ಬೆಂಗಳೂರು, ಅ.25- ಬಿಬಿಎಂಪಿ ಹೋಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ ನಕಲಿ ಡಿಡಿಗಳ ಹಾವಳಿ ವಿಪರಿತವಾಗಿದೆ.ಕೆಲವು ಕಿಡಿಗೇಡಿಗಳು ಅನುದಾನದ ಹೆಸರಿನಲ್ಲಿ ನಾಗರಿಕರನ್ನು ವಂಚಿಸಿ ಅವರಿಗೆ ನಕಲಿ ಡಿಡಿ ವಿತರಿಸುತ್ತ ಭಾರಿ ವಂಚನೆ ಮಾಡುತ್ತಿರುವುದು ಹೆಚ್ಚಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿರುವ ಐದು ಪಾಲಿಕೆಗಳಿಂದ ಅನುದಾನ ಕೊಡಿಸ್ತೀವಿ ಅಂತ ಸಾರ್ವಜನಿಕರ ಬಳಿ ಹಣ ವಸೂಲಿ ಮಾಡುತ್ತಿರುವ ಗ್ಯಾಂಗ್ ಒಂದು ನಗರದಲ್ಲಿ ಸದ್ದಿಲ್ಲದೆ ಕಾರ್ಯಚರಣೆ ನಡೆಸುತ್ತಿರುವ ಬಗ್ಗೆ ಗೊತ್ತಾಗಿದೆ.ಪಾಲಿಕೆಯಿಂದ 3 ಲಕ್ಷ ರೂ.ಅನುದಾನ ಕೊಡಿಸ್ತಿವಿ ಎಂದು ಸಾರ್ವಜನಿಕರಿಂದ 50 ಸಾವಿರ ಲಂಚ ವಸೂಲಿ ಮಾಡಿ ನಂತರ ಅನುದಾನ ಬಂದಿದೆ ಎಂದು 3 ಲಕ್ಷ ರೂ.ಗಳ ನಕಲಿ ಡಿಡಿ ನೀಡಲಾಗುತ್ತಿದೆ.
ನೀವು ಬರೀ ಐವತ್ತು ಸಾವಿರ ನೀಡಿ ನಾವು ನಿಮಗೆ ಪಾಲಿಕೆಯಿಂದ ಮೂರು ಲಕ್ಷ ರೂ.ಗಳ ಡಿಡಿ ನೀಡ್ತಿವಿ. ಆ ಹಣವನ್ನು ಮರು ಪಾವತಿಸುವಂತಿಲ್ಲ ಎಂದು ವಂಚನೆ ನಡೆಸಲಾಗುತ್ತಿದೆ. ಪಾಲಿಕೆ ನೀಡುವಂತಹ ಡಿಡಿಗಳ ಮಾದರಿಯಲ್ಲಿ ಕಿಡಿಗೇಡಿಗಳು ನಕಲಿ ಡಿಡಿ ತಯಾರಿಸಿ ವಂಚಿಸುತ್ತಿದ್ದಾರೆ. ಅವರು ನೀಡುವ ಡಿಡಿಯಲ್ಲಿ ಪಾಲಿಕೆ ಆಯುಕ್ತರಗಳ ಸಹಿಯೂ ಇರುತ್ತದೆ. ಆದರೆ, ಅದು ನಕಲಿ ಸಹಿ ಎನ್ನುವುದು ಡಿಡಿ ಪಡೆದು ಬ್ಯಾಂಕ್‌ಗೆ ಹೋದ ನಂತರ ಮಾತ್ರ ಗೊತ್ತಾಗುತ್ತಿದೆ.
ಪಾಲಿಕೆ ಅಯುಕ್ತರ ನಕಲಿ ಸಹಿ ಮಾತ್ರವಲ್ಲ, ಅಕೌಂಟ್ ಸೆಕ್ಷನ್ ಅಧಿಕಾರಿಗಳ ಸಹಿ ಕೂಡ ನಕಲಿಯಾಗಿರುತ್ತದೆ. ಇದೆ ರೀತಿಯಲ್ಲಿ ಹಲವಾರು ಮಂದಿ ಅಮಾಯಕರಿಗೆ ನಕಲಿ ಡಿಡಿ ವಿತರಣೆ ಮಾಡಿ ವಂಚಿಸಲಾಗಿದೆ. ಡಿಡಿ ಪಡೆದು ಬ್ಯಾಂಕ್‌ಗೆ ಹಾಕಿದಾಗ ಅದು ಬೌನ್ಸ್ ಆಗುತ್ತದೆ. ಅಯ್ಯೋ ಇದೆನಾಯ್ತು ಎಂದು ಪಾಲಿಕೆ ಬಂದು ವಿಚಾರಿಸಿದಾಗ ರೀ ಅದು ನಕಲಿ ಡಿಡಿ ರೀ ಅಷ್ಟು ಗೊತ್ತಾಗಲ್ವ ಎಂದು ಅಧಿಕಾರಿಗಳು ವಾಪಸ್ ಕಳುಹಿಸುತ್ತಿದ್ದಾರೆ.
ನಮ್ಮಲ್ಲಿ ಯಾವುದೇ ರೀತಿಯ ಹಣದ ರೂಪದಲ್ಲಿ ಅನುದಾನ ಕೊಡಲ್ಲ ಅಂತ ಅಧಿಕಾರಿಗಳು ಹೇಳಿ ಹೇಳಿ ಸಾಕಾಗಿದೆ. ಇತ್ತ ಹಣ ಕೊಟ್ಟು ತಗ್ಲಕೊಂಡ ಹತ್ತರೂ ಜನ..ಅಗದ್ರೆ ..ಬೋಗಸ್ ಡಿಡಿ ನೀಡಿ ಜನರಿಗೆ ವಂಚನೆ ಮಾಡ್ತಿರೋದು ಯಾರು..? ಜಿಬಿಎ ಅಧಿಕಾರಿಗಳಿಗೆ ಈ ವಿಷಯ ಗೋತ್ತಿಲ್ವ..? ಎಂದು ಪ್ರಶ್ನಿಸುತ್ತಿದ್ದಾರೆ.
ಇಷ್ಟೆಲ್ಲಾ ಆದರೂ ಜಿಬಿಎ ಅಧಿಕಾರಿಗಳು ಮಾತ್ರ ನಕಲಿ ಡಿಡಿ ವಿಷಯವನ್ನು ಪೊಲೀಸರ ಗಮನಕ್ಕೆ ತಾರದಿರುವುದು ಮತ್ತಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.ಈ ಕುರಿತಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಗತ್ಯ ಕ್ರಮ ಕೈಗೊಂಡು ಅಮಾಯಕ ಜನರನ್ನು ವಂಚಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.
