ಬೆಂಗಳೂರು. : ದುರಾಸೆಯಿಂದಾಗಿ ಸ್ನೇಹಿತನ ಮನೆಯಲ್ಲೇ ಕಳ್ಳತನ ಮಾಡಿದ್ದ ಬಿ.ಇ.ಏರೊನಾಟಿಕಲ್ ಪದವೀಧರನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿ 35 ಲಕ್ಷ ವೌಲ್ಯದ 453 ಗ್ರಾಂ ಚಿನ್ನಾಭರಣ ಗಳನ್ನು ವಶಪಡಿಸಿಕೊಂಡಿದ್ದಾರೆ.
ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿರುವ ಭರತ್(25) ಬಿ.ಇ.ಏರೊನಾಟಿಕಲ್ ಪದವೀಧರ. ದೊಡ್ಡಗೌಡನಪಾಳ್ಯ, ವೈ.ಸಿ. ಕೆಂಪಣ್ಣ ಲೇಔಟ್ನಲ್ಲಿ ವಾಸವಿರುವ ಕುಟುಂಬದವರು ತನ್ನ ಅಕ್ಕನ ಮಗನ ಮದುವೆಗೆಂದು ಆಂಧ್ರಪ್ರದೇಶದ ಚಿತ್ತೂರಿಗೆ ಹೋಗಿದ್ದು ಇವರ ಮಗ ಮನೆಯಲ್ಲಿದ್ದನು.
ಈತ ತನ್ನ ಮೂವರು ಸ್ನೇಹಿತರ ಜೊತೆ ರಾತ್ರಿ ಊಟ ಮಾಡಿಕೊಂಡು ಮನೆಯಲ್ಲಿಯೇ ಮಲಗಿದ್ದಾರೆ. ನಂತರ ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ಸಿನಿಮಾಗೆ ಹೋಗಿದ್ದಾಗ ಮನೆಯಲ್ಲಿರುವ ಚಿನ್ನಾಭರಣಗಳು ಕಳ್ಳತನವಾಗಿದೆ.
ಆಂಧ್ರಕ್ಕೆ ಹೋಗಿದ್ದ ಕುಟುಂಬದವರು ವಾಪಸ್ ಮನೆಗೆ ಬಂದು ನೋಡಿದಾಗ ಕೊಠಡಿಯ ಬೀರುವಿನಲ್ಲಿಟ್ಟಿದ್ದ ಸುಮಾರು 450 ಗ್ರಾಂ ಚಿನ್ನಾಭರಣಗಳು ಕಳ್ಳತನವಾಗಿರುವುದು ಕಂಡುಬಂದಿದೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ದೂರುದಾರರ ಮಗನ ಜೊತೆ ರಾತ್ರಿ ಮನೆಯಲ್ಲಿ ತಂಗಿದ್ದ ಮೂವರು ಸ್ನೇಹಿತರ ಪೈಕಿ ಒಬ್ಬ ಸ್ನೇಹಿತನನ್ನು ಉತ್ತರಹಳ್ಳಿಯ ಮೂಕಾಂಬಿಕಾನಗರದಲ್ಲಿರುವ ಅಪಾರ್ಟ್ಮೆಂಟ್ವೊಂದರಿಂದ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆಭರಣ ಕಳವು ಮಾಡಿರುವುದಾಗಿ ತಿಳಿಸಿದ್ದಾನೆ.
ಅಂದು ಅವರ ಮನೆಯಲ್ಲಿ ಸ್ನೇಹಿತರ ಜೊತೆ ಊಟ ಮಾಡಿ ಅಲ್ಲಿಯೇ ಮಲಗಿದ್ದು, ಮಧ್ಯರಾತ್ರಿ ಯಾರಿಗೂ ಗೊತ್ತಾಗದಂತೆ ಕೊಠಡಿಯ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕಳುವು ಮಾಡಿ, ಅನುಮಾನ ಬಾರದಂತೆ ರಾತ್ರಿ ಅಲ್ಲಿಯೇ ಮಲಗಿದ್ದು, ಬೆಳಿಗ್ಗೆ ಎಲ್ಲರ ಜೊತೆ ಸಿನಿಮಾ ನೋಡಿ, ನಂತರ ಕಳುವು ಮಾಡಿದ್ದ ಚಿನ್ನಾಭರಣಗಳನ್ನು ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದಾಗಿ ಹೇಳಿದ್ದಾನೆ.
ಆರೋಪಿಯ ಮಾಹಿತಿ ಮೇರೆಗೆ ಆತನ ಮನೆಯಲ್ಲಿ ಬಚ್ಚಿಟ್ಟಿದ್ದ ಒಟ್ಟು 453 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ವೌಲ್ಯ 35 ಲಕ್ಷ ರೂಗಳೆಂದು ಅಂದಾಜಿಸಲಾಗಿದೆ. ಇನ್್ಸಪೆಕ್ಟರ್ ರಾಜು ಮತ್ತು ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.