ಬೆಂಗಳೂರು, ಅ.11-ಶಾಸಕರ ಭವನದ ವಾಹನಗಳ ಬಾಡಿಗೆಯ ಮೇಲೆ ವಿಧಿಸುತ್ತಿದ್ದ ಜಿಎಸ್ಟಿ ಪ್ರಮಾಣವನ್ನು ಶೇ.18ರಿಂದ ಶೇ.5ಕ್ಕೆ ಇಳಿಸಿ ಪರಿಷ್ಕರಣೆ ಮಾಡಲಾಗಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವಾಲಯವು ಜಿಎಸ್ಟಿ ದರವನ್ನು ಪರಿಷ್ಕರಣೆ ಮಾಡಿರುವ ಹಿನ್ನೆಲೆಯಲ್ಲಿ ಸೆ.22ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿದೆ. ಹೀಗಾಗಿ ನಿನ್ನೆಯಿಂದ ಜಾರಿಗೆ ಬರುವಂತೆ ವಾಹನಗಳ ಬಾಡಿಗೆ ಆಧಾರದ ಮೇಲೆ ಒದಗಿಸುವ ಸೇವೆಗೆ ಇದ್ದ ಜಿಎಸ್ಟಿ ದರ ಇಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸಕರ ಭವನದಿಂದ ಶಾಸಕರು, ಮಾಜಿ ಶಾಸಕರು ಹಾಗೂ ಅಧಿಕಾರಿಗಳ ಉಪಯೋಗಕ್ಕಾಗಿ ಒದಗಿಸಲಾಗುತ್ತಿರುವ ವಾಹನಗಳ ಬಾಡಿಗೆಯ ಮತ್ತು ನಿರೀಕ್ಷಣಾ ಶುಲ್ಕ ಸೇರಿ ಒಟ್ಟಾರೆ ಬಿಲ್ನ ಮೊತ್ತದ ಮೇಲೆ ಶೇ.18ರ ಬದಲಿಗೆ ಶೇ.5ರಷ್ಟು ಜಿಎಸ್ಟಿ ವಿಧಿಸುವುದನ್ನು ನಿನ್ನೆಯಿಂದ ಜಾರಿಗೆ ದರಲಾಗಿದೆ. ಬಾಡಿಗೆ ದರ ಮತ್ತು ನಿರೀಕ್ಷಣಾ ದರದಲ್ಲಿ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.