ಮೈಕ್ರೊಸೆಾಲಿಗೆ ಸಂಬಂಧಿಸಿದೆ. 2016ರಿಂದ ಮೈಕೋಸೆಾಲಿ ಸಂಬಂಧಿತ ಝಿಕಾ ಸೋಂಕು ದೇಶದಲ್ಲಿ ಕಂಡು ಬಂದಿರಲಿಲ್ಲ.

ಸೂಕ್ತ ಸಮಯದಲ್ಲಿ ಪತ್ತೆ ಮತ್ತು ನಿಯಂತ್ರಣದ ಮೂಲಕ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ರಾಜ್ಯಗಳಿಗೆ ಕಣ್ಗಾವಲು ವಹಿಸುವಂತೆ ಸಲಹೆ ನೀಡಲಾಗಿದ್ದು, ಎಲ್ಲಾ ಮಟ್ಟದಲ್ಲಿ ಸಿದ್ಧತೆ ಲಭ್ಯವಾಗಿರುವಂತೆ ಕ್ರಮ ಕೈಗೊಳ್ಳಬೇಕು. ರಾಜ್ಯಗಳು ಐಡಿಎಸ್‌‍ಪಿ ಮತ್ತು ಎನ್‌ಸಿವಿಬಿಡಿಸಿ ಕಾರ್ಯಕ್ರಮಗಳ ಮೂಲಕ ಪ್ರಕರಣದ ತಕ್ಷಣ ಪತ್ತೆಗೆ ಮುಂದಾಗಬೇಕು. ರಾಷ್ಟ್ರೀಯ ವೈರಾಲಾಜಿ ಸಂಸ್ಥೆ (ಎನ್‌ಐವಿ), ಪುಣೆಯ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಮತ್ತು ದೆಹಲಿಯ ಐಸಿಎಂಆರ್‌ನಿಂದ ಕೆಲವು ಆಯ್ದ ಸಂಶೋಧನಾ ಮತ್ತು ಪತ್ತೆ ಕೇಂದ್ರದಲ್ಲಿ ಝಿಕಾ ಸೋಂಕಿನ ಪರೀಕ್ಷೆ ನಡೆಸಬಹುದಾಗಿದೆ.

ಡೆಂಗ್ಯೂ ಮತ್ತು ಚಿಕನ್‌ಗುನ್ಯಾನಂತೆ ಏಡಿಸ್‌‍ ಸೊಳ್ಳೆಯಿಂದ ಹರಡುವ ಸೋಂಕು ಇದಾಗಿದೆ. ಇದು ಮಾರಣಾಂತಿಕ ಸೋಂಕು ಅಲ್ಲ. ಆದರೆ, ಝಿಕಾ ಮೈಕ್ರೊಸೆಾಲಿಯೊಂದಿಗೆ ಸಂಬಂಧ ಹೊಂದಿದ್ದಲ್ಲಿ, ಇದು ಗರ್ಭಿಣಿಯರ ಭ್ರೂಣದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ.

2016ರಲ್ಲಿ ಗುಜರಾತ್‌ನಲ್ಲಿ ಮೊದಲ ಬಾರಿಗೆ ಝಿಕಾ ಸೋಂಕು ಪತ್ತೆಯಾಗಿತ್ತು. ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ್‌, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಮತ್ತು ಕರ್ನಾಟಕದಲ್ಲೂ ಇದರ ವರದಿಯಾಗಿದೆ. ಈ ವರ್ಷ ಜುಲೈ 2ರವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 8 ಪ್ರಕರಣ ವರದಿಯಾಗಿದೆ.

RELATED ARTICLES

Latest News