ಕೋಲ್ಕತ್ತಾ, ಜು.20- ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ಹೆಚ್ಚು ಬಲಿಷ್ಠವಾದ ಭೂಕುಸಿತ ಮುನ್ಸೂಚನೆ ಮಾದರಿ ಮತ್ತು ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ತಜ್ಞರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.
ರಾಷ್ಟ್ರೀಯ ಭೂಕುಸಿತ ಮುನ್ಸೂಚನೆ ಕೇಂದ್ರದ (ಎನ್‌ಎಲ್‌ಎಫ್‌ಸಿ) ಮೊದಲ ವಾರ್ಷಿಕೋತ್ಸವದ ಸರಣಾರ್ಥ ನಡೆದ ಕಾರ್ಯಾಗಾರದಲ್ಲಿ ಜಿಎಸ್‌ಐ ಮಹಾನಿರ್ದೇಶಕ ಅಸಿತ್ ಸಹಾ ಮಾತನಾಡಿ, ಹೆಚ್ಚು ಬಲಿಷ್ಠವಾದ ಭೂ ಕುಸಿತ ಮುನ್ಸೂಚನೆ ಮಾದರಿ ಮತ್ತು ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ತಜ್ಞ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಸಂಶೋಧನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
2030ರ ವೇಳೆಗೆ ರಾಷ್ಯವ್ಯಾಪಿ ಪ್ರಾದೇಶಿಕ ಭೂ ಕುಸಿತ ಮುನ್ಸೂಚನಾ ವ್ಯವಸ್ಥೆಯನ್ನು (ಎಲ್‌ಇಡಬ್ಲ್ಯೂಎಸ್) ಕಾರ್ಯಗತಗೊಳಿಸುವ ಸಂಸ್ಥೆಯ ದೀರ್ಘಕಾಲೀನ ದೃಷ್ಟಿಕೋನವನ್ನು ಪ್ರತಿಪಾದಿಸಿದ್ದಾರೆ.
ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಜಿಎಸ್‌ಐ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದ್ದು, ಭೂಕುಸಿತ ಮುನ್ಸೂಚನಾ ಬುಲೆಟಿನ್‌ಗಳನ್ನು ನೀಡಲು ಪ್ರಾರಂಭಿಸುತ್ತದೆ ಎಂದು ಹೇಳಿದ್ದಾರೆ.
ಭೂಕುಸಿತದ ಮುನ್ಸೂಚನೆ ವ್ಯಾಪ್ತಿಯನ್ನು ಆರು ರಾಜ್ಯಗಳಲ್ಲಿ 16 ಜಿಲ್ಲೆಗಳಿಂದ 2025ರ ವೇಳೆಗೆ ಎಂಟು ರಾಜ್ಯಗಳ 21 ಜಿಲ್ಲೆಗಳಿಗೆ ವಿಸ್ತರಿಸಿದ್ದಕ್ಕಾಗಿ ಶ್ಲಾಘಿಸಿದರು.
ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಮುನ್ಸೂಚನೆ ವ್ಯವಸ್ಥೆಗಳಲ್ಲಿ ಸಂಯೋಜಿಸುವಲ್ಲಿ ಪ್ರವರ್ತಕ ಪ್ರಯತ್ನಗಳು ಮತ್ತು ಡ್ಯಾಶ್‌ಬೋರ್ಡ್, ಭೂಸಂಕೇತ್ ಪೋರ್ಟಲ್ ಮತ್ತು ಭೂಸ್ಖಲನ್ ಅಪ್ಲಿಕೇಶನ್‌ನ ಯಶಸ್ವಿ ನವೀಕರಣಗಳನ್ನು ಅವರು ಪುನರಚ್ಚರಿಸಿದರು.ಇದು ನೈಜ-ಸಮಯದ ಮೇಲ್ವಿಚಾರಣೆ ಮತ್ತು ನಿರ್ಣಾಯಕ ಭೂಕುಸಿತ ಮುನ್ಸೂಚನೆಯನ್ನು ಸಾರ್ವಜನಿಕರಿಗೆ ನೀಡುವಲ್ಲಿ ಹೆಚ್ಚಿನ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದರು.
- ಕಳ್ಳತನ ಮಾಡಿ ರೈಲು, ಬಸ್ಗಳಲ್ಲಿ ಪರಾರಿಯಾಗುತ್ತಿದ್ದ ಖತರ್ನಾಕ್ ಮನೆಗಳ್ಳರ ಸೆರೆ
- ಮೈಸೂರು : ರೈತನನ್ನು ಬಲಿ ಪಡೆದಿದ್ದ ನರ ಭಕ್ಷಕ ಹುಲಿ ಸೆರೆ
- ಪಿಡಿಒ ಕಿರುಕುಳ ಆರೋಪ, ಲೈಬ್ರರಿಯನ್ ಆತ್ಮಹತ್ಯೆ
- ಕಳ್ಳರು ಕದ್ದಿದ್ದ 1949ಕ್ಕೂ ಹೆಚ್ಚು ಮೊಬೈಲ್ಗಳ ವಶ, 42 ಆರೋಪಿಗಳ ಬಂಧನ
- ಆನೇಕಲ್ ಬಳಿ ಅಚ್ಚರಿ ಮೂಡಿಸಿದ ದೇಶದ್ರೋಹಿಗಳ ‘ಪಾಕಿಸ್ತಾನ್ ಜಿಂದಾಬಾದ್’ ವೈಫೈ ಐಡಿ
