Saturday, January 4, 2025
Homeರಾಷ್ಟ್ರೀಯ | National2024ರಲ್ಲಿ ನಮ್ಮನ್ನಗಲಿದ ಮಹಾ ಚೇತನಗಳು

2024ರಲ್ಲಿ ನಮ್ಮನ್ನಗಲಿದ ಮಹಾ ಚೇತನಗಳು

Great souls who passed away in 2024

ಹೊಸ ವರ್ಷಚಾರಣೆಯ ಸಂಭ್ರದಲ್ಲಿರುವ ಜನತೆ ದೇಶದ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ನಮನ್ನು ಬಿಟ್ಟು ಶಾಶ್ವತವಾಗಿ ಅಗಲಿದ ಗಣ್ಯರನ್ನು ಎಂದಿಗೂ ಮರೆಯುವಂತಿಲ್ಲ. ಕಳೆದ ವರ್ಷ ದೇಶಕ್ಕೆ ಒಂದಲ್ಲೊಂದು ರೀತಿಯಲ್ಲಿ ಸೇವೆ ಸಲ್ಲಿಸಿದ್ದವರು ನಮನ್ನು ಬಿಟ್ಟು ಶಾಶ್ವತವಾಗಿ ಆಗಲಿದ್ದಾರೆ. ರಾಜಕೀಯ, ವ್ಯಾಪಾರ, ಉದ್ಯಮ, ಸಂಸ್ಕೃತಿ, ಮನರಂಜನೆ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಅನೇಕ ಗಣ್ಯರು ಇಲ್ಲದಿರಬಹುದು. ಆದರೆ ಅವರು ಸಲ್ಲಿಸಿದ ಸೇವೆ ಸದಾ ಸರಣೀಯ.

ಡಾ. ಮನಮೋಹನ್ ಸಿಂಗ್:
ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ 1971ರಲ್ಲಿ ವಾಣಿಜ್ಯ ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರನ ಸ್ಥಾನದೊಂದಿಗೆ ಭಾರತ ಸರ್ಕಾರದಲ್ಲಿ ತಮ ಪ್ರಯಾಣವನ್ನು ಪ್ರಾರಂಭಿಸಿದರು. ಈ ವರ್ಷದ ಆರಂಭದಲ್ಲಿ ಸದನದಲ್ಲಿ 33 ವರ್ಷಗಳ ಸುದೀರ್ಘ ಸೇವೆಯ ನಂತರ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು.

ಭಾರತದ ಮಾಜಿ ಪ್ರಧಾನಿ, ಅರ್ಥ ಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ದೀರ್ಘಕಾಲದ ಉಸಿರಾಟ ಸಮಸ್ಯೆಯಿಂದ 2024ರ ಡಿ.26ರಂದು ದೆಹಲಿಯ ಏಮ್ಸೌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್‌್ಸ (ಯುಪಿಎ) ಅಡಿಯಲ್ಲಿ ಸಮಿಶ್ರ ಸರ್ಕಾರವನ್ನು ಮುನ್ನಡೆಸುವ ಮೂಲಕ ಸತತ ಎರಡು ಬಾರಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಅವರು 1991 ರಲ್ಲಿ ಪಿವಿ ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಭಾರತದ ಆರ್ಥಿಕ ಉದಾರೀಕರಣದ ವಾಸ್ತುಶಿಲ್ಪಿಯಾಗಿದ್ದರು. 2005ರಲ್ಲಿ ಮನಮೋಹನ್ ಸಿಂಗ್ ಸಂಕೀರ್ಣ ಮಾರಾಟ ತೆರಿಗೆಯ ಬದಲು ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಅನ್ನು ಜಾರಿಗೊಳಿಸಿದರು. ಇದು ದೇಶದ ಅರ್ಥ ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿತ್ತು.

ನರಸಿಂಹ ರಾವ್ ನೇತೃತ್ವದ ಆಡಳಿತದಲ್ಲಿ ಹಣಕಾಸು ಸಚಿವರಾಗುವ ಮೊದಲು ಮನಮೋಹನ್ ಸಿಂಗ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದರು.1932ರ ಸೆಪ್ಟೆಂಬರ್ 26ರಂದು ಅವಿಭಜಿತ ಭಾರತದ ಪಂಜಾಬ್ನ ಹಳ್ಳಿಯೊಂದರಲ್ಲಿ ಜನಿಸಿದ ಮನಮೋಹನ್ ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು ಮತ್ತು ನಂತರ ಆಕ್ಸ್ಫರ್ಡ್ ಡಿ.ಫಿಲ್. ಪಡೆಯುವ ಮೊದಲು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರು

ರತನ್ ಟಾಟಾ:
ರಾಷ್ಟ್ರೀಯ ಐಕಾನ್ ಎಂದು ಕರೆಯಲ್ಪಡುವ ರತನ್ ಟಾಟಾ ಅವರು 20 ವರ್ಷಗಳಿಗೂ ಹೆಚ್ಚು ಕಾಲ ಟಾಟಾ ಗ್ರೂಪ್ ಅಧ್ಯಕ್ಷರಾಗಿದ್ದರು. ಸರಳ ವ್ಯಕ್ತಿತ್ವದ ಖ್ಯಾತ ಭಾರತೀಯ ಕೈಗಾರಿಕೋದ್ಯಮಿ ರತನ್ ಟಾಟಾ 2024ರ ಅ.09ರಂದು ಅನಾರೋಗ್ಯದಿಂದ ವಿಧಿವಶರಾದರು. ಟಾಟಾ ಗ್ರೂಪ್ ಹಾಗೂ ಟಾಟಾ ಸನ್‌್ಸನ ಅಧ್ಯಕ್ಷರಾಗಿದ್ದ ರತನ್ ಟಾಟಾ ಅನೇಕ ಸಾಮಾಜಿಕ ಸೇವೆಗಳಲ್ಲಿ ತಮನ್ನು ತಾವು ತೊಡಗಿಸಿಕೊಂಡಿದ್ದರು. ಇವರ ಸೇವೆಗಳನ್ನು ಗುರುತಿಸಿ 2000ನೇ ಇಸವಿಯಲ್ಲಿ ಭಾರತ ಸರ್ಕಾರ ಪದಭೂಷಣ ಹಾಗೂ 2008ರಲ್ಲಿ ಪದವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಕಾರ್ನೆಲ್ ವಿಶ್ವವಿದ್ಯಾನಿಲಯದಿಂದ ವಾಸ್ತುಶಿಲ್ಪದಲ್ಲಿ ಪದವಿ ಪಡೆದ ನಂತರ, ರತನ್ ಟಾಟಾ ಭಾರತಕ್ಕೆ ಮರಳಿದರು. 1962ರಲ್ಲಿ ಅವರ ಮುತ್ತಜ್ಜ ಜಮ್ಷೆಡ್ಜಿ ಟಾಟಾ ಸ್ಥಾಪಿಸಿದ ಸಂಸ್ಥೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು 1991ರಲ್ಲಿ ತಮ ಚಿಕ್ಕಪ್ಪ ಜೆಆರ್ಡಿ ಟಾಟಾ ಅವರಿಂದ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಬಳಿಕ ಟಾಟಾ ಗ್ರೂಪ್ ಅನ್ನು ಸಂಪೂರ್ಣ ಹೊಸ ಎತ್ತರಕ್ಕೆ ಕೊಂಡೊಯ್ದರು. ವಿಶ್ವದ ಅತ್ಯಂತ ಅಗ್ಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ನ್ಯಾನೋವನ್ನು ಅವರ ನೇತೃತ್ವದಲ್ಲಿ ಆರಂಭಿಸಲಾಯಿತು. ಪದಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ರತನ್ ಟಾಟಾ ಅವರ ಕೊಡುಗೆ ಕೈಗಾರಿಕೋದ್ಯಮಿಯಾಗಿ ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲೂ ಗಮನಾರ್ಹವಾದುದು.

ಎಸ್ಎಂ ಕೃಷ್ಣ:
ವಿಶ್ವ ಭೂಪಟದಲ್ಲಿ ಬೆಂಗಳೂರಿಗೆ ಮನ್ನಣೆ ದೊರಕಿಸಿಕೊಟ್ಟ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಡಿಸೆಂಬರ್ 10ರಂದು ನಿಧನರಾದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲರಾಗಿದ್ದ ಎಸ್ಎಂ.ಕೃಷ್ಣ ಅವರು 6 ತಿಂಗಳಿನಿಂದ ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿದ್ದರು. ಮೂಲತಃ ಮಂಡ್ಯ ಜಿಲ್ಲೆಯವರಾದ ಕೃಷ್ಣ 1932ರ ಮೇ.1ರಂದು ಜನಿಸಿದರು. 1994ರ ವಿಧಾನಸಭೆ ಚುನಾವಣೆಯಲ್ಲಿ ಪಾಂಚಜನ್ಯ ಮೊಳಗಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಎಸ್ಎಂ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದರು.

ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದ ಎಸ್ಎಂ ಕೃಷ್ಣ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಆದರೆ, ತಮ ರಾಜಕೀಯ ಜೀವನದ ಕೊನೆಯ ವರ್ಷಗಳನ್ನು ಬಿಜೆಪಿಯಲ್ಲಿ ಕಳೆದರು. 1932ರ ಮೇ 1ರಂದು ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಜನಿಸಿದ ಎಸ್ಎಂ ಕೃಷ್ಣ ಮೈಸೂರಿನ ಮಹಾರಾಜ ಕಾಲೇಜಿನಿಂದ ಪದವಿ ಪಡೆದರು. ಶಾಸಕರಾಗಿ, ಸಂಸದರಾಗಿ, ಕರ್ನಾಟಕದ ಮುಖ್ಯಮಂತ್ರಿಯಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಎಸ್ಎಂ ಕೃಷ್ಣ ಕರ್ನಾಟಕದ ಅದರಲ್ಲೂ ಬೆಂಗಳೂರಿನ ಬೆಳವಣಿಗೆಗೆ ನೀಡಿದ ಕೊಡುಗೆ ಗಣನೀಯವಾದುದು.

ಸೀತಾರಾಮ್ ಯೆಚೂರಿ:
ಹಿರಿಯ ರಾಜಕಾರಣಿ ಹಾಗೂ ಸಿಪಿಐ ಹಿರಿಯ ಮುಖಂಡ ಸೀತಾರಾಮ್ ಯೆಚೂರಿ 2024ರ ಸೆ.12ರಂದು ನಿಧನರಾದರು. 1974ರಲ್ಲಿ ಸ್ಟೂಡೆಂಟ್‌್ಸ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಸೇರಿದಾಗ ಯೆಚೂರಿಯವರ ರಾಜಕೀಯ ಪಯಣ ಆರಂಭವಾಯಿತು. ಆ ಬಳಿಕ ರಾಜಕೀಯದ ಮೆಟ್ಟಿಲುಗಳನ್ನು ಅತ್ಯಂತ ಶೀಘ್ರವಾಗಿ ಏರಿದ್ದರು. ಮೂರು ಬಾರಿ ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದ ಸೀತಾರಾಮ್ ಯೆಚೂರಿ ಬಳಿಕ, ಎಸ್ಎಫ್ಐನ ಅಖಿಲ ಭಾರತ ಅಧ್ಯಕ್ಷರಾಗಿದ್ದರು. 1984ರಲ್ಲಿ, ಅವರು ಸಿಪಿಐ(ಎಂ) ಕೇಂದ್ರ ಸಮಿತಿಗೆ ಆಯ್ಕೆಯಾದ ಅವರು ಬಳಿಕ ಶಾಶ್ವತ ಆಹ್ವಾನಿತರೆನಿಸಿಕೊಂಡಿದ್ದರು. 1992ರ ಹೊತ್ತಿಗೆ, ಅವರು ಪಾಲಿಟ್ಬ್ಯೂರೋ ಸದಸ್ಯರಾಗಿದ್ದರು, ಅವರು ಮೂರು ದಶಕಗಳ ಕಾಲ ಈ ಸ್ಥಾನವನ್ನು ಹೊಂದಿದ್ದರು.

ರೋಹಿತ್ ಬಾಲ್:
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದ ಖ್ಯಾತ ವಸ್ತ್ರ ವಿನ್ಯಾಸಕ ರೋಹಿತ್ ಬಾಲ್ ನ.1ರ ತಡರಾತ್ರಿ ಅಸುನೀಗಿದರು. ಭಾರತದ ಮೊದಲ ಫ್ಯಾಷನ್ ಡಿಸೈನರ್ಗಳಲ್ಲಿ ಒಬ್ಬರಾಗಿದ್ದ ರೋಹಿತ್ ಬಾಲ್, 1990ರ ದಶಕದಲ್ಲಿ ವಸ್ತ್ರವಿನ್ಯಾಸ ವೃತ್ತಿಯನ್ನು ಕೈಗೆಟುಕುವ ಹಾಗೂ ಗ್ಲಾಮರಸ್ ವೃತ್ತಿಯಾಗಿ ಜನಪ್ರಿಯಗೊಳಿಸಿದ್ದರು. ಭಾರತದ ಮೊದಲ ಫ್ಯಾಷನ್ ಡಿಸೈನರ್ಗಳಲ್ಲಿ ಒಬ್ಬರಾಗಿದ್ದರು. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಮಕಾಲೀನ ಟ್ರೆಂಡ್ನೊಂದಿಗೆ ಸಂಯೋಜಿಸುವಲ್ಲಿ ಅವರು ಹೆಸರುವಾಸಿಯಾಗಿದ್ದರು.

ಜಾಕೀರ್ ಹುಸೇನ್:
ಜಾಕೀರ್ ಹುಸೇನ್ 1951ರ ಮಾರ್ಚ್ 9ರಂದು ಮುಂಬೈನಲ್ಲಿ ಜನಿಸಿದರು. ತನ್ನ ಕಲೆಯ ಪತಾಕೆಯನ್ನು ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಹಾರಿಸಿದ್ದರು. ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರಿಗೆ ಭಾರತವು ಪದವಿಭೂಷಣ, ಪದಭೂಷಣ ಮತ್ತು ಪದಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ಗೆ ಪಾತ್ರರಾಗಿದ್ದರು. ಜಾಕೀರ್ ಹುಸೇನ್ಗೆ 2009ರಲ್ಲಿ ಗ್ರ್ಯಾಮಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 1988ರಲ್ಲಿ ಪದಶ್ರೀ ಮತ್ತು 2002ರಲ್ಲಿ ಪದಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು. 1990 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಬಲಾ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಇವರು 2024ರ ಡಿ.15ರಂದು ಇಹಲೋಕ ತ್ಯಜಿಸಿದರು.

ಶ್ಯಾಮ್ ಬೆನಗಲ್:
ಭಾರತೀಯ ಚಿತ್ರರಂಗದ ಹಿರಿಯ ನಿರ್ದೇಶಕ ಶ್ಯಾಮ್ ಬೆನಗಲ್ ಅನಂತ್ನಾಗ್ ನಟನೆಯ ಅಂಕುರ್, ಗಿರೀಶ್ ಕಾರ್ನಾಡ್ ಅಭಿನಯದ ನಿಶಾಂತ್, ಸಿತಾ ಪಾಟೀಲ್ ನಟನೆಯ ಮಂಥನ್, ಭೂಮಿಕಾ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಪ್ಯಾರಲಲ್ ಸಿನಿಮಾ ಮೂಲಕ ಅವರು ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು.

18 ಬಾರಿ ಶ್ಯಾಮ್ ಬೆನಗಲ್ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಅವರಿಗೆ ಗೌರವಿಸಲಾಗಿತ್ತು. ಫಿಲ್ ಫೇರ್, ನಂದಿ ಅವಾರ್ಡ್ ಮುಂತಾದ ಗೌರವಗಳು ಕೂಡ ಅವರಿಗೆ ಸಿಕ್ಕಿದ್ದವು. ಪದಶ್ರೀ, ಪದ ಭೂಷಣ ಪ್ರಶಸ್ತಿಗಳು ಸಹ ಶ್ಯಾಮ್ ಬೆನಗಲ್ ಅವರ ಮುಡಿಗೇರಿದ್ದವು. ರಿಯಲಿಸ್ಟಿಕ್ ಸಿನಿಮಾಗಳ ಮೂಲಕ ಶ್ಯಾಮ್ ಬೆಗನಲ್ ಅವರು ಹೆಸರುವಾಸಿ ಆಗಿದ್ದರು. ಡಿ.23ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ದ್ವಾರಕೀಶ್:
ಕರ್ನಾಟಕದ ಕುಳ್ಳ ಎಂದೇ ಫೇಮಸ್ ಆಗಿದ್ದ ಹಿರಿಯ ನಟ, ನಿರ್ಮಾಪಕ ನಿರ್ದೇಶಕ ದ್ವಾರಕೀಶ್ ಏ.16ರಂದು ಇಹಲೋಕ ತ್ಯಜಿಸಿದರು. 81 ವರ್ಷ ವಯಸ್ಸಿನ ದ್ವಾರಕೀಶ್ ಅವರು ವಯೋಸಹಜ ಕಾಯಿಲೆಯಿಂದ ಬಳುತ್ತಿದ್ದರು. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಬಾಲಕೃಷ್ಣ, ಅಶ್ವತ್‌್ಥ, ಸೇರಿದಂತೆ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ಅಭಿನಯಿಸಿದ ಕೀರ್ತಿ ದ್ವಾರಕೀಶ್ ಅವರಿಗೆ ಸಲ್ಲುತ್ತದೆ. 1964ರಲ್ಲಿ ವೀರಸಂಕಲ್ಪ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದ ದ್ವಾರಕೀಶ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. 40ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿರುವ ಇವರು 15ಕ್ಕೂ ಹೆಚ್ಚು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ.

ವರನಟ ಡಾ.ರಾಜ್ಕುಮಾರ್, ವಿಷ್ಣುವರ್ಧನ್ ಅವರಂತಹ ದಿಗ್ಗಜರ ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು. ಚಿತ್ರರಂಗದಲ್ಲಿ ಅವರ ಅಪಾರ ಸೇವೆ ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿತ್ತು.

ಅಪರ್ಣಾ:
ಅಪ್ಪಟ ಕನ್ನಡ ದಲ್ಲಿಯೇ ನಿರೂಪಣೆ ಮಾಡುತ್ತಿದ್ದ ಅಪರ್ಣಾ ಧ್ವನಿಗೆ ಮಾರು ಹೋಗ ದವರೇ ಇಲ್ಲ. ನನ್ನ ಗುರುತು ಕನ್ನಡ, ನನ್ನ ಅಸ್ತಿತ್ವ ಕನ್ನಡ ಎಂದು ಹೆಮೆಯಿಂದ ಹೇಳುತ್ತಿದ್ದ ಅಪರ್ಣಾ 2024ರ ಜುಲೈ 11ರಂದು ಶ್ವಾಸಕೋಶದ ಕ್ಯಾನ್ಸರ್ನಿಂದ ನಿಧನರಾದರು.

ನಿರೂಪಣೆಯಷ್ಟೇ ಅಲ್ಲದೇ ಮಸಣದ ಹೂವು, ಇನ್ಸ್ಪೆಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲೂ ಅಪರ್ಣಾ ನಟಿಸಿದ್ದರು.ನಮ ಮೆಟ್ರೋ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಧ್ವನಿ ನೀಡಿದ್ದ ಅಪರ್ಣಾ, ಮೂಡಲ ಮನೆ, ಮುಕ್ತ ಮುಕ್ತ ಮೊದಲಾದ ಧಾರಾವಾಹಿಗಳಲ್ಲೂ ನಟಿಸಿದ್ದರು. ದೀಪಾವಳಿ ಕಾರ್ಯಕ್ರಮದಲ್ಲಿ ಸತತ 8 ಗಂಟೆಗಳ ಕಾಲ ನಿರೂಪಣೆ ಮಾಡಿದ್ದ ಅಪರ್ಣಾ, 2013ರಲ್ಲಿ ಬಿಗ್ ಬಾಸ್ ಶೋ ನಲ್ಲಿಯೂ ಭಾಗವಹಿಸಿದ್ದರು.

ರಾಮೋಜಿರಾವ್:
ಆಂಧ್ರ ಪ್ರದೇಶದ ಗುಂಟೂರಿನ ಸಮೀಪದ ಪೆದಪರುಪುಡಿ ಗ್ರಾಮದಲ್ಲಿ 1936 ನವೆಂಬರ್ 16ರಂದು ರೈತ ಕುಟುಂಬದಲ್ಲಿ ಜನಿಸಿದ ರಾಮೋಜಿ ರಾವ್ ಸಾಧನೆ ಅಾಮಾನ್ಯ ವಾದದ್ದು. 2024 ಜೂನ್ 8ರಂದು ತಮ 87ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ತಾವು ಪ್ರವೇಶಿಸಿದ ಪ್ರತಿಯೊಂದು ಕ್ಷೇತ್ರಕ್ಕೂ ತಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದು, ಶಾಶ್ವತ ಪರಂಪರೆಯನ್ನೇ ಬಿಟ್ಟು ಹೋಗಿದ್ದಾರೆ. 1962ರಲ್ಲಿ ಮಾರ್ಗದರ್ಶಿ ಚಿಟ್ಫಂಡ್, 1974ರಲ್ಲಿ ಈನಾಡು, 1980ರಲ್ಲಿ ಪ್ರಿಯಾ ಫುಡ್‌್ಸ, 1980ರಲ್ಲಿ ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್‌್ಸ, 1983ರಲ್ಲಿ ಉಷಾಕಿರಣ್ ಮೂವೀಸ್, 1995ರಲ್ಲಿ ಈಟಿವಿ ವಾಹಿನಿಗಳು, 1996ರಲ್ಲಿ ರಾಮೋಜಿ ಫಿಲ್ ಸಿಟಿ, 2002ರಲ್ಲಿ ರಮಾದೇವಿ ಪಬ್ಲಿಕ್ ಸ್ಕೂಲ್ ಮತ್ತು 2019ರಲ್ಲಿ ಈಟಿವಿ ಭಾರತ್ ಸ್ಥಾಪಿಸಿದರು. ಇಂದಿಗೂ ಈ ಎಲ್ಲಾ ಸಂಸ್ಥೆಗಳು ಯಶಸ್ವಿಯಾಗಿ ನಡೆಯುತ್ತಿವೆ.

RELATED ARTICLES

Latest News