Saturday, April 26, 2025
Homeರಾಜ್ಯಗ್ರೇಟರ್‌ ಬೆಂಗಳೂರು ಮಾಡೇ ಮಾಡ್ತೀವಿ : ಡಿ.ಕೆ.ಶಿವಕುಮಾರ್‌

ಗ್ರೇಟರ್‌ ಬೆಂಗಳೂರು ಮಾಡೇ ಮಾಡ್ತೀವಿ : ಡಿ.ಕೆ.ಶಿವಕುಮಾರ್‌

Greater Bangalore will be built: D.K. Shivakumar

ಮೈಸೂರು,ಏ.25- ಕುಮಾರಸ್ವಾಮಿ ಅವರ ಕಾಲದಲ್ಲೇ 7 ಟೌನ್‌ ಶಿಪ್‌ ಮಾಡಲು ತೀರ್ಮಾನ ಆಗಿತ್ತು,ಅದಕ್ಕಾಗಿ 300 ಕೋಟಿ ಹಣ ಕೊಟ್ಟಿದ್ದರು,ಟೌನ್‌ ಶಿಪ್‌ ಪ್ಲಾನ್‌ ಅವರ ಕಾಲದಲ್ಲೇ ಆಗಿದ್ದು.ನಾನು ಡಿನೋಟಿಫಿಕೇಶ್‌ ಮಾಡಲು ಹೋಗಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.

ಬಿಡದಿ ಟೌನ್‌ ಶಿಪ್‌ಗೆ ರೈತರ ಭೂಮಿ ಕೈಬಿಡುವಂತೆ ಸಿಎಂಗೆ ದೇವೇಗೌಡರ ಪತ್ರಬರೆದ ಕುರಿತು ಮಾಧ್ಯಮದೊಂದಿಗೆ ಮಾತನಾಡಿ ಅವರು ಈ ಹಿಂದೆ ನನ್ನ ಮೇಲೆ ಏನೆಲ್ಲಾ ಹೇಳಿದ್ರು. ಅದೆಲ್ಲ ಇತಿಹಾಸ.ಟೌನ್‌ ಶಿಪ್‌ ಪಿತಾಮಹ ದೇವೇಗೌಡ ಹಾಗೂ ಕುಮಾರಸ್ವಾಮಿ,ಯಾರು ಏನೇ ಹೇಳಿದ್ರು ಗ್ರೇಟರ್‌ ಬೆಂಗಳೂರು ಮಾಡೇ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.
ಬೆಂಗಳೂರಿಗಿಂತ ಚೆನ್ನಾಗಿ 10 ಸಾವಿರ ಎಕರೆಯಲ್ಲಿ ಉತ್ತಮ ಸಿಟಿ ಮಾಡುತ್ತೇವೆ. ಇದು ಮಾಡೆಲ್‌ ಸಿಟಿ ಆಗುತ್ತೆ.ರೈತರು ಜಮೀನಿನ ಬದಲಾಗಿ ದುಡ್ಡು ತೆಗೆದುಕೊಳ್ಳಬಹುದು.ಇಲ್ಲದಿದ್ರೆ ಅಭಿವೃದ್ದಿ ಪಡಿಸಿದ ಭೂಮಿ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.

ಎರಡು ಬಾರಿ ಕುಮಾರಸ್ವಾಮಿ ಸಿಎಂ ಆದ್ರೂ ಯಾಕೆ ರೈತರ ಭೂಮಿ ಸ್ವಾಧೀನದಿಂದ ಕೈ ಬಿಡಲಿಲ್ಲ.ಈ ಬಗ್ಗೆ ದೇವೇಗೌಡರೇ ಹೇಳಲಿ,ಇದರಲ್ಲಿ ರಾಜಕೀಯ ಬೇಡ
ಇದೆಲ್ಲ ನಿಮ್ಮ ಮಗನೆ ಮಾಡಿದ್ದು, ನಿಮ್ಮ ಕಾಲದಲ್ಲೇ ಆಗಿದ್ದು ಎಂದು ಡಿಕೆಶಿ ಟಾಂಗ್‌ ನೀಡಿದರು. ಕಾವೇರಿ ನಮ್ಮ ಜೀವನದಿ, ತಾಯಿಯ ಆರತಿ ಮಾಡ್ಬೇಕು.ಹೀಗಾಗಿ ಕಾವೇರಿ ಆರತಿ ಮಾಡಲು ಮುಂದಾಗಿ ದ್ದೇವೆ.ವ್ಯವಸಾಯ ,ಕುಡಿಯಲು ನೀರು ಎಲ್ಲವನ್ನೂ ತಾಯಿ ಕೊಡುತ್ತಿದ್ದಾಳೆ.ರಾಜ್ಯಕ್ಕೆ ,ಎಲ್ಲರಿಗೂ ಒಳಿತಾಗಲಿ ಎಂದು ಆರತಿ ಮಾಡುತ್ತೇವೆ ಎಂದು ಹೇಳಿದರು.

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿ ನಾನು ಇಲ್ಲಿ ಯಾರ ಬಗ್ಗೆಯೂ ಬೊಟ್ಟು ಮಾಡಲ್ಲ ,ಯಾರ ವಿರುದ್ದವೂ ಮಾತನಾಡುವುದಿಲ್ಲ.ಇದು ರಾಜಕೀಯ ಮಾಡುವ ವಿಚಾರ ಅಲ್ಲ.ಯಾರು ಈ ವಿಚಾರದಲ್ಲಿ ಯಾರೂ ಕೂಡಾ ರಾಜಕೀಯ ಮಾಡಬಾರದು.ಪಕ್ಷದ ಅಧ್ಯಕ್ಷ ಹಾಗೂ ಡಿಸಿಎಂ ಆಗಿ ಹೇಳುತ್ತಿದ್ದೇನೆ ಎಂದರು.

ಹೊರದೇಶದಿಂದ ಬಂದು ಶಾಂತಿ ಕದಡುವ ಕೆಲಸ ಮಾಡಿದ್ದಾರೆ.ಅವರನ್ನು ಮುಗಿಸುವ ಕೆಲಸ ಆಗಬೇಕು.ಕೇಂದ್ರ ಸರ್ಕಾರ ಹೀಗಾಗಲೇ ಆ ಕೆಲಸ ಮಾಡಿದೆ.ಈ ವಿಚಾರವಾಗಿ ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದು ಸ್ಪಷ್ಟಪಡಿಸಿದರು.

ರಾಮನಗರ ಹೆಸರು ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ ,ಅದನ್ನು ಹೇಗೆ ಮಾಡಬೇಕು ಅಂತಾ ನನಗೆ ಗೊತ್ತು.ಮಾಡೇ ಮಾಡುತ್ತೇನೆ ಎಂದು ಸವಾಲು ಹಾಕಿದರು . ನಾವೇನು ಹೊರಗಿನಿಂದ ಬಂದವರಲ್ಲ. ನಮ್ಮ ಭೂಮಿ ನಮ್ಮ ನೆಲದ ಬಗ್ಗೆ ನಮಗೆ ಗೊತ್ತು.ಯಾರು ಅಪ್ಪ -ಅಮ್ಮನ ಹೆಸರು ಬದಲಾಯಿಸಲ್ಲ.ಅಫಿಡೆವಿಟ್‌ ಮಾಡಿಸಿ ಕೊಳ್ಳಬಹುದು ಅಷ್ಟೇ ಡಿ ಕೆ ಶಿವಕುಮಾರ್‌ ಬಗ್ಗೆ ಭಯನಾ , ಅಸೂಯೆನಾ,ಏನು ಅಂತಾ ಗೊತ್ತಿಲ್ಲ ಆದರೆ ನನ್ನ ಮೇಲೆ ಅತಿಯಾದ ಪ್ರೀತಿ ಮೈಸೂರಿನಲ್ಲಿ ಎಂದರು .

RELATED ARTICLES

Latest News