ಬೆಂಗಳೂರು : ಗೃಹಲಕ್ಷ್ಮಿ ಯೋಜನೆ ಅನುದಾನ ಬರುತ್ತಿಲ್ಲ ಎಂದು ಪೌರಕಾರ್ಮಿಕ ಮಹಿಳೆ ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಅಸಮಾಧಾನ ತೋಡಿಕೊಂಡ ಘಟನೆ ನಡೆದಿದೆ. ಬಿಬಿಎಂಪಿಯಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿಯವರನ್ನು ಆಹ್ವಾನಿಸಲು ಪೌರಕಾರ್ಮಿಕರ ನಿಯೋಗ ಇಂದು ಡಿ.ಕೆ.ಶಿವಕುಮಾರ್ ಅವರ ಮನೆಗೆ ಬಂದಿತ್ತು.
ಈ ವೇಳೆ ಇದೇ 12 ರಂದು ಕಾರ್ಯಕ್ರಮ ನಿಗದಿಯಾಗಿದೆ ಎಂದು ನಿಯೋಗದ ಸದಸ್ಯರು ತಿಳಿಸಿದರು. ನೀವು ಕಾರ್ಯಕ್ರಮ ಏರ್ಪಡಿಸುವಾಗ ನನ್ನ ಸಮಯ ನೋಡಿಕೊಂಡು ನಿಗದಿ ಮಾಡಬೇಕು. ನಿಮ್ಮಷ್ಟಕ್ಕೆ ನೀವೇ ದಿನಾಂಕ ನಿಗದಿ ಮಾಡಿದರೆ ನಮಗೆ ಬಿಡುವಿರುವುದಿಲ್ಲ. ಬರದೇ ಇದ್ದರೆ ನಿಮಗೆ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಭಯೋತ್ಪಾದಕರು, ಜಿಹಾದಿಗಳು ಮತ್ತು ಗುಂಡಾಗಳ ತಾಣವಾಗಿದೆ : ಬಿಜೆಪಿ ವಾಗ್ದಾಳಿ
ಈ ವೇಳೆ ನಿಯೋಗದ ಮುಖಂಡರು ಮುಂದಿನ ಬಾರಿ ನಿಮ್ಮ ಸಮಯ ನೋಡಿಕೊಂಡೇ ಸಮಯ ನಿಗದಿ ಮಾಡುತ್ತೇವೆ. ಈ ಬಾರಿ ಬಂದು ಹೋಗಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮುಂದುವರೆದ ನಿಯೋಗದ ಸದಸ್ಯರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೌರಕಾರ್ಮಿಕರನ್ನು ಖಾಯಂ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ಖಾಯಂ ಮಾಡಿ ಎಂದು ಬೇಡಿಕೆ ಮುಂದಿಟ್ಟರು.
ಈ ಹಂತದಲ್ಲಿ ಪ್ರತಿಮನೆಯ ಯಜಮಾನಿಗೆ 2,000 ರೂ. ನೀಡುವ ಗೃಹಲಕ್ಷ್ಮಿ ಸೇರಿದಂತೆ ಪಂಚಖಾತ್ರಿ ಯೋಜನೆಗಳನ್ನು ಜಾರಿಗೊಳಿಸ ಲಾಗುತ್ತಿದೆ. ಹೀಗಾಗಿ ಸ್ವಲ್ಪ ತಾಳ್ಮೆಯಿಂದಿರಿ. ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆಯನ್ನು ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದರು.
ಒಬಿಸಿ ಮೀಸಲಾತಿ ನಿರ್ಧಾರದಿಂದ ಕಾಂಗ್ರೆಸ್ ಚುನಾವಣಾ ಹಾದಿ ಸುಗಮ
ಈ ವೇಳೆ ನಿಯೋಗದಲ್ಲಿದ್ದ ಮಹಿಳೆಯೊಬ್ಬರು, ಎಲ್ಲಿ ಸ್ವಾಮಿ ನಮಗೆ ಹಣ ಬರುತ್ತಿಲ್ಲ ಎಂದು ಹೇಳಿದರು. ಇದರಿಂದ ಸಿಡಿಮಿಡಿಗೊಂಡ ಡಿ.ಕೆ.ಶಿವಕುಮಾರ್, ಎಲ್ಲರಿಗೂ ಹಣ ಬರುತ್ತಿದೆ. ಯಾರು ದಾಖಲೆಗಳನ್ನು ಸರಿಯಾಗಿ ಕೊಟ್ಟಿಲ್ಲವೋ ಅವರಿಗೆ ಬಂದಿಲ್ಲ. ನೀವು ಮೊದಲು ದಾಖಲೆಗಳನ್ನು ಸರಿಪಡಿಸಿಕೊಳ್ಳಿ ಎಂದು ಖಾರವಾಗಿ ಹೇಳಿದ್ದಲ್ಲದೆ, ಎಲ್ಲಾ ಮಹಿಳೆಯರೂ ಉಚಿತವಾಗಿ ಬಸ್‍ನಲ್ಲಿ ಓಡಾಡುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಪೌರ ಕಾರ್ಮಿಕರ ದಿನಾಚರಣೆಗೂ ಮುನ್ನ 10 ಅಥವಾ 12 ರಂದು ಯಾರಾದರೂ ಬಂದು ನನಗೆ ನೆನಪಿಸಿ ಎಂದು ನಿಯೋಗದ ಸದಸ್ಯರಿಗೆ ಹೇಳಿ ಡಿ.ಕೆ.ಶಿವಕುಮಾರ್ ನಿರ್ಗಮಿಸಿದರು.